ನೀನಿಲ್ಲದೆ...

ನೀನಿಲ್ಲದೆ...

ಅರಿತ ಮೇಲೆ ನೀ ಬರುವಳಲ್ಲ
ನನ್ನ ಬಾಳಲಿ ಎಂದು;
ಏನೋ ಕಳೆದುಕೊಂಡವ
ನಾ ಆಗಿರುವೆ ಇಂದು;


ತಳಮಳ... ನೀ ದೂರ
ಅಂತ ತಿಳಿದ ಕ್ಷಣದಿಂದ;
ಉಲ್ಲಾಸವಾಗಿದೆ ಮಾಯ
ನನ್ನಿಂದ;

ಎದೆಯಲಿ ಬರಿ
ಬೇಸರದ ಉಸಿರಿದೆ;
ಕಣ್ಣಲಿ ಬರಿ ನಿನ್ನ
ಬಿಂಬವೇ ತುಂಬಿದೆ;

ಮನದಲ್ಲಿ ನಿನ್ನ ನೆನಪ
ಮಳೆಯಿದೆ;
ಮತ್ತೆ ಮತ್ತೆ ಕಣ್ಣೀರಾಗಿ
ಹೊರ ಬರುತಲಿದೆ;

ಎಲ್ಲಿ ನೋಡಿದರೂ
ನಿನ್ನ ಮೊಗವ ಕಾಣುತ,
ಇಹವ
ನಾ ಮರೆಯುತಿರುವೆ;
ಪ್ರೇಮದ ಕುರುಹು ಕಂಡದ್ದು
ಮರಳಲಿ
ಎಂದು ಅರಿಯಲು ತಡವಾಯಿತಲ್ಲ;
ಹೃದಯವೀಗ
ಕಲ್ಲಾಗವೊಲ್ಲದಲ್ಲ?

ಸಾಗರ ಸೇರಿದ ನದಿಯು
ಎಂದಾದರೂ ಬೇರೆಯಾದುದುಂಟೆ?
ಅರಳಿನಿಂತ ಹೂವು
ಮರಳಿ ಮೊಗ್ಗಾಗಿದ್ದುಂಟೆ?
ಹೆಮ್ಮರ ಮತ್ತೆ
ಬೀಜವಾಗಿದ್ದುಂಟೆ?
ಎದೆಯಲಿ ಕೊರೆದ ಪ್ರೀತಿಯ
ಅಳಿಸಲಾದೀತೆ?

ಪ್ರೇಮಕ್ಕೆ ಮಿಡಿದ ಹೃದಯ
ಮಡಿಯದೆ ಮರೆಯದೆ ಮೂಡಿದೊಲವ;
ಬಲುದೂರ ನೀನಿಂತರೂ
ಕಣ್ಣರೆಪ್ಪೆಯಲಿ ನೀ ಬಂಧಿಯಾದೆ;
ಬದುಕ ಬೆಳಕ
ನೋಡುವ ಮುಂಚೆ
ಹೀಗೇಕೆ ಮಂಜಾಯಿತೆ...?
ಕಣ್ಣು ಹೀಗೇಕೆ ಮಂಜಾಯಿತೆ...?
ಅರಿಯದ ಬದುಕ ಪಥದಲ್ಲಿ
ಕರೆದು,
ವಿಧಿ ನನ್ನೇಕೆ ಹೀಗೆ ಜಾರಿಸಿತೆ?
ವಿಧಿ ನನ್ನೇ-ಏಕೆ ಹೀಗೆ ಜಾರಿಸಿತೆ?
-----------ಅಮರ್
Rating
No votes yet