ನಿರಾಶೆ

ನಿರಾಶೆ

ನಿರಾಶೆ

ಸರಿಯುತಿದೆ ಅಂಕದ ಪರದೆ ರಂಗಭೂಮಿಯಲ್ಲಿ
ನಟರಿನ್ನೂ ಸರಿಯಾಗಿ ತಯಾರಾಗಿಲ್ಲ
ನಟಿಸುವ ಉತ್ಸಾಹವೂ ಅವರಲಿಲ್ಲ.

ತೆರೆಯುತಿದೆ ಅಂತರಪಟ ಜಗದ ಮಂಟಪದಲ್ಲಿ
ಮಧುಮಗನಿನ್ನೂ ಯಾತ್ರೆಯಿಂದಲೇ ಮರಳಿಲ್ಲ
ಕಾಲವೆಂಬ ವಧುವು ವರಿಸಲು ಆಗಲೇ ನಿಂತಿಹಳು.

ಕಡಲಿನಿಂದೆದ್ದು ಬರುತಿಹನು ರವಿಯು
ನೋಡಲೊಲ್ಲ ಕುರುಡು ಕವಿಯು
ಕೊನೆಗೆ ಮನದೊಳಗಿನ ಕಂಗಳಿಂದಲೂ.

ಇದನೆಲ್ಲ ನೋಡುತಲೇ ನನ್ನ ಹೃದಯವೂ ಕಲ್ಲಾಗಿದೆ
ಹದಿಹರೆಯದಲೇ ಮುಖ ಸುಕ್ಕುಗಟ್ಟಿದೆ
ಇನ್ನೇನು ಹಕ್ಕಿ ಗೂಡುಬಿಟ್ಟು ಹೊರಡಲಿದೆ.

Rating
No votes yet

Comments