ನೀನು ಮತ್ತು ಸೋತ ನಾನು
ನೀನು ಮತ್ತು ಸೋತ ನಾನು
ನನ್ನನ್ನು ನಿಜವಾಗಿಯೂ
ಮರುಳನನ್ನಾಗಿ ಮಾಡಿದ
ಮೊದಲನೆಯವಳು ನೀನು.
ಇಂದು ನನ್ನ ಇಂಚಿಂಚೂ
ಗೆದ್ದುಬಿಟ್ಟೆ ನೀನು
ಪ್ರೀತಿಯ ಚಿಲುಮೆ ಉಕ್ಕಿ
ಮನಸ್ಸು ತೋಯುತಿದೆ ತಾನು.
ಬ್ರಹ್ಮನಿಗೆ ಅಷ್ಟು ಸಮಯವಿದೆಯೇನು?
ನಿನ್ನ ರೂಪಿಸಲು ಅದೆಷ್ಟು ವರ್ಷಗಳನ್ನು ಕಳೆದಿರುವನೊ
ಕವಿಗಳಿಗೂ ವರ್ಣಿಸಲು ಕಷ್ಟವಾಗಿಹೆ ನೀನು
ನಿನ್ನ ನೋಡುತ್ತಲೇ ಕಳೆದು ಹೋದೆ ನಾನು
ನಿನ್ನೆದೆಯಲ್ಲಿ ಕೊಂಚ ಜಾಗಬೇಕಿದೆ ಇನ್ನು.
ನಿನ್ನ ಮೌನದಿಂದಲೇ ನನ್ನ ಮನಸ್ಸು ಕಾಡಿದೆ
ಕಣ್ಣ ನೋಟದಿಂದಲೇ ಪ್ರೀತಿಯ ಬೆಳಕು ನೀಡಿದೆ
ನಿನ್ನುಸಿರು ಸೋಕಿ ಹೃದಯದ ಬಡಿತ ಏರಿದೆ
ನಿನ್ನ ತುಟಿಗಳ ಹೀರುವ ಬಯಕೆಯಾಗಿದೆ
ನಿನ್ನಲ್ಲಿ ಈ ಪ್ರೀತಿಯ ಹರವು ಇಲ್ಲವೇನು?
ಇನ್ನಾದರೂ ನಿನ್ನ ಸೇರಿಕೊಳ್ಳಲು ಸುಳಿವು ನೀಡು ನೀನು.
--ಅರುಣ ಸಿರಿಗೆರೆ
ನನ್ನನ್ನು ನಿಜವಾಗಿಯೂ
ಮರುಳನನ್ನಾಗಿ ಮಾಡಿದ
ಮೊದಲನೆಯವಳು ನೀನು.
ಇಂದು ನನ್ನ ಇಂಚಿಂಚೂ
ಗೆದ್ದುಬಿಟ್ಟೆ ನೀನು
ಪ್ರೀತಿಯ ಚಿಲುಮೆ ಉಕ್ಕಿ
ಮನಸ್ಸು ತೋಯುತಿದೆ ತಾನು.
ಬ್ರಹ್ಮನಿಗೆ ಅಷ್ಟು ಸಮಯವಿದೆಯೇನು?
ನಿನ್ನ ರೂಪಿಸಲು ಅದೆಷ್ಟು ವರ್ಷಗಳನ್ನು ಕಳೆದಿರುವನೊ
ಕವಿಗಳಿಗೂ ವರ್ಣಿಸಲು ಕಷ್ಟವಾಗಿಹೆ ನೀನು
ನಿನ್ನ ನೋಡುತ್ತಲೇ ಕಳೆದು ಹೋದೆ ನಾನು
ನಿನ್ನೆದೆಯಲ್ಲಿ ಕೊಂಚ ಜಾಗಬೇಕಿದೆ ಇನ್ನು.
ನಿನ್ನ ಮೌನದಿಂದಲೇ ನನ್ನ ಮನಸ್ಸು ಕಾಡಿದೆ
ಕಣ್ಣ ನೋಟದಿಂದಲೇ ಪ್ರೀತಿಯ ಬೆಳಕು ನೀಡಿದೆ
ನಿನ್ನುಸಿರು ಸೋಕಿ ಹೃದಯದ ಬಡಿತ ಏರಿದೆ
ನಿನ್ನ ತುಟಿಗಳ ಹೀರುವ ಬಯಕೆಯಾಗಿದೆ
ನಿನ್ನಲ್ಲಿ ಈ ಪ್ರೀತಿಯ ಹರವು ಇಲ್ಲವೇನು?
ಇನ್ನಾದರೂ ನಿನ್ನ ಸೇರಿಕೊಳ್ಳಲು ಸುಳಿವು ನೀಡು ನೀನು.
--ಅರುಣ ಸಿರಿಗೆರೆ
Rating
Comments
ಉ: ನೀನು ಮತ್ತು ಸೋತ ನಾನು
In reply to ಉ: ನೀನು ಮತ್ತು ಸೋತ ನಾನು by Divya Bhat Balekana
ಉ: ನೀನು ಮತ್ತು ಸೋತ ನಾನು