ನೀವೂ ಮಾಡಿ ನೋಡಿ ... [ನಿಮ್ಮ ಡಾಕ್ಟರಿಗೆ ಅಭ್ಯಂತರವಿಲ್ಲದಿದ್ದರೆ]
ಇಂದು ಬೆಳಿಗ್ಗೆ ನನ್ನ ಮಟ್ಟಿಗೆ 'ಬೇಗ' ಎನ್ನಬಹುದಾದ ವೇಳೆಗೇ ಎದ್ದಿದ್ದರಿಂದ ಚಹಾ ಮಾಡಿಕೊಳ್ಳಲು ಸಮಯವಿತ್ತು. ಚಹಾ ಕುಡಿಯಲು ಶುರು ಮಾಡಿದಾಗ ಚಹಾಕ್ಕೆ ಸಕ್ಕರೆ ಸ್ವಲ್ಪ ಕಡಿಮೆ ಆಯಿತು ಎಂದು ಅನಿಸಿತು. ಸಕ್ಕರೆ ಡಬ್ಬ ಕೈಗೆ ತೆಗೆದುಕೊಳ್ಳುವಷ್ಟರಲ್ಲಿ ಕರೆಂಟ್ ಕೈ ಕೊಟ್ಟಿತು. ಚಮಚವಿಲ್ಲದೇ, ಹಾಗೇ ಒಂದಿಷ್ಟು ಸಕ್ಕರೆ ಕಪ್ ಗೆ ಹಾಕಿದೆ. ಆಗ ಹತ್ತಿರದಲ್ಲಿದ್ದ ತುಪ್ಪದ ಡಬ್ಬದಲ್ಲಿ ಚಮಚ ಕಂಡಿತು. ಅದೇ ಚಮಚವನ್ನು ಬಳಸಿ ಸಕ್ಕರೆಯನ್ನು ಕರಡತೊಡಗಿದಾಗ ಚಮಚದೊಡನೆ ಬಂದಿದ್ದ [ದೆಹಲಿಯ ಚಳಿಗೆ ಗಟ್ಟಿಯಾಗಿದ್ದ] ತುಪ್ಪಕರಗುತ್ತ ತನ್ನ ಸುವಾಸನೆ ಬೀರಿತು. ಮತ್ತೊಮ್ಮೆ ಚಹಾದ ಕಪ್ಪನ್ನು ತುಟಿಗಿಟ್ಟುಕೊಂಡಾಗ 'ಆಹಾ' ಎಂಬ ಉದ್ಗಾರ ತನ್ನಿಂತಾನೆ ಬಂತು. ಏಕೆಂದರೆ, 'ತುಪ್ಪ'ದ ಚಹಾ ನಿಜಕ್ಕೂ ರುಚಿಯಾಗಿತ್ತು.
ಮತ್ತೆ, ಸಂಜೆ ಚಹಾ ಮಾಡಿಕೊಂಡೆ. ಆಗ ಬೇಕೆಂತಲೇ ಸ್ವಲ್ಪ ತುಪ್ಪ ಸೇರಿಸಿದೆ. ಚೆನ್ನಾಗೇ ಇತ್ತು.
ನೀವೂ ಮಾಡಿ ನೋಡಿ [ನಿಮ್ಮ ಡಾಕ್ಟರಿಗೆ ಅಭ್ಯಂತರವಿಲ್ಲದಿದ್ದರೆ] ...
Rating