ನಿಮ್ಮ ಮಗುವಿಗೆ ಲಸಿಕೆ ಹಾಕಿಸಬೇಡಿ

ನಿಮ್ಮ ಮಗುವಿಗೆ ಲಸಿಕೆ ಹಾಕಿಸಬೇಡಿ

ಈ ಲೇಖನದ ಮೂಲಕ ಇಡೀ ಜಗತ್ತನ್ನೇ ಎದುರು ಹಾಕಿಕೊಳ್ಳುವ ಅಪಾಯವಿದೆ ಎಂದು ನನಗೆ ಗೊತ್ತು. ಪ್ರಗತಿ ವಿರೋಧಿ ಎಂದೂ ಕೆಲವರು ಅನ್ನಬಹುದು. ಸತ್ಯ ತಿಳಿಸುವ ಉದ್ದೇಶದಿಂದ ಲೇಖನ ಪ್ರಕಟಿಸುತ್ತಿದ್ದೇನೆ. ಲಸಿಕೆಗಳ ಬಗೆಗೆ ಸಾಧ್ಯಂತ ಮಾಹಿತಿ ಇದೆ. ಆದರೆ ಒಂದು ಸ್ಯಾಂಪಲ್ ನಿಮ್ಮೆದುರು ಇಡಬಯಸುತ್ತೇನೆ.

ಏಡ್ಸ್ ಎಂಬ ರೋಗ ಇತ್ತೀಚೆಗೆ ಬಂದದ್ದು ಎಂಬುದು ಎಲ್ಲರಿಗೂ ಗೊತ್ತು. ಇದ್ದಕ್ಕಿದ್ದಂತೆ ಬಂದದ್ದು ಹೇಗೆ ಎಂಬುದಕ್ಕೆ ಕಾರಣಗಳನ್ನು ಹುಡುಕುತ್ತಾ ಹೋದಂತೆ ಭಯಾನಕ ಸಂಗತಿಗಳು ಬಯಲಿಗೆ ಬರತೊಡಗಿದವು. ಜೆನೆಟಿಕ್ ಇಂಜಿನಿಯರಿಂಗ್ ಮೇಲೆ ವಿಶ್ವದಾದ್ಯಂತ ಪ್ರಯೊಗಗಳು ನಡೆಯುತ್ತಿವೆ. ಈ ಸಂಶೋಧನೆಗಳ ಉದ್ದೇಶ ಲಸಿಕೆಗಳನ್ನು ತಯಾರಿಸುವುದು(ಇದು ಜಗತ್ತಿಗೆ ತೋರಿಸಲು! ಮುಖ್ಯ ಉದ್ದೇಶ ಜೈವಿಕ ಬಾಂಬ್‍ಗಳನು ತಯಾರು ಮಾಡುವುದು. ಅದರಲ್ಲೂ ಅಮೇರಿಕೆಯಲ್ಲಿರುವ ಸಂಶೋಧನಾಲಯಗಳು ಈ ನಿಟ್ಟಿನಲ್ಲಿ ಹೆಚ್ಚು ತೊಡಗಿಕೊಂಡಿವೆ). ಈ ರೀತಿ ತಯಾರಾದ ಲಸಿಕೆಗಳಲ್ಲಿ ಪೋಲಿಯೋ ಕೂಡ ಒಂದು. ಪೋಲಿಯೋ ಲಸಿಕೆಯನ್ನು ಮಂಗಗಳ ಕಿಡ್ನಿಯ ಮೇಲ್ಚರ್ಮದಿಂದ ತಯಾರಿಸಲಾಗುತ್ತದೆ. (upper epidermis of kidney) ಕೆಲ ವೈರಸ್‍ಗಳು ಪ್ರಾಣಿಗಳಲ್ಲಿ ಯಾವುದೇ ತೊಂದರೆ ಕೊಡದೇ ಬದುಕುತ್ತಿರುತ್ತವೆ. ಇವೇ ಮನುಷ್ಯನಿಗೆ ಹಾನಿಕಾರಕವಾಗಿರುತ್ತವೆ. ಮನುಷ್ಯನಲ್ಲೂ ಸ್ನೇಹಮಯವಾಗಿರುವ ವೈರಸ್ ಅಥವಾ ಬ್ಯಾಕ್ಟೀರಿಯಾಗಳು ಪ್ರಾಣಿಗಳಿಗೆ ಮಾರಕವಾಗಿರುತ್ತವೆ. ಹೆಚ್.ಐ.ವಿ ಎಂಬ ವೈರಸ್ ಇರುವುದು ಮಂಗಗಳ ಮೂತ್ರಕೋಶದಲ್ಲಿ!!! ಇದು ಮಂಗಗಳಿಗೆ ಯಾವುದೇ ತೊಂದರೆ ಕೊಡುವುದಿಲ್ಲ. ಇವುಗಳನ್ನು ಎಸ್.ಐ.ವಿ ಎನ್ನುತ್ತಾರೆ. ಅಮೇರಿಕದಲ್ಲಿ ಈ ಶತಮಾನದ ಐವತ್ತರ ದಶಕದಲ್ಲಿ ಒಮ್ಮೆ ತಯಾರಿಸಿದ ಪೋಲಿಯೋ ಲಸಿಕೆಯಲ್ಲಿ ಎಸ್ ಐ ವಿ ಅಂಶ ಕಂಡು ಬಂತು. ಅದಾಗಲೇ ಮಿಲಿಯಂತರ ಹಣ ಖರ್ಚು ಮಾಡಿ ಲಸಿಕೆ ತಯಾರಿಸಿ ಆಗಿತ್ತು. ಹಾಳು ಮಾಡುವಂತಿರಲಿಲ್ಲ. ಈ ಲಸಿಕೆಯ ಎಲ್ಲ ಬಾಕ್ಸ್‍ಗಳನ್ನು ಆಫ್ರಿಕಾಕ್ಕೆ ಸಾಗಿಸಲಾಯಿತು. ನಂತರ ಚಿಂಪಾಂಜಿಯಿಂದ ಸಂಭೋಗದಿಂದಲೋ, ಗಾಯದ ಮೂಲಕವೋ ಆಫ್ರಿಕನ್ನರಿಗೆ ಏಡ್ಸ್ ತಲುಪಿತು ಎಂದು ಬುರುಡೆ ಬಿಡಲಾಯಿತು.

ಈಗಲೂ ಪೋಲಿಯೋ ಲಸಿಕೆಗಳು ನಂಬಲರ್ಹವಲ್ಲ. ಪ್ರತಿ ಬಾರಿಯೂ ಒಂದಲ್ಲ ಒಂದು ರೀತಿಯ ವೈರಾಣು ಅಥವಾ ಬ್ಯಾಕ್ಟೀರಿಯಾಗಳಿಂದ ಕಲುಷಿತವಾಗಿರುವುದು ಬೆಳಕಿಗೆ ಬಂದಿದೆ. ಬೇಕೆಂದೇ ನಮ್ಮ ಮಕ್ಕಳ ಮೇಲೆ ವಿವಿಧ ಪ್ರಯೋಗಗಳನ್ನು ನಡೆಸಲು ಪೋಲಿಯೋ ಲಸಿಕೆಯನ್ನು ಕಲುಷಿತಗೊಳಿಸಲಾಗುತ್ತಿದೆ ಎಂಬ ಆರೋಪವೂ ಕೇಳಿ ಬರತೊಡಗಿದೆ! ಇದ್ದಕ್ಕಿದ್ದಂತೆ ಪೋಲಿಯೋ ಬಗ್ಗೆ ಇಷ್ಟೊಂದು ಕಾಳಜಿ ಏಕೆ ? ಪೋಲಿಯೋ ಲಸಿಕೆ ತಯಾರಾಗುವುದಕ್ಕಿಂತ ಮುಂಚೆ ಎಷ್ಟು ಜನರಿಗೆ ಪೊಲಿಯೋ ಇತ್ತು ? ಪ್ರಮಾಣವಾದರೂ ಎಷ್ಟು ? ಲಸಿಕೆ ಇಲ್ಲದೇ ಹಿಂದಿನ ಜನ ಬದುಕಿರಲಿಲ್ಲವೆ? ಸಿಡುಬು ಅಥವಾ ಪ್ಲೆಗ್‍ನಂತೆ ಒಂದೇ ಬಾರಿಗೆ ಲಕ್ಷಾಂತರ ಜನರ ಪ್ರಾಣ ತೆಗೆಯುವ ಖಾಯಿಲೆ ಅಲ್ಲ ಪೋಲಿಯೋ. ಅಲ್ಲದೇ ಚಿಕ್ಕಂದಿನಲ್ಲಿ ಪೌಷ್ಠಿಕ ಆಹಾರ ಸೇವನೆಯಿಂದ(ಅಥವಾ ತಾಯಿಯ ಹಾಲಿನ ಪಾನದಿಂದ) ಪೋಲಿಯೊ ತಡೆಗಟ್ಟಬಹುದು. ನನಗೆ ತಿಳಿದಂತೆ ಬೇರೆ ಯಾವ ದೇಶದಲ್ಲೂ ಪೋಲಿಯೋ ಲಸಿಕೆ ಇಷ್ಟೊಂದು ಪ್ರಮಾಣದಲ್ಲಿ ಸಾಮೂಹಿಕವಾಗಿ ಹಾಕುವುದಿಲ್ಲ. ಈ ಕಾರ್ಯಕ್ರಮದ ಬಗ್ಗೆ ಸಾಕಷ್ಟು ಪ್ರಶ್ನೆಗಳೆದ್ದಿವೆ. ನಮ್ಮ ಮಕ್ಕಳಿಗೆ ಕೊಡುವ ಪೋಲಿಯೋ ಲಸಿಕೆಗಳಲ್ಲಿ ಹೊಸದಾಗಿ ಕಂಡುಹಿಡಿದ ಪ್ರಯೋಗಾತ್ಮಕ ಔಷಧಿಗಳನ್ನು ಸೇರಿಸಲಾಗುತ್ತಿದೆ ಎಂಬ ಮಾಹಿತಿ ನನಗೆ ಇದರ ಬಗ್ಗೆ ಸಂಶೊಧನೆ ಮಾಡುತ್ತಿರುವವರು ನೀಡಿದರು. ಈ ಔಷಧಿಗಳಲ್ಲಿ ಜೈವಿಕ ಬಾಂಬ್‍ಗಳೂ ಸೇರಿವೆ ಎಂಬುದು ಆತಂಕಕರ ಸಂಗತಿ. ಪೋಲಿಯೋ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬರುವ ಲೇಖನಗಳಲ್ಲಿ ನೀಡಲಿದ್ದೇನೆ.

ಹೆಪಟೈಟಿಸ್-ಬಿ ಎಂಬುದು ಇನ್ನೊಂದು ಹಾಸ್ಯಾಸ್ಪದ ಚುಚ್ಚುಮದ್ದು. ಹೆಪಟೈಟಿಸ್ ನಮ್ಮ ದೇಶದಲ್ಲಿ ಇಲ್ಲ. ಹೆಚ್ಚಾಗಿ ಕಂಡುಬರುವುದು ತೈವಾನ್ ನಲ್ಲಿ. ಲಸಿಕೆಯನ್ನು ತಯಾರು ಮಾಡಲು ಕೊಟ್ಯಂತರ ಹಣ ಖರ್ಚಾಗುತ್ತದೆ. ತೈವಾನ್‍ನಲ್ಲಿರುವಷ್ಟು ಜನರಿಗೆ ಲಸಿಕೆ ತಯಾರು ಮಾಡಿದರೆ ಅದು ಕಂಪನಿಗೆ ಲಾಸು. ಹಾಗಾಗಿ ದೊಡ್ಡ ಪ್ರಮಾಣದಲ್ಲಿ ತಯಾರು ಮಾಡಲಾಗುತ್ತದೆ. ಹೇಗಿದ್ದರೂ ಭಾರತ ಎಂಬ ಡಂಪಿಂಗ್ ಮಾರ್ಕೆಟ್ ಇದೆಯಲ್ಲ! ಇಲ್ಲಿ ತಂದು ಮಾರಲಾಗುತ್ತದೆ. ಹೆಪಟೈಟಿಸ್ ಲಸಿಕೆಯನ್ನು ಹೊರತಂದ ನಲವತ್ತೆಂಟು ಘಂಟೆಯೊಳಗಾಗಿ ಉಪಯೋಗಿಸಬೇಕು. ಬಹುತೇಕ ಬಾರಿ ನಿಮ್ಮ ಮೈ ಸೇರುವ ಲಸಿಕೆ ಸತ್ತೇ ಹೋಗಿರುತ್ತದೆ. ಇದಕ್ಕೆ ನಾವು ಐನೂರು ಆರುನೂರು ರೂಪಾಯಿ ಕೊಟ್ಟು ಹಾಕಿಸಿಕೊಳ್ಳುತ್ತೇವೆ.

ಇದೇ ರೀತಿ ಧಡಾರ, ಧನುರ್ವಾಯು ಇತ್ಯಾದಿ ಲಸಿಕೆಗಳು! ಎಷ್ಟೋ ಜನ ತಮ್ಮ ಮಕ್ಕಳಿಗೆ ಯಾವುದೇ ಲಸಿಕೆಯಿಲ್ಲದೇ ಬೆಳೆಸಿರುವುದನ್ನು ನೋಡಿದ್ದೇನೆ. ಮಕ್ಕಳು ಅತ್ಯಂತ ಆರೊಗ್ಯವಾಗಿವೆ. ಲಸಿಕೆ ಎಂದರೆ ಮೂಲವಾಗಿ ಶಕ್ತಿ ಕುಂದಿಸಲ್ಪಟ್ಟ ವೈರಾಣುಗಳು. ಈ ವೈರಾಣುಗಳು ಮತ್ತೆ ಜೀವಿತವಾಗಿ ಅರೋಗ್ಯ ಹಾಳು ಮಾಡುವುದಿಲ್ಲ ಎಂಬುದಕ್ಕೆ ಯಾವ ಗ್ಯಾರಂಟಿಯೂ ಇಲ್ಲ. ನಮ್ಮ ದೇಶದಲ್ಲಿ ಪೋಲಿಯೋಪೀಡಿತರ ಸಂಖ್ಯೆ ಪೋಲಿಯೋ ಲಸಿಕೆ ಹಾಕಿಸಲು ಶುರು ಮಾಡಿದ ನಂತರ ಹೆಚ್ಚಾಗಿದೆ ಎಂಬುದನ್ನು ಅಂಕಿ ಅಂಶಗಳು ತೋರಿಸುತ್ತವೆ. ವೈರಾಣುಗಳನ್ನು ಬಯಸಿ ಬಯಸಿ ದೇಹದೊಳಗೆ ಬಿಟ್ಟುಕೊಳ್ಳುವುದರಲ್ಲಿ ಅರ್ಥವೂ ಗೋಚರಿಸುತ್ತಿಲ್ಲ. ಈ ವೈರಾಣುಗಳನ್ನು ದೇಹಕ್ಕೆ ಪರಿಚಯಿಸಿ ಮೊದಲಿನಿಂದಲೇ ನಿರೋಧಕತೆಯನ್ನು ಹೆಚ್ಚಿಸುವುದು ಲಸಿಕೆಗಳನ್ನು ಕೊಡುವ ಉದ್ದೆಶ. ಆದರೆ ದೇಹಕ್ಕೆ ಪರಿಚಿತವಾದ ಕಣಗಳು ಮತ್ತೊಮ್ಮೆ ಕಾಣಿಸಿಕೊಂಡಾಗ ಅದನ್ನು ದೇಹ ಒಪ್ಪಿಕೊಂಡುಬಿಡುವ ಸಾಧ್ಯತೆ ಇದೆ. ನಿರೋಧಕ ವ್ಯವಸ್ಥೆ ಪರಿಚಿತ ಕಣಗಳ ವಿರುದ್ಧ ಹೊರಾಡದಿರುವ ಸಾಧ್ಯತೆಗಳೂ ಇವೆ. (ಇದನ್ನು ಸ್ವತಃ ಆಲೋಪತಿ ಡಾಕ್ಟರೊಬ್ಬರು ನನಗೆ ಹೇಳಿದ್ದು)

ಜ್ವರ, ಬೇಧಿ, ಕೆಮ್ಮು, ಸಿಡುಬು ಇವೆಲ್ಲಾ ವಿಷವನ್ನು ಹೊರಹಾಕಲು ನಮ್ಮ ದೇಹವೇ ಕಂಡುಕೊಂಡ ಮಾರ್ಗ. ಇವನ್ನು ತಡೆಯುವುದರಿಂದ ವಿಷ ದೇಹದೊಳಗೇ ಉಳಿಯುವ ಸಾಧ್ಯತೆಗಳಿವೆ. ಕನಿಷ್ಠ ಒಂದು ಬಾರಿಯಾದರೂ ನಮ್ಮ ದೇಹಕ್ಕೆ ಸಿಡುಬು ವಕ್ಕರಿಸಲೇಬೇಕು. ನಮ್ಮ ದೇಹದ ರಚನೆ ಅದಕ್ಕೆ ಅನುಗುಣವಾಗಿಯೇ ಇದೆ. ಲಸಿಕೆ ಇದನ್ನು ತಡೆಯಲಾರದು. ಸಿಡುಬಿನ ಸಮಯದಲ್ಲಿ ಮುಂಜಾಗ್ರತೆ ತೆಗೆದುಕೊಂಡರೆ ಯಾವುದೇ ತೊಂದರೆಯಿಲ್ಲದೇ ಹೊರಬರಬಹುದು (ಇದನ್ನು ನನಗೆ ಆಯುರ್ವೇದ ಪಂಡಿತರೇ ದೃಢಪಡಿಸಿದ್ದಾರೆ).

ಹೆಚ್ಚಿನ ಮಾಹಿತಿಗಾಗಿ :
www.aidsorigins.com

http://www.uow.edu.au/arts/sts/bmartin/dissent/documents/AIDS/

ಎಡ್ವರ್ಡ್ ಹೂಪರ್ ರ "ದಿ ರಿವರ್".

ಭಾರತದ ಮಕ್ಕಳನ್ನು ಪ್ರಯೋಗಪಶುಗಳನ್ನಾಗಿ ಮಾಡಿಕೊಳ್ಳಲು ಭಯಾನಕ ಷಡ್ಯಂತ್ರ ನಡೆಯುತ್ತಿದೆ. ಸರ್ಕಾರವಂತೂ ಇದನ್ನು ತಡೆಗಟ್ಟುವುದಿಲ್ಲ. ಜಾಗೃತಿಯೊಂದೇ ಇದಕ್ಕೆ ದಾರಿ. ಇನ್ನೂ ಎದೆ ನಡುಗಿಸುವ ಮಾಹಿತಿಗಳು ನನ್ನ ಬಳಿ ಇವೆ. ಸಮಯ ಕಳೆದಂತೆ ಇಲ್ಲಿ ಹಂಚಿಕೊಳ್ಳುತೇನೆ. ಸಾಧ್ಯವಾದಷ್ಟು ಗಟ್ಟಿ ಮನಸ್ಸು ಮಾಡಿ ನಿಮ್ಮ ಮಗುವಿಗೆ ಪೋಲಿಯೋ ಲಸಿಕೆ (ಯಾವುದೇ ಲಸಿಕೆ) ಹಾಕಿಸಬೇಡಿ. ನಿಮ್ಮ ಮಗು ಲಸಿಕೆಯಿಂದ ದೂರವಿದ್ದಷ್ಟೂ ಆರೋಗ್ಯವಾಗಿರುತ್ತದೆ.

ಇದಲ್ಲದೇ ಏಡ್ಸ್ ಮತ್ತು ಹೆಚ್ ಐ ವಿ ಬಗ್ಗೆ ಸಾಕಷ್ಟು ಮಿಥ್ಯೆಗಳಿವೆ. ಹೆಚ್ ಐ ವಿ ಪಾಸಿಟಿವ್ ಬಂದಾಕ್ಷಣ ಅದು ಏಡ್ಸ್ ಅಲ್ಲ . ಅದು ಸಂಪೂರ್ಣ ವೈಜ್ಞಾನಿಕ ಟೆಸ್ಟ್ ಅಲ್ಲ. ಎಷ್ಟೋ ಬಾರಿ ವೈದ್ಯರು ರೋಗ ಯಾವುದೆಂದು ಗೊತ್ತಾಗದೆ ಏಡ್ಸ್ ಎಂದು ಶರಾ ಬರೆದುಬಿಡುವ ಸಾಧ್ಯತೆಗಳಿವೆ. ಹೆಚ್ ಐ ವಿ ವೈರಾಣುಗಳು ಮನುಷ್ಯ ದೇಹಕ್ಕೆ ಯಾವುದೇ ಹಾನಿ ಮಾಡದೆ ಇರಬಲ್ಲವು. ಇಂಜೆಕ್ಟ್ ಮಾಡುವುದರ ಮೂಲಕ ಏಡ್ಸ್ ವೈರಾಣುಗಳನ್ನು ಹರಡುವುದು ಸಾಧ್ಯವಿಲ್ಲ. ಲೈಂಗಿಕ ಕ್ರಿಯೆಯಿಂದ ಏಡ್ಸ್ ಹರಡುವ ಸಾಧ್ಯತೆ ಸಾವಿರಕ್ಕೆ ಒಂದು ಅಷ್ಟೆ. ಇದರ ಬಗ್ಗೆ ದಿ. ವೀಣಾಧರಿಯವರು ಸಾಕಷ್ಟು ಸಂಶೋಧನೆ ನಡೆಸಿ ಸತ್ಯ ಹೊರತಂದಿದ್ದಾರೆ. ಆದರೆ ಅವು ಹೆಚ್ಚು ಜಾಹೀರಾಗಿಲ್ಲ . ಇದರ ಬಗ್ಗೆಯೂ ನಾನು ಶೋಧಿಸಿದ ಅನೇಕ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಿದ್ದೇನೆ. ಇದಕ್ಕೆ ನನಗೆ ಎಲ್ಲರ ಬೆಂಬಲ ಬೇಕಷ್ಟೇ. !!!!

Rating
No votes yet

Comments