ನೀವ್ಯಾರು??
ಹೀಗೊಂದು ಪ್ರಸಂಗ! ನಾ ಬೆಂಗಳೂರಿಗೆ ಬಂದಾಗಿನಿಂದ ಇರುವುದು ನನ್ನ ದೂರದ ಸಂಬಂಧಿಕರು ಹಾಗೂ ಆತ್ಮೀಯರೊಬ್ಬರ hostelನಲ್ಲಿ. ಆತ ತುಂಬಾ creative ಮನುಷ್ಯ ಹಾಗೆ ಸ್ವಲ್ಪ ಮುಂಗೋಪಿ ಕೂಡ. ತನ್ನ ಜಾಗದಲ್ಲಿರುವವರನ್ನ ಅತ್ಯಂತ ಪ್ರೀತಿಯಿಂದ ಕಾಣುವಾತ. ತಂದೆಯ ಪೂಜೆಯಿದ್ದರೆ ಮನೆಗೆ ಕರೆಯುವುದು ,ವರ್ಷಕೊಮ್ಮೆ ಎಲ್ಲರನ್ನೂ ತನ್ನೂರಿಗೆ ಕರೆದು ಕೊಂಡು ಹೋಗುವುದು. ಇದೆಲ್ಲದರ ಜೊತೆ ತನ್ನhostelನಲ್ಲಿ ಇರುವ ಹುಡುಗರು ಒಟ್ಟಾಗಿರಬೇಕು ತೊಂದರೆ ಕೊಟ್ಟರೆ ಜಾಗ ಖಾಲಿ ಮಾಡಿ ಅನ್ನೋ ಮನೋಭಾವ ಅವರದು. ಹೀಗೊಮ್ಮೆ ಒಂದು ಕಾರಣಕ್ಕೆ ಏರಿಯಾ ಬಂದ್ ಮಾಡಿದ್ದರು . ಕಾರಣ ತುಂಬಾ silly ಏರಿಯಾದ ದೊಡ್ಡವರೊಬ್ಬರು ತೀರಿ ಕೊಂಡಿದ್ದರು ಅದಕ್ಕೆ ಬಂದ್! ಇವರ buildingನಲ್ಲಿ ಹಲವಾರು ಅಂಗಡಿಗಳು. ಚಿಕ್ಕದಾದ ಒಂದು ಹೊಲಿಯುವ ಅಂಗಡಿ ಕೂಡ ಒಂದು. ಏರಿಯಾದ ಅಂಗಡಿಗಳನ್ನೆಲ್ಲ ಒಂದು ಕಡೆಯಿಂದ ಮುಚ್ಚಿಸಿಕೊಂಡು ವಾನರ ಸೇನೆ ಇವರ ಅಂಗಡಿಗಳತ್ತ ಬಂತು. ಅದರ ಲೀಡರ್ ಬಿಳಿ ಶರ್ಟ್ ಬಿಳಿ ಪ್ಯಾಂಟ್ ಹಾಕಿಕೊಂಡು ಬಂದು ಸಾಕಪ್ಪ ಅಂಗಡಿ ಮುಚ್ಚು ಅಂದ. ಅಲ್ಲೇ ನಿಂತಿದ್ದ ಇವರು ಯಾಕಪ್ಪಾ ಸತ್ತವನು ನಿಮ್ಮ ಚಿಕ್ಕಪ್ಪನ ಮಗನೋ ದೊಡ್ಡಪನ ಮಗನೋ?? ಸರಿ ಅಂಗಡಿ ಮುಛ್ತೀವಿ ಈವತ್ತು ಎಷ್ಟು ಸಂಪಾದನೆ ಆಗುತ್ತೋ ಅಷ್ಟು ನೀನು ಕೊಡು ಅಂದರು! ವಾನರ ನಾಯಕ ತಣ್ಣಗಾಗಿ ಹೋದ! ವಾನರ ಸೇನೆ ಅಲ್ಲಿಂದ escape! ಈ ವಿಷಯ ಪ್ರಸ್ತಾಪ ಮಾಡೋದಕ್ಕೆ ಕಾರಣ ಎರಡು ಘಟನೆಗಳು! ಒಬ್ಬ ನಟನ ಚಿತ್ರ ನೋಡಿ ನೋಡಬೇಡಿ ಅಂತ ಹೇಳೋದಕ್ಕೆ ಒಬ್ಬರು. ನಾಯಕನಿಗೋಸ್ಕರ ಅಂಗಡಿ ಮುಚ್ಚಿ, ಮಕ್ಕಳು ಸ್ಕೂಲ್ಗೆ ಹೋಗಬಾರದು ಬಸ್ಸು ಕಾರು ಓಡಾಡಬಾರದು ಅಂತ ಹೇಳೋದಕ್ಕೆ ಇನ್ನೊಬ್ಬರು! ಅಷ್ಟಕ್ಕೂ ಇವರೆಲ್ಲ ಯಾರು?? ವೀರ ಯೋಧರೆ?? ದೇಶ ಸೇವೆ ಮಾಡಿದವರೇ ಅಥವಾ ಜನ ಸೇವೆ ಮಾಡಿದವರೇ?? ಯಾವುದು ಅಲ್ಲ. ಆಗಾಗ ದಂಗೆ ಎಬ್ಬಿಸಿ ಜನರನ್ನು ಜಾತಿ, ಮತದಿಂದ divide ಮಾಡಿ ತಮ್ಮ ಬೇಳೆ ಬೇಯಿಸಿಕೊಳ್ಳೋರು!
incredibleindia.org, ಅತಿಥಿ ದೇವೋಭವ ಅಂತ ಆಮೀರ್ ಖಾನ್ ನಡೆಸಿ ಕೊಡುವ ಜಾಹೀರಾತು ಇದಕ್ಕೊಂದು ಅತ್ಯುತ್ತಮ ಉದಾಹರಣೆ! ದೇಶ ಕಾಯುವ ಯೋಧ ಒಂದು ಕಡೆಯಾದರೆ ದೇಶಕ್ಕೆ ಕಳಂಕ ತರುವವರು ಇನೊಂದೆಡೆ! ಹುಡುಕಿ ಹುಡುಕಿ ನೋಡಿದರು ಇವರಿಂದ ಒಂದು ಒಳ್ಳೆಯ ಕೆಲಸಗಳಾಗಿರುವುದಿಲ್ಲ ಅಥವಾ ನಾಡು ನುಡಿ ಭಾಷೆಗೋಸ್ಕರ ಹೋರಾಟ ಮಾಡಿರುವ ಯಾವುದೇ history ಇರುವುದಿಲ್ಲ! ಇವರು ಕಾಣಿಸಿಕೊಳ್ಳುವುದು ಎಲ್ಲರೂ ಇವರನ್ನು ಮರೆತೇ ಹೋದೆವು ಅನ್ನುವಾಗ ಅಥವಾ ಪ್ರೇಮಿಗಳ ದಿನಾಚರಣೆಗಳ ಸಂಧರ್ಬದಲ್ಲಿ! ಮತ್ತೊಂದು ವಿಷಯ ಗಮನಿಸಿ ನೋಡಿ ನಮ್ಮ ನಾಡು ನುಡಿ ಭಾಷೆಗೆ ತೊಂದರೆಯಾದಾಗ ಚಳುವಳಿಗಳಿಗೆ ಸಂಘದ ನಾಯಕರೇ ಮುಂದಾಳತ್ವ ವಹಿಸುತಾರೆ. ಆದರೆ ವಾನರ ಪಡೆಯ ವಿಷಯಕ್ಕೆ ಬಂದರೆ ನಾಯಕ ಮಾತ್ರ ಮಾಯಾ! ಇವರೆಲ್ಲೂ ಕಾಣಿಸಿ ಕೊಳ್ಳುವುದಿಲ್ಲ ತಮ್ಮ ಸೇನೆಯನ್ನು ಮುಂದೆ ಬಿಟ್ಟು ತಾವೇಲ್ಲೋ ಇರುತಾರೆ! ಇಂಥವರಿಗೇನನ್ನಬೇಕು ??
ನಾವೆಲ್ಲರೂ ಮನಸ್ಸು ಮಾಡಿದರೆ ಏನು ಮಾಡಬಹುದು ಅನ್ನೋದಕ್ಕೆ ಮೊನ್ನೆ ನಡೆದ ಘಟನೆಗಳೇ ಸಾಕ್ಷಿ! ನಮ್ಮನ್ನ ತಡೆಯೋದಕ್ಕೆ ನೀವ್ಯಾರೂ ಅಂತ ಜನ ನಿರ್ಧರಿಸಿ ಬಂದು ಸಿನಿಮಾ ನೋಡಿದರು! ಒಂದು ಹೊಸ ಅಲೆ ಬರಲಿ! ನಮಗೇನೂ ಬೇಕು ಬೇಡ ಅನ್ನೋದು ನಾವೇ ನಿರ್ಧರಿಸೋಣ! ಮಂಗನ ಕೈಲಿ ಮಾಣಿಕ್ಯ ಕೊಡೋದು ಬೇಡ!
ಮತ್ತೊಂದು ಮಾತು ವಿಷ್ಣುಜಿ ಕೊನೆಯ ಚಿತ್ರ “ಆಪ್ತ ರಕ್ಷಕ” ೧೮ರಂದು release ಆಗ್ತಿದ್ದೆ ನಾನಂತೂ ಹೋಗ್ತಿದಿದ್ದೀನಿ ನೀವು??
Comments
ಉ: ನೀವ್ಯಾರು??