ನಿರಂತರ ಕಾಡುವ ಕವಿತೆಗಳ ಸರಣಿ
ನಿ ಇರದ ಬಾಳಿನಲ್ಲಿ - ಭಾವಗೀತೆ - ಡಾ . ರಾಜ್ ಕುಮಾರ್
ದನಿ ಇರದ ಬಾಳಿನಲ್ಲಿ
ಕೊಳಲಾದೆ ನೀನು
ನಿನ್ನೊಲುಮೆ ರಾಗವ ನುಡಿಸಿ
ಮರುಳಾದೆ ನಾನು
ಕನಸಿನಲೂ ನಿನ್ನದೆ ರೂಪು
ಶೃಂಗಾರ ಸುಮವಾಗಿ
ಬಯಕೆ ಶ್ರುತಿ ಭಾವಗಳಲ್ಲಿ
ಸಂಬಂಧ ಇನಿದಾಗಿ
ಸಂಗೀತ ಎದೆಯೊಳು ತುಂಬಿ
ನಾನಾದೆ ನಾದದ ದುಂಬಿ
ಗಂಧರ್ವ ಗಾನ ಗಂಗೆ
ತವರೂರು ನೀನಾಗಿ
ಸಂಗೀತ ಗಾಯನ ಹರಿಸೋ
ನಿಜ ರಸಿಕ ನಾನಾಗಿ
ಆಲಾಪದೇರಿಳಿತದಲಿ
ನಾ ಮಿಡಿದೆ ಮೋಹನ ಮುರಲಿ
Rating