ನಿಮ್ಮ ಬ್ರೌಸರ್‌ನಲ್ಲಿಯೇ ಬಿಸಿ ಬಿಸಿ ಸುದ್ದಿ

ನಿಮ್ಮ ಬ್ರೌಸರ್‌ನಲ್ಲಿಯೇ ಬಿಸಿ ಬಿಸಿ ಸುದ್ದಿ

 

ಮೊದಲೆಲ್ಲಾ ಯಾವುದೇ ವಿಷಯದ ಬಗ್ಗೆ ತಿಳಿದುಕೊಳ್ಳಬೇಕೆಂದರೆ ಸಂಬಂಧಪಟ್ಟ ವೆಬ್‌ಸೈಟ್‌ಗೆ ಭೇಟಿನೀಡಬೇಕಾಗಿತ್ತು. ಆ ವೆಬ್‌ಸೈಟ್‌ನಲ್ಲಿ ನಮ್ಮ ಇ-ಮೈಲ್ಅನ್ನು ನೋಂದಾಯಿಸಿದರೆ, ಹೊಸ ವಿಷಯಗಳೇನಾದರೂ ಅಲ್ಲಿ ಪ್ರಕಟಿಸಿದರೆ ಅದನ್ನು ನೇರವಾಗಿ ಇ-ಮೈಲ್‌ನ ಮೂಲಕ ಪಡೆಯುವ ಸೌಲಭ್ಯವಿತ್ತು. ಇದು RSS ಬಂದ ನಂತರ ಬದಲಾಯಿತು. ನಾವು ಬಳಸುವ ಬ್ರೌಸರ್‌ನಲ್ಲಿಯೇ ಆ ತಾಣಕ್ಕೆ ಚಂದಾದಾರನಾಗದೆಯೇ ಹೊಸದಾಗಿ ಪ್ರಕಟಿತವಾದ ಮಾಹಿತಿಯನ್ನು ಪಡೆಯಬಹುದು.


ಮೋಝಿಲ್ಲಾ ಫೈರ್‍‌ಫಾಕ್ಸ್‌ನಲ್ಲಿ ಇದು ಇನ್ನೂ ಸುಲಭ. ನಾವು ಭೇಟಿ ನೀಡುವ ಪುಟವು RSS feedsಗಳನ್ನು ಒದಗಿಸುತ್ತದೆಯಾದರೆ, Address barನ ಬಲಭಾಗದಲ್ಲಿ ಈ ಕೆಳಗೆ ತೋರಿಸಿರುವ ಲಾಂಛನವು ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದರೆ ಒಂದು ಲೈವ್ ಬುಕ್‌ಮಾರ್ಕ್ ಸೇರಿಸಲ್ಪಡುತ್ತದೆ. ಈಗ ನಮ್ಮ ಬ್ರೌಸರ್ RSS feedಗಳನ್ನು ತೋರಿಸಲು ಸಿದ್ಧ.

 

 

ಲೈವ್‌ಬುಕ್‌ಮಾರ್ಕ್‌ಗಳ ಸದುಪಯೋಗ ಪಡೆಯೆಬೇಕೆಂದರೆ ಫೈರ್‌ಫಾಕ್ಸ್‌ನಲ್ಲಿ ಸಾಕಷ್ಟು ಎಕ್ಸ್‌ಟೆನ್‌ಶನ್‌ಗಳು ಲಭ್ಯವಿದೆ. ಇದರಲ್ಲಿ ನನಗಿಷ್ಟವಾದುದೆಂದರೆ, RSS Ticker. ಇದನ್ನು ಫೈರ್‌ಫಾಕ್ಸ್‌ಗೆ ಸೇರಿಸಿದರೆ, ನೀವು ಸೇರಿಸಿರುವ ಲೈವ್ ಬುಕ್‌ಮಾರ್ಕ್‌ಗಳ ಮೂಲಕ ಮಾಹಿತಿಯನ್ನು ಪಡೆಯಬಹುದು. ನೀವು ಯಾವುದೇ ತಾಣವನ್ನು ಭೇಟಿಮಾಡಿದರೂ, ನಿಮ್ಮ ಬ್ರೌಸರ್‌ನ ಮೇಲ್ಭಾಗದಲ್ಲಿ ನಿರಂತರವಾಗಿ ಇದು ಕಾಣಿಸುತ್ತಿರುತ್ತದೆ (ಟೀವಿಯಲ್ಲಿ ಮುಖ್ಯಾಂಶಗಳು ಪರದೆಯ ಕೆಳಗೆ ಕಾಣಿಸುವಂತೆ).


ಈ ಎಕ್ಸ್‌ಟೆನ್‌ಶನ್‌‌ ಇನ್ಲ್ಟಾಲ್ ಆದ ಮೇಲೆ ಅದರಲ್ಲಿರುವ "Hide items you've already read" ಆಯ್ಕೆಯನ್ನು ಕ್ಲಿಕ್ ಮಾಡಿದರೆ ಸಾಕು, ನೀವು ಓದರಿರುವ ಮಾಹಿತಿಯು ಮಾತ್ರ ನಿಮಗೆ ಕಾಣಿಸುತ್ತದೆ. ಇದಲ್ಲದೇ ಇನ್ನೂ ಹಲವು ಆಯ್ಕೆಗಳು ಇದರಲ್ಲಿದೆ.


ನೀವು ಇನ್ನೂ ಇಂಟರ್‌ನೆಟ್ ಎಕ್ಸ್‌ಪ್ಲೋರರ್ ಬಳಸುತ್ತಿದ್ದರೆ, ಸಂಪೂರ್ಣವಾಗಿ ಕನ್ನಡದಲ್ಲೇ ಲಭ್ಯವಿರುವ ಫೈರ್‍‌ಫಾಕ್ಸ್‌‌ಅನ್ನು ಇಲ್ಲಿಂದ ಪಡೆಯಿರಿ.

RSS Ticker ಎಕ್ಸ್‌ಟೆನ್‌ಶನ್‌‌ಅನ್ನು ಇಲ್ಲಿಂದ ಡೌನ್‌ಲೋಡ್ ಮಾಡಬಹುದು.

Rating
No votes yet

Comments