ನಿನ್ನ ನೆನಪು
ನನ್ನ ಜೀವನದಲ್ಲಿ ನಿನ್ನಾಗಮನದ ಕಾರಣ
ನಾನೀಗ ತಿಳಿದೆ, ಗೆಳೆಯ! ನಾನೀಗ ತಿಳಿದೆ
ಸರಿ ತಪ್ಪುಗಳ ಅರಿವು ಮೂಡಿಸಲು ಬಂದ, ನೀ
ಅಪೂರ್ವ ಶಕ್ತಿಯಾಗಿದ್ದೆ! ಆಪದ್ಭಾಂಧವನಾಗಿದ್ದೆ
ನೀನಿರಲು ಜೊತೆಯಲಿ ಕಾಡಲಿಲ್ಲ
ಒಂದಿನಿತು ಚಿಂತೆ! ನಿನ್ನ ಅಗಲಿಕೆಯ ನಂತರ
ಇದ ನಾ ಅರಿತೆ! ಹೊತ್ತಿರುವೆ ನಾ ಇಂದು
ನೂರಾರು ಪ್ರಶ್ನೆಗಳ ಕಂತೆ!
ಜೀವನದ ಕೊನೆಯವರೆಗು ನೀ ನನ್ನೊಂದಿಗಿರುವೆ
ಎಂದು ನಾ ಭಾವಿಸಿದೆ! ನಿನ್ನ ನೋಯಿಸಿದೆ
ನಿನ್ನ ಸಂಪೂರ್ಣ ವ್ಯಕ್ತಿತ್ವದ ಪರಿಚಯವಾಗುವ ತನಕ
ನೀ, ಬಹುದೂರ ಸಾಗಿದ್ದೆ! ನನ್ನಿಂದ ನೀ ದೂರವಾದೆ
ಆ ಎಲ್ಲ ಕ್ಷಣಗಳು, ಗೆಳೆಯ! ನಿನ್ನೊಂದಿಗೆ ಕಳೆದ
ಆ ಎಲ್ಲ ಕ್ಷಣಗಳು, ಆಹಾ! ಎಷ್ಟು ಸೊಂಪು
ವರ್ತಮಾನದೊಂದಿಗೆ ಇರುವ ಬೆಸರವಿಷ್ಟೆ
ಆಯಿತಲ್ಲ ಗತಕ್ಷಣಗಳೆಲ್ಲ ಕೇವಲ ನೆನಪು
ನಿನ್ನ ನೆನಪು!
Rating
Comments
ಉ: ನಿನ್ನ ನೆನಪು
ಪವಿತ್ರಾ ಅವರಿಗೆ ನಮಸ್ಕಾರಗಳು. ಜೀವನದ ಪಯಣದಲ್ಲಿ ನೆನಪುಗಳು ಮಾತ್ರ ತುಂಬಾ ಮಹತ್ವದಾಗಿದೆ.ಒಳ್ಳೆಯ ನೆನಪುಗಳು ಜೀವನವನ್ನು ಮುಂದೆ ಸಾಗಿಸಲು ಸಹಾಯ ಮಾಡುತ್ತವೆ.ಕೆಟ್ಟ ನೆನಪುಗಳು ನಾವು ಮಾಡಿರುವ ತಪ್ಪುಗಳನ್ನು ಪುನರಾವರ್ತನೆ ಮಾಡಲು ತಡೆಯುತ್ತವೆ. ನೆನಪುಗಳ ಭಾವ ಮಧುರ.
In reply to ಉ: ನಿನ್ನ ನೆನಪು by Nagaraj Bhadra
ಉ: ನಿನ್ನ ನೆನಪು
ಧನ್ಯವಾದಗಳು..
ಉ: ನಿನ್ನ ನೆನಪು
ಸಾಲುಗಳು ತುಂಬಾ ಚೆನ್ನಾಗಿ ಮೂಡಿಬಂದಿವೆ....ನೆನಪುಗಳ ಮಾತು ಮಧುರ.....
---ಶ್ರೀ :-)
In reply to ಉ: ನಿನ್ನ ನೆನಪು by sriprasad82
ಉ: ನಿನ್ನ ನೆನಪು
ಧನ್ಯವಾದಗಳು..
ಉ: ನಿನ್ನ ನೆನಪು
Really nice poem. ☺️