ನೀಲಿ ಕಣ್ಣಿನ ಹುಡುಗ

ನೀಲಿ ಕಣ್ಣಿನ ಹುಡುಗ

ಸ೦ಪದಗರಿಗೆಲ್ಲಾ ಯುಗಾದಿಯ ಶುಭಾಶಯಗಳು...

ನೀಲಿ ಕಣ್ಣಿನ ಹುಡುಗ...
------
ನೋವು ತರುವುದು ತರವೇ ಗೆಳೆಯನೆ
ಒಲವ ಹರವು ಹರಿಯದೇ?
ಸಹಿಸಲಾರೆನು ಇನ್ನು ವಿರಹವ
ಇನಿಯ ನನ್ನಲಿ ಕೋಪವೇ?

ನೀಲಿ ಕಣ್ಣಿನ ಹುಡುಗ ನಿನ್ನಯ
ನೋಟದಿ೦ದಲೆ ಧನ್ಯತೆ
ಹಾಡ ಹಾಡಿದೆ ಹೃದಯವೆಲ್ಲವೂ
ನಿನ್ನ ಧ್ಯಾನದಿ ಏಕತೆ |

ಸವಿಯ ನುಡಿಯಲಿ ಮೋಹಗೊಳಿಸುತ
ಪ್ರೀತಿ ಬೀಜವ ಬಿತ್ತಿದೆ
ನಿನ್ನ ಮನಸಿನ ತೋಟದಲ್ಲಿಯೆ
ಹೂವು ಆಗಲು ಬಯಸಿಹೆ |

ಕದುಪು ಅರುಣನ ಬಣ್ಣವೆತ್ತಿದೆ
ನಿನ್ನ ಮಧುರ ನೆನಪಿಗೆ
ಭಾವ ಸಾಗರದಲ್ಲಿ ಮೀಯುತ
ಮನವು ನಿನ್ನನೇ ಅರಸಿದೆ |

ಜೀವ ಪಯಣಕೆ ಜಗದ ನಿಯಮಕೆ
ನೀನದಲ್ಲೆಕೆ ಕರ್ತೃವು
ಗೆಳತಿ ರಾಧೆಯ ಕಣ್ಗಳಲ್ಲಿಯೇ
ಶ್ಯಾಮ ನಿನ್ನಯ ರೂಪವು

..ಅನ೦ತ್

Rating
No votes yet

Comments