ನೀವು ಕೇಳಿರಬಹುದಾದ ನಗೆಹನಿಗಳು

ನೀವು ಕೇಳಿರಬಹುದಾದ ನಗೆಹನಿಗಳು

ಕೋರ್ಟನಲ್ಲಿ ನ್ಯಾಯಾಧೀಶ ಚಿತ್ರ ನಟಿಗೆ ಕೇಳಿದ - ನಿಮ್ಮ ವಯಸ್ಥೆಷ್ಟು ?
ಅವಳು ವೈಯಾರ ದಿಂದ ಹೇಳಿದಳು - ನಾನು ಇಪ್ಪತ್ತು ವಸಂತಗಳನ್ನು ನೋಡಿದ್ದೇನೆ.
ನ್ಯಾಯಾಧೀಶ ಕೇಳಿದ - ನೀವು ಎಷ್ಟು ವರುಷ ಕುರುಡಾಗಿದ್ರಿ ?
----

ಭಾಷಣಕಾರ- ನಾನು ಮಾತಾಡುತ್ತ ತುಂಬಾ ಹೊತ್ತಾಯಿತು , ಗೊತ್ತೇ ಆಗಲಿಲ್ಲ, ನನ್ನ ಹತ್ರ ವಾಚ್ ಬೇರೆ ಇಲ್ಲ....
ಸಭಿಕರಲ್ಲಿ ಯಾರೋ ಕೂಗಿದರು - ಆದರೆ ಅಲ್ಲಿ ಕ್ಯಾಲೆಂಡರ್ ಇತ್ತಲ್ಲ?!

---
- ನಮ್ಮ ಹೋಟೆಲಿನಲ್ಲಿ ನಿಮ್ಮ ಮನೆ ಅಡಿಗೆಯ ರುಚಿಯದೇ ತಿಂಡಿ ತಿನಿಸು ಸಿಗುತ್ತವೆ
- ಹಾಗೋ ? ಹಾಗಾದರೆ ನಾನು ಬೇರೆ ಹೊಟಲ್ ನೋಡಿಕೊಳ್ತೀನಿ

Rating
No votes yet