ನಿಮ್ಮಲ್ಲಿ ಉತ್ತರವಿದೆಯೇ?

ನಿಮ್ಮಲ್ಲಿ ಉತ್ತರವಿದೆಯೇ?

ಮನುಷ್ಯನು ಸಾಮಾನ್ಯವಾಗಿ ೭೦-೮೦ ವರ್ಷಗಳ ಕಾಲ ಜೀವಿಸುತ್ತಾನೆ. ಆತನು ಯಾವುದೇ  ಖಾಯಿಲೆಗಳಿಲ್ಲದೆ, ಇತರರಿಗೆ ತೊಂದರೆ ನೀಡದಂತೆ ತನ್ನ ಮುಪ್ಪನ್ನು ಕಳೆದು ಇಹಲೋಕ ತ್ಯಜಿಸಬೇಕು ಎನ್ನುವ ಬಯಕೆ ಹೊಂದಿರುವುದು ಸಹಜ. ಆದರೆ ಈ ಸುಖವನ್ನು ಎಲ್ಲರೂ ಪಡೆದು ಬಂದಿರುವುದಿಲ್ಲ. ಇದಕ್ಕೆ ಕಾರಣ ಹುಡುಕಲು ಹೊರಟಲ್ಲಿ, ಈ ಲೌಕಿಕ ಜಗತ್ತಿನಲ್ಲಿ ಉತ್ತರ ದೊರೆಯುವುದು ಕಷ್ಟ.


ಸಾಮಾನ್ಯವಾಗಿ ಒಬ್ಬ ವ್ಯಕ್ತಿಯು ತನ್ನ ಜೀವಿತಾವಧಿಯಲ್ಲಿ ಸಾತ್ವಿಕತೆಯಿಂದ ಜೀವಿಸಿರುತ್ತಾನೆ. ಆತ ಯಾರಿಗೂ ತೊಂದರೆ ನೀಡದೆ, ಮೋಸ ಮಾಡದೆ ಜೀವನವನ್ನು ಸಾಗಿಸಿರುತ್ತಾನೆ. ತನ್ನ ದಿನನಿತ್ಯದ ಕಾರ್ಯಗಳಲ್ಲದೇ, ಶ್ರದ್ಧೆಯಿಂದ ದೇವರ ಧ್ಯಾನ, ಭಜನೆ, ಪೂಜೆಗಳನ್ನು ಕಾಲಕಾಲಕ್ಕೆ ತಪ್ಪದೇ ಮಾಡಿರುತ್ತಾನೆ. ದಿನನಿತ್ಯ ತಾನು ದುಡಿದ ಆದಾಯದಲ್ಲಿ ದಾನ, ಧರ್ಮ, ಸಮಾಜ ಸೇವೆಗಳನ್ನು ಮಾಡುತ್ತಾನೆ. ಗುರುಹಿರಿಯರಲ್ಲಿ ಭಕ್ತಿ, ಅವರ ಸೇವೆ, ಅವರು ತೋರಿಸಿರುವ ಉತ್ತಮ ಮಾರ್ಗದಲ್ಲಿ ಸದಾ ನಡೆಯುವ ಪ್ರವೃತ್ತಿಯಲ್ಲಿ ಸಫಲತೆ ಗಳಿಸುತ್ತಾನೆ. ಈ ರೀತಿ ಆತ ತನ್ನ ಜೀವಿತಾವಧಿಯನ್ನು ತನಗೆ ಹಿತವಾಗಿಯಷ್ಟೆಯಲ್ಲದೇ, ಪರಹಿತದಲ್ಲಿಯೂ ವ್ಯಯಿಸುತ್ತಾನೆ. ಆದರೆ ಕೆಲವರು ತಮ್ಮ ಜೀವಿತಾವಧಿಯ ಅಂತ್ಯದಲ್ಲಿ ಸುಖವನ್ನು ಅನುಭವಿಸುವುದಿಲ್ಲ. ಒಂದೇ ಆತ ದೀರ್ಘಕಾಲಿಕ ಕಾಯಿಲೆಯಿಂದ ನರಳಬಹುದು ಇಲ್ಲದಲ್ಲಿ ಮಾರಕ ಖಾಯಿಲೆಗಳಾದ ಕ್ಯಾನ್ಸರ್ ನಂತಹವುಗಳಿಂದ ನರಳಿ ಸಾವನ್ನಪ್ಪಬಹುದು ಅಥವಾ ತನ್ನ ಮಕ್ಕಳ ಹಿಂಸೆ, ತಿರಸ್ಕಾರಗಳಿಂದ ಮಾನಸಿಕ ಯಾತನೆ ಅನುಭವಿಸಬಹುದು. ಇಂತಹ ಸ್ಥಿತಿಯಲ್ಲಿ ಆತನ ಅಥವಾ ಆತನ ಪರಿವಾರದ ಸದಸ್ಯರಲ್ಲಿ ಸಹಜವಾಗಿ ಕೆಲವೊಂದು ಪ್ರಶ್ನೆಗಳು ಮನಸ್ಸಿನಲ್ಲಿ ಉದ್ಭವವಾಗಬಹುದು. ತನ್ನ ಜೀವನದಲ್ಲಿ ಯಾರಿಗೂ ತೊಂದರೆ ಮಾಡದಂತವನಿಗೆ ಕೊನೆಗಾಲದಲ್ಲಿ ಕಠಿಣ ಕಷ್ಟಗಳು ಯಾಕೆಕಾಡುತ್ತವೆ? ಅವರೇ ಯಾಕಾಗಬೇಕು ನಮಗೂ ಬಹಳ ಬಾರಿ ಇಂತಹ ಪ್ರಶ್ನೆಗಳು ಕಾಡಿರಬಹುದು!


ಕೆಲವರು ತಮ್ಮ ಜೀವನದಲ್ಲಿ ಎಲ್ಲಾ ರೀತಿಯ ಮೋಸ, ಕೊಲೆ, ಸುಲಿಗೆ ಮಾಡಿಯೇ ತಮ್ಮ ಜೀವನವನ್ನು ಕಳೆದಿರುತ್ತಾರೆ. ವಾಮಮಾರ್ಗದಲ್ಲಿ ಸಂಪತ್ತು, ಐಷ್ವರ್ಯಗಳಿಸಿರುತ್ತಾರೆ. ಆತ ಸಮಾಜಕ್ಕೆ ಕಂಟಕಪ್ರಾಯನಾಗಿರುತ್ತಾನೆ. ದಯೆ, ದಾನ, ಧರ್ಮಗಳು ಆತನುದರೆ ಆ ವ್ಯಕ್ತಿ ಮಾತ್ರ ತನ್ನ ಜೀವನವನ್ನು ಯಾವುದೇ ರೀತಿಯ ಮಾರಕ ಖಾಯಿಲೆಗಳಿಲ್ಲದೆ, ಎಲ್ಲಾ ರೀತಿಯ ಸುಖಗಳನ್ನು ಅನುಭವಿಸಿರುತ್ತಾನೆ.


ಆಗ ಪ್ರತಿಯೊಬ್ಬ ವ್ಯಕ್ತಿಯಲ್ಲಿ ಸಾಮಾನ್ಯವಾಗಿ ಸತ್ಯ, ಪ್ರಾಮಾಣಿಕತೆ, ಸಾತ್ವಿಕತೆಯ ಬಗ್ಗೆ ಸಂಶಯದ ಮನೋಭಾವನೆ ಮೂಡುವುದು ಸಹಜ.


ಈ ಪ್ರಶ್ನೆಗೆ ನಿಮ್ಮಲ್ಲಿ ಉತ್ತರವಿದೆಯೇ?

Rating
No votes yet

Comments