ನೀರ ಚಕ್ರ.
ನೀರ ಚಕ್ರ.
ಹರಿಯ ಪಾದ ತೊಳೆಯಲೆಂದು
ಹರನ ಜಟೆಗಳಿಂದ ಇಳಿದು
ಭಗೀರಥನ ದೆಸೆಯಿಂದ
ಧರೆಗೆ ಹರಿದು ಬಂದ ಗಂಗೆ
ಭೂರಮೆಯನು ತಂಪುಗೊಳಿಸಿ
ಸಾಗರವನು ಸೇರಿತು
ನದಿಗಳಿಂದ ಹರಿದ ನೀರು
ಬೇರಿನಿಂದ ಪೈರಿಗೇರಿ
ಮರಗಳಿಂದ ಹಣ್ಣಿಗೆ
ತರುವಿನಿಂದ ಕರುವಿಗೆ
ಬೆವರಿನಿಂದ ಭಾನಿಗೆ
ವರುಣನಿಂದ ಭೂಮಿಗೆ
ನೀರಚಕ್ರ ಹೀಗಿದೆ
ಊರಲ್ಯಾಕೆ ನೀರಿಲ್ಲ
ಗೊತ್ತೆ ನಿಮಗೆ ಉತ್ತರ?
ಬೆವರಿಲ್ಲದೆ ಮಳೆಯಿಲ್ಲ
ಮಳೆಯಿಲ್ಲದೆ ಬೆಳೆಯಿಲ್ಲ
ಬೆಳೆಯಿಲ್ಲದೆ ಬೆಳಕಿಲ್ಲ
ಬೆಳಕು ಬೇಕು ಊರಿಗೆ
ಊರ
ತೇರನೆಳೆಯೊ ಬೆವರಿಗೆ.
ಅಹೋರಾತ್ರ.
Rating