ನೀವೂ ಕನ್ನಡ ಶಬ್ದಕೋಶ ಓದಿ

ನೀವೂ ಕನ್ನಡ ಶಬ್ದಕೋಶ ಓದಿ

ಹಿಂದೆ ಕನ್ನಡ ಶಬ್ದಕೋಶ ಕುರಿತು ಇಲ್ಲಿ ಬರೆದಿದ್ದೆ .

ನಾನು ಓದುತ್ತ ಇದ್ದದ್ದು ಗುರುನಾಥ ಜೋಶಿ ಎಂಬವರ ಕನ್ನಡ-ಕನ್ನಡ ಶಬ್ದಕೋಶ. ಕವಲಿ ಯವರದು ಸ್ವಲ್ಪ ಅಡ್ವಾನ್ಸಡ್ ಇರುವದರಿಂದ ಇದನ್ನು ಓದಿದ ಮೇಲೆ ಓದುವೆ. ನಾನು ಕಂಡುಕೊಂಡ ಶಬ್ದಗಳು , ಹೊಸ ಶಬ್ದಗಳು ,ಸಂಬಂಧಿತ ಶಬ್ದಗಳು , ಬಳಕೆಯಲ್ಲಿರುವ ಸಂಸ್ಕೃತ ಶಬ್ದಗಳಿಗೆ ಕನ್ನಡದ ಶಬ್ದಗಳು ಇತ್ಯಾದಿ ಇತ್ಯಾದಿ ಸ್ವಲ್ಪ ನೋಡೋಣ ಬನ್ನಿ.

 ಅಡಿ - ಅಡಿಗಲ್ಲು - ಅಡಿಗಾಣು (ತಳಕಾಣು) - ಅಡಿಮುಟ್ಟ (ತಳದವರೆಗೆ)- ಅಡಿಮೆ (ದಾಸ್ಯ - ಅಡಿಯ (ಆಳು) -ಅಡಿಯಿಡು - ಅಡು(ಬೇಯಿಸು) -ಅಡುಗೆ- ಅಡುಕೂಳು (ಬೇಯಿಸಿದ ಅನ್ನ) -ಅಡುಗೂಲಜ್ಜಿ (ಇತರರಿಗೆ ಅಡಿಗೆ ಮಾಡಿ ಹಾಕುವವಳು) - ಅಡುಬಾಣಲೆ (ಅಡುಗೆಯ ಬಾಣಲೆ)

 ಅಡ್ಡ - ಅಡ್ಡಗಟ್ಟು , ಅಡ್ಡಕಟ್ಟೆ -ಅಡ್ಡಕಥೆ (ಪ್ರಾಸಂಗಿಕ/ಉಪ ಕಥೆ) - ಅಡ್ಡ ಕಸುಬು (ನಡತೆ ತಪ್ಪಿ ಮಾಡುವ ಉದ್ಯೋಗ) - ಅಡ್ಡನಗೆ (ಬಿಗಿ ಹಿಡಿದ ಅರ್ಧ ನಗೆ) ಅಡ್ಡನಾಮ ( ಸ್ಮಾರ್ತರ ನಾಮ , ಮನೆತನದ ಹೆಸರು) - ಅಡ್ಡನಾಲಿಗೆ - ಅಡ್ಡನುಡಿ( ವಿರ್‍ಓಧದ ನುಡಿ) ಅಡ್ಡಪಂಕ್ತಿ- ಅಡ್ಡಪಲ್ಲಕ್ಕಿ - ಅಡ್ಡಮಳೆ ( ಕಾಲದಲ್ಲಿನ ಮಳೆ)- ಅಡ್ಡವಾರ ( ಸಂತೆಯಿಲ್ಲದ ಸಾಮಾನ್ಯ ದಿನ)- ಅಡ್ಡಾಗು(ಒರಗು) - ಅಡ್ಡಾಡು -ಅಡ್ಡಿ 

 ಅತೋನಾತು - ಬಹಳ

ಅತಿ - ಬಹಳ

ಅದುರು -( ನಡುಗು ,ಕಂಪಿಸು)

ಅದೃಷ್ಯ -ಕಾಣದ

 ಅಧ- ಕೆಳಗೆ

ಅಧರ - ತುಟಿ , ಕೆಳದುಟಿ

ಅಧಿಕ (ಹೆಚ್ಚು , ಬಹಳ)- +ಮಾಸ +ಪ್ರಸಂಗ +ಸಂವತ್ಸರ +ವರ್ಷ ಇತ್ಯಾದಿ

ನೀವೂ ಏಕೆ ಒಂದು ಶಬ್ದಕೋಶ ಖರೀದಿಸಿ ಓದಲಾರಂಭಿಸಬಾರದು? ಪುರುಸೊತ್ತಾದಾಗ ಒಂದಿಷ್ಟು ಓದುತ್ತ ಇರಿ . ನಾನು ಗಮನಿಸಿದ ಹಾಗೆ

೧. ಹೆಚ್ಚು ಶಬ್ದಗಳು ಸಂಸ್ಕೃತದ್ದೇ- ಒಂದು ಕಾಲದ ಸಾಹಿತ್ಯದಲ್ಲಿ ಸಂಸ್ಕೃತ ಬಹಳಷ್ಟು ಸೇರಿಕೊಂಡದ್ದರಿಂದ ಇವನ್ನು ಸಾಹಿತ್ಯಾಭ್ಯಾಸಿಗಳಿಗೆ ಅನುಕೂಲವಾಗಲೆಂದು ಸೇರಿಸಿದ್ದಿರಬಹುದು.

೨. ನಾವು ಅರ್ಥ ಗೊತ್ತಿಲ್ಲದೇ ಬಳಸುವ ಶಬ್ದಗಳಿಗೆ ಅರ್ಥ ಗೊತ್ತಾಗುವದು .

೩. ನಾವು ಮರೆಯುತ್ತಿರುವ ಅನೇಕ ಕನ್ನಡ ಶಬ್ದಗಳು ನೆನಪಾಗುವವು.

೪. ಸಂಗನಗೌದರು ಹಿಂದೆ ಒತ್ತಕ್ಕರ ಸಂಬಂದಿಸಿದಂತೆ ಹೇಳಿದ ವಿಚಾರ ನಿಜ ಎಂದೂ ಮತ್ತು 'ವ'ದಿಂದ ಆರಂಭವಾಗುವ ಶಬ್ದಗಳು ನಮ್ಮಲ್ಲಿಲ್ಲ ಎಂಬುವದು ಖಚಿತವಾಗುವದು.

೫. ಹೊಸ ಶಬ್ದ ರಚನೆಗೆ ವಿಚಾರಗಳು ಲಭಿಸುವವು.

Rating
No votes yet

Comments