ನಿಯಮ ಬದಲಿಸಿದ್ದರೆ......

ನಿಯಮ ಬದಲಿಸಿದ್ದರೆ......


ಹಗಲಿನಂತೆ ರಾತ್ರಿಯೂ ಬೆಳಕಿದ್ದರೆ
ಸೂರ್ಯನಂತೆ ಚಂದ್ರನೂ ಕಾಣುವನು
ರಾತ್ರಿಯಂತೆ ಹಗಲು ಕತ್ತಲಾದರೆ
ನಕ್ಷತ್ರವು ಕಣ್ಣೆದುರು ಬರುವುದು.

ಎಲೆಯಂತೆ ಹೂವೂ ಹಸಿರಾದರೆ
ಕರಿ ಮುಡಿಯಲ್ಲಿ ಹಸಿರು
ಹೂವಂತೆ ಎಲೆಯೂ ಬಿಳಿಯಾದರೆ 
ನೆಲದಲ್ಲಿ ಎಲೆಯಾಗುವುದು ಕೆಸರು.

ದುಃಖದಲ್ಲಿ ಸುಖದಂತೆ ನಗು ಇದ್ದರೆ 
ನಗುತಿರಲು ನೋವಾಗುವುದು 
ಸುಖದಲ್ಲಿ ದುಃಖದಂತೆ ಅಳು ಇದ್ದರೆ 
ಅಳುತಿರಲು ನಲಿವಾಗುವುದು

Rating
No votes yet

Comments

Submitted by lpitnal@gmail.com Sat, 10/13/2012 - 12:49

ಜಿ. ಕೀರ್ತಿ ರವರೇ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ವಿನೂತನ ವಿಚಾರಗಳ ಕ್ರಿಯಾಶೀಲ ಬರವಣಿಗೆ. ತುಂಬ ಇಷ್ಟವಾಯಿತು. ಧನ್ಯವಾದಗಳು.