ನೀರ ನಿಶ್ಚಿಂತೆ ಕಾರ್ಯಕ್ರಮ - ತುಮಕೂರು

ನೀರ ನಿಶ್ಚಿಂತೆ ಕಾರ್ಯಕ್ರಮ - ತುಮಕೂರು

ನಿನ್ನೆ ನಾವೆಲ್ಲ ತುಮಕೂರಿಗೆ ಹೋಗಿದ್ವು. ಕಾರ್ಯಕ್ರಮ "ನೀರ ನಿಶ್ಚಿಂತೆ". ತುಮಕೂರಿಗೆ ಕಾಲಿಟ್ಟ ಕೂಡಲೆ ದುರ್ಗದ ನೆನಪಾಗಿಸುವ ವಾತಾವರಣ. ನಾನು, ಅನಿಲ, ಶಿವು, ವಸಂತ, ಮುರಳಿ ಎಲ್ರೂ ಅನಿಲನ ಕಾರಲ್ಲಿ ಹೊರಟಿದ್ದು. ಹೋಗುವಷ್ಟರಲ್ಲಿ ಆಗಲೇ ಸ್ವಲ್ಪ ಲೇಟಾಗಿತ್ತು. ಮಲ್ಲಿಕಾರ್ಜುನ ಹೊಸಪಾಳ್ಯ, ಭೂಷಣ್, ಆಗಲೇ ತುಮಕೂರಿನಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಕುರಿತು ಮಾತನಾಡುತ್ತಿದ್ದರು.

ಕಾರ್ಯಕ್ರಮದ ಕುರಿತು ಬರೆಯಲು ಹೋದರೆ ಬರೆಯುವುದು ಬಹಳಷ್ಟಿದೆ. ಇವತ್ತು ಉಳಿದ ಕೆಲಸಗಳು ಹಾಗೇ ಉಳಿದುಬಿಟ್ಟಾವು. ಹೀಗಾಗಿ ಕೆಲವು ಫೋಟೋಗಳನ್ನು ಹಾಕಿ ನಾನು ಇಂಗ್ಲೀಷಿನಲ್ಲಿ ಬರೆದ ಬ್ಲಾಗ್ ಪುಟದ ಲಿಂಕ್ ಹಾಕಿಬಿಡುವೆ.
ಒಟ್ಟಾರೆ ತುಮಕೂರಿನ ಆಸಕ್ತರೊಂದಿಗೆ ಮಾತನಾಡುತ್ತ ಕಳೆದ ಸಮಯ ಖುಷಿ ಕೊಟ್ಟಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರಿಗೂ ವಂದನೆಗಳು, ಕಾರ್ಯಕ್ರಮ ಆಯೋಜಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ ಸಂಪದಿಗರಾದ ಸಮೃದ್ಧಿ ಸಂಸ್ಥೆಯ ಭೂಷಣ್, ಧಾನ್ಯ ಸಂಸ್ಥೆಯ ಮಲ್ಲಿಕಾರ್ಜುನ್ ಹೊಸಪಾಳ್ಯ - ಇವರಿಗೆ ವಂದನೆಗಳು ಸಲ್ಲಬೇಕು. ಕಾರ್ಯಕ್ರಮ ನಡೆಸಿಕೊಡುವಲ್ಲಿ ಪಾಲ್ಗೊಂಡ ಸಂಪದಿಗರಾದ ಮುರಳಿ, ಶಿವು, ವಸಂತ, ಅನಿಲ - ಇವರಿಗೆ many thanks. ತಂತ್ರಜ್ಞಾನದ in-depth knowledge ಇರುವವರಿಗೆ ತೀರ ಸಾಧಾರಣ ವಿಷಯಗಳ ಬಗ್ಗೆ ಮಾತನಾಡುವುದು ಕಷ್ಟ. ಆದರೆ ಇದು ಬಹಳ ಸುಲಭವಾಗಿ ಸಾಧ್ಯ ಎನ್ನುವಂತೆ ಮಾಡಿದವರು ಇವರುಗಳು. ಕಾರ್ಯಕ್ರಮಕ್ಕೆ ಹಣಕಾಸಿನ ಸಹಾಯ ಒದಗಿಸಿದ ಅರ್ಘ್ಯಂ ಸಂಸ್ಥೆಗೆ ಕೂಡ ವಂದನೆ.

ನಾನು ಮಾತ್ರ ಗಂಟಲು ಕೆಡಿಸಿಕೊಂಡು ಮಾತನಾಡಲಾಗದಂತಾದ್ದರಿಂದ ಹೆಚ್ಚು ಯಾರೊಂದಿಗೂ ನನಗೆ ಮಾತನಾಡಲಾಗಲಿಲ್ಲ. ಮತ್ತೊಮ್ಮೆ ಸಿಗೋಣ! ತುಮಕೂರಿಗೆ ಇನ್ನು ಬರ್ತಾ ಇರ್ತೇವೆ :-)

ಕಾರ್ಯಕ್ರಮದ ಕುರಿತು ನನ್ನ ಇಂಗ್ಲೀಷ್ ಬರಹ (ರೌಂಡ್ ಅಪ್):
http://hpnadig.net/Tumkur-event-Nira-Nischinte

ಮತ್ತಷ್ಟು ಚಿತ್ರಗಳು:
http://picasaweb.google.com/hpnadig/NiraNischinteTumkur

Rating
No votes yet

Comments