ನೀತಿ ಪದಗಳು

ನೀತಿ ಪದಗಳು

ಓದದ ಬಾಯ್,ಅಮೃತಾನ್ನವ ಮೋದದ ಬಾಯ್

ಸಜ್ಜನರ್ಕಳಮ್ ಪ್ರಿಯದಿಂದಮ್ ಆದರಿಸದ ಬಾಯ್,

ಅದು ತಾಮ್ ಮೇದಿನಿಯೊಳ್ ಬಿಲದ ಬಾಯಕ್ಕು ಚೂಡಾರತ್ನ|

ಸದ್ವಿಚಾರಗಳನ್ನು ಓದದ ಬಾಯಿ

ಒಳ್ಳೆಯ ಆಹಾರವನ್ನು ತಿನ್ನದ ಬಾಯಿ

ಸಜ್ಜನರನ್ನು ಪ್ರಿಯದಿಂದ ಆದರಿಸದ ಬಾಯಿ-ಅದು ಭೂಮಿಯಲ್ಲಿ ಬಿಲದ ಬಾಯಿದ್ದಂತೆ.

ಎಷ್ಟು ಅರ್ಥ ಗರ್ಭಿತವಲ್ಲವೇ?

ಉಳ್ಳಲ್ಲಿ ಉಣಲಿಲ್ಲ

ಉಳ್ಳಲ್ಲಿ ಉಡಲಿಲ್ಲ

ಉಳ್ಳಲ್ಲಿ ದಾನ ಕೊಡಲಿಲ್ಲದವನೊಡವೆ ಕಳ್ಳಗೇ ನೃಪಗೆ ಸರ್ವಜ್ಞ|

ಧನವಂತನಾಗಿದ್ದು ಚೆನ್ನಾಗಿ ಊಟಮಾಡದೆ, ಚೆನ್ನಾಗಿ ಬದುಕು ನಡೆಸದೆ,ದಾನಧರ್ಮಗಳನ್ನು ಮಾಡದೆ ಜಿಪುಣತನದಿಂದ ಕೂಡಿಹಾಕಿದವನ ಆಸ್ತಿಯು ಕಡೆಗೆ ಕಳ್ಳರ ಅಥವಾ ರಾಜರ ಪಾಲಾಗುವುದರಲ್ಲಿ ಸಂಶಯ ವಿಲ್ಲ.
ಎಷ್ಟು ಸರಳವಾಗಿರುವ ನೀತಿ ಪದಗಳು. ನಾವು ಪ್ರಾಥಮಿಕ ತರಗತಿಗಳಲ್ಲಿ ಓದುವಾಗ ಇದ್ದಂತ ಪದ್ಯಗಳು ಇವು. ಅಂದು ಓದಿದ ಈ ಪದ್ಯಗಳ ಅರ್ಥ ಈಗ ಆಗುತ್ತಿದೆ. ಇಂತಹ ಪದ್ಯಗಳನ್ನು ನಮ್ಮ ಚಿಕ್ಕ ವಯಸ್ಸಿನಲ್ಲಿ ನಮ್ಮ ಮಾಸ್ಟರುಗಳು ನಮಗೆ ಕಂಠ ಪಾಠ ಮಾದಿಸದೆ ಬಿಡುತ್ತಿರಲಿಲ್ಲ.
ನಿಜವಾಗಲೂ ಎಂತಹಾ ನುಡಿಕಟ್ಟುಗಳು ಇವು!

Rating
No votes yet