ನಿಮಗಿದು ಗೊತ್ತೆ?

ನಿಮಗಿದು ಗೊತ್ತೆ?

* ಜನಪ್ರಿಯ ಮೊಬೈಲ್ ಫೋನು ಕಂಪೆನಿ ನೋಕಿಯ ಪ್ರಾರಂಭದಲ್ಲಿ ಪೇಪರ್ ತಯಾರಿಕೆಯಲ್ಲಿ ತೊಡಗಿದ್ದ ಕಂಪೆನಿಯಾಗಿತ್ತಂತೆ. ಮಹಾಯುದ್ಧದ ಸಮಯದಲ್ಲಿ ಮಿಲಿಟರಿಗೆ ಬೂಟುಗಳನ್ನೂ ತಯಾರಿಸುತ್ತಿತ್ತಂತೆ! [:http://www.zfone.com/articles/a_id/54/history-of-nokia|(೧)]

*‌ ಭಾರತದಲ್ಲಿ ಬ್ರಿಟಿಷ್ ಅಧಿಪತ್ಯ ಸ್ಥಾಪಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ್ದ ರಾಬರ್ಟ್ ಕ್ಲೈವ್, ಎರಡು ಬಾರಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದನಂತೆ. ಈಸ್ಟ್ ಇಂಡಿಯಾ ಕಂಪೆನಿಯಲ್ಲಿ ಗುಮಾಸ್ತನಾಗಿ ಮೊದಲು ಅವನು ಕೆಲಸಕ್ಕೆ ಸೇರಿದ್ದಂತೆ!

* ಓಶೋ ಎಂದೇ ಹೆಚ್ಚು ಪರಿಚಿತರಾದ ಪುಣೆ ಮೂಲದ ರಜನೀಶ್ ರವರ ಶಿಷ್ಯರು ಅಮೇರಿಕದಲ್ಲಿ 'ರಜನೀಶಪುರಂ' ಎಂಬ ಒಂದು ಊರನ್ನೇ ಹುಟ್ಟುಹಾಕಿದ್ದರಂತೆ. [:http://www.ashe-prem.org/two/davisson.shtml|(೨)]

* ಕನ್ನಡಕ್ಕೆ ಹಲವು ವಿಶ್ವಕೋಶಗಳು ಬಳಸುವ ಹೆಸರು - 'ಕನರೀಸ್'! [:http://www.m-w.com/dictionary/Kanarese|(೩)]

[ಇನ್ನುಳಿದದ್ದು ನಾಳೆಗೆ - ನಿದ್ರೆ ಬರುತ್ತಿದೆ ;) ]

ಸೂ: ಕಿಟ್ಟೆಲ್ ಬಗ್ಗೆ ಯಾರ ಬಳಿಯಾದ್ರು ಹೆಚ್ಚು ಮಾಹಿತಿ ಉಂಟಾ?

Rating
No votes yet

Comments