ನೀ ನಾ ನಾ ನೀನಾಗೆ. . . .

ನೀ ನಾ ನಾ ನೀನಾಗೆ. . . .

ನೀ ನಾ ನಾ ನೀನಾಗೆ. . . .

 

ಮೊನ್ನೆ 09-5-2011ರಂದು ಕೆರೇಕೈ ಶ್ರೀಮತಿ ಶುಭಾ ಮತ್ತು ಶ್ರೀಕಾಂತ  ಇವರ ಪುತ್ರ ಶ್ರೇಯಾಂಕ ಶರ್ಮನ ಚೌಲ ಮಹೋತ್ಸವದ ಅಂಗವಾಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡಮಿಗಳ ಸಹಯೋಗದೊಂದಿಗೆ  ಸಂಜೆ 7 ಗಂಟೆಯಿಂದ ತಲವಾಟ ಶಾಲಾ ಆವರಣದಲ್ಲಿ ಹಳ್ಳಿ ಮನೆ ಯಕ್ಷೋತ್ಸವ, ಗುರುವಂದನೆ, ಗೋಷ್ಟಿ - ಲವಕುಶ ಮತ್ತು ಭೌಮಾಸುರ ಕಾಳಗ ಯಕ್ಷಗಾನ ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗಿತ್ತು.

ಯಕ್ಷಗಾನ ಅಕಾಡೆಮಿ ಸದಸ್ಯ ವಿದ್ವಾನ್ ದತ್ತಮೂರ್ತಿ ಭಟ್ ರ ನೇತೃತ್ವದಲ್ಲಿ ನಡೆದ ಪ್ರದರ್ಶನದಲ್ಲಿ  ಮಹಿಳಾ ಕಲಾವಿದೆ ಸೌಮ್ಯ ಅರುಣ ಕೃಷ್ಣನಾಗಿ, ಹಾಗೂ ಯಲ್ಲಾಪುರದ ಅಚ್ವೆ  ಸದಾಶಿವ ರುಕ್ಮಿಣಿಯಾಗಿ, ಗಂಡು ಹೆಣ್ಣಾಗಿ ಹೆಣ್ಣು ಗಂಡಾಗಿ ಅಭಿನಯಿಸಿದ್ದೊಂದು ವಿಶೇಷ. 

ಸುತ್ತಮುತ್ತಲ - ಹವ್ಯಾಸಿ ಕಲಾವಿದರೇ ಹೆಚ್ಚಾಗಿ ಭಾಗವಹಿಸಿದ್ದ ಯಕ್ಷಗಾನ ಪ್ರದರ್ಶನ ಚನ್ನಾಗಿತ್ತೆಂದು ಮಾತ್ರಾ ಹೇಳಬಲ್ಲೆ.

Rating
No votes yet