ನೂರಾರು ಹೀನದಲಿ -ಮೂಲ ಲೇಖಕರು ಯಾರು?
ನೂರಾರು ಹೀನದಲಿ ನೀ ಎನ್ನ ನೂಕುತಿಹೆ ಮುಳುಗುತಿರೆ ಮತ್ತೆ ಮೇಲೆತ್ತುತ್ತಿರುವೆ
ನೂರಾರು ದೈನ್ಯದಲಿ ನೀ ಎನ್ನ ಎಸೆಯುತಿಹೆ ಕನಿಕರಿಸಿ ಮರಳಿ ಮೇಲೆತ್ತುತ್ತಿರುವೆ
ಒಮ್ಮೆ ಅವ್ವುಗಳನರಿಯೇ, ಒಮ್ಮೆ ನಾನರಿಯದೇ ಮೊರೆಯಿಡುವೆ ಸಲಹೆಂದು ಪರಮಗುರುವೇ
ಸಂಸಾರಸಾಗರದೊಳೆನಗೆ ಈಜು ಕಲಿಸುತಿಮ್ಮ್ ಇಂತೆನ್ನ ನೋಡಿಪೆಯೋ ಎನ್ನ ದೊರೆಯೇ ||ನೂರಾರು ಹೀನದಲಿ||
ರೆಕ್ಕೆ ಬಲಿತಿಹ ಮರಿಗೆ ತಾಯ್ವಕ್ಕಿಹಕ್ಕೆಯಿಂ ಕೆಳಗೆಸೆದು ಹಾರುವುದ ಕಲಿಸಿದಂತೆ
ಕೆಳಗೆಸೆದು ಮೇಲೆತ್ತಿ ಕೆಚ್ಚೆದೆಯ ಕಲಿಸುತಿಹೆ , ಬಲಿತ ರೆಕ್ಕೆಗೆ ಬಲವ ನೀಡಿದಂತೆ ||ನೂರಾರು ಹೀನದಲಿ||
ಫಾಯಜ್ ಖಾನ್ ತಮ್ಮ ಬಹುತೇಕ ಕಛೇರಿಯಲ್ಲಿ ಹಾಡುವ ಈ ಅರ್ಥಬರಿತ ಹಾಡಿನ ಮೂಲ ಲೇಖಕರು ಯಾರೆಂದು ಯಾರಿಗಾದರು ಗೊತ್ತಿದ್ದರೆ ತಿಳಿಸಿಕೊಡಿ.
ನಿಮ್ಮ
ಕಾಮತ್ ಕುಂಬ್ಳೆ
Rating