ನಿನ್ನ ಕನಸು
ನಾನಿನ್ನೂ ಕನಸಿನ ಲೋಕದಿಂದ ಮುಕ್ತನಾಗಿಲ್ಲ
ನನ್ನ ದಿಟ್ಟಿಸಿ ನೋಡದ ಅವೇ ಚಂಚಲ ಕಣ್ಣುಗಳು
ಒಮ್ಮೆ ದಿಟ್ಟಿಸಿದರೆ ಕಾಣುವ ಸ್ನಿಗ್ಧ ಪ್ರೀತಿ, ಪ್ರೀತಿ ನಿನ್ನದು
ಮನಸ್ಸನ್ನು ಹುಚ್ಚೆಬ್ಬಿಸುವ ತಲೆ ಕೂದಲು
ಅದಕ್ಕೆ ಕಿಚ್ಚು ಹೊತ್ತಿಸುವ ಮೋಹಕ ಮುಂಗುರುಳು
ಸುಖದ ಕಡಲಿನಲ್ಲಿ ತೇಲಾಡಿಸುವ ಮಧುರ ಧ್ವನಿ
ಇನ್ನೂ ಕನಸಿನಿಂದ ಮುಕ್ತನಾಗಲು ಮನ ತಯಾರಾಗಿಲ್ಲ
ಒಮ್ಮೆ ಕಳೆದುಕೊಂಡರೆ ಮತ್ತೆ ಪಡೆಯುವೆನೋ ಇಲ್ಲವೋ
ಹೇಳು ಗೆಳತಿ, ಯಾಕೆ ಕನಸ ಕಾಣುವುದ ಬಿಡಬೇಕು ನಾನು
ಉಸಿರ ಮರೆತು ನಿರ್ವಾತದತ್ತ ತಿರುಗುವ ಧ್ಯಾನಿಯಂತೆ!
Rating