ನಿರಂತರ....

ನಿರಂತರ....

ಕಳಿಸಿ ಬಿಡಲೇ ಖಾಲಿ ಆಕಾಶಕ್ಕೆ
ನನ್ನ ಕಾಡುವ ಒಂದಷ್ಟು ನೆನಪುಗಳನ್ನು..
ಅಲ್ಲಿ ಬಿಳಿ ಮೊಡಗಳಾಗಿ ತೇಲಿ
ಬಿಡಿಸಲಿ ಚೆಂದದ ಚಿತ್ತಾರವನ್ನು!

ತೇಲಿಸಿ ಬಿಡಲೇ ನನ್ನ ನನಸಾಗದ ಕನಸುಗಳನ್ನು
ಜುಳು ಜುಳು ಹರಿವ ಜಲ ಧಾರೆಯಲ್ಲಿ..
ಎಲ್ಲವನ್ನೂ ತನ್ನಂತರಾಳದಲ್ಲಿ ಕರಗಿಸಿಕೊಂಡು
ಹರಿದುಬಿಡಲಿ ಯಾರಿಗೂ ಕಾಯದೆ !

ಹಾರಿಸಿಬಿಡಲೇ ನನ್ನ ಕೈಗೂಡದ ನಿರೀಕ್ಷೆಗಳನ್ನು
ಎಲ್ಲ ನಿಟ್ಟುಸಿರ ರೆಕ್ಕೆ ಪುಕ್ಕವ ಜೋಡಿಸಿ..
ಪಟ ಪಟ ರೆಕ್ಕೆ ಬಡಿದು ಮರೆಯಾಗಲಿ
ಸಪ್ತ ಸಾಗರದಾಚೆಯ ಪುಟ್ಟ ಗೂಡಿಗೆ !

ಆಲಿಸಿಬಿಡಲೇ ಕೊನೆಯಬಾರಿಗೆ
ಅವುಗಳುಸುರುವ ಪಿಸುಮಾತುಗಳನ್ನು...
ಕಲ್ಪನೆಗೂ ಮೀರಿದ ಮೌನ ಮಿಡಿತದಂತಿರುವ
ಭ್ರಮೆಯಾಚೆಗಿನ ಕಹಿ ವಾಸ್ತವವನ್ನು !

Rating
No votes yet

Comments