ನೆತ್ತರು ಕೊಡಿ , ಉಸಿರುಗಳನ್ನು ಉಳಿಸಿ

ನೆತ್ತರು ಕೊಡಿ , ಉಸಿರುಗಳನ್ನು ಉಳಿಸಿ

ನೆನ್ನೆ ನಾನು ನನ್ನ ನೆತ್ತರು ಬೀರಲು/ದಾನ ಮಾಡಲು ಹೋದಾಗ ಹಲವು ಅರಿಮೆಗಳು ಗೊತ್ತಾದವು.

೧) ನೆತ್ತರು ಕೊಡುವುದರಿಂದ ಯಾವುದೇ ಕೆಡುಕಿಲ್ಲ. ಬದಲಾಗಿ ಹಲವು ಬಳಕೆಗಳಿವೆ.
೨) ನಮಗೆ ಬೇಕಾಗಿರದ ಹೆಚ್ಚಿರುವ ಕಬ್ಬಿಣದ ಅಂಶಗಳು, ಕೊಲೊಸ್ಟರಾಲ್  ನೆತ್ತರು ಕೊಡುವುದರಿಂದ ಕಡಿಮೆಯಾಗುತ್ತದೆ. ಇದರಿಂದ ಕಾಯಕ್ಕಾಗುವ ಸುಸ್ತು ಕಡಿಮೆಯಾಗುತ್ತದೆ.
೨) ಹಲವಾರು ಮಂದಿ ಸರಿಯಾದ ಹೊತ್ತಿಗೆ ನೆತ್ತರು ಸಿಗದೆ ಸಾಯುತ್ತಿದ್ದಾರೆ.
೩) ನೆತ್ತರು ಕೊಡುವುದರಿಂದ ಗುಂಡಿಗೆಹೊಡೆತ/ಹೃದಯಾಘಾತದಿಂದಾಗುವ ಸಾವನ್ನು ೮೦% ರಶ್ಟು ತಪ್ಪಿಸಬಹುದು.

ನೆನ್ನೆ ನಾನು ನೆತ್ತರು ಕೊಟ್ಟು ಅರೆ ಗಂಟೆಯೊಳಗೆ ಎಂದಿನಂತೆ ಓಡಾಡುತ್ತಿದ್ದೆ. ಯಾವ ತೊಂದರೆಯೂ ಆಗಲಿಲ್ಲ.

ಬನ್ನಿ, ನೆತ್ತರು ಕೊಟ್ಟು ಉಸಿರು/ಜೀವಗಳನ್ನು ಉಳಿಸೋಣ ಮತ್ತು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳೋಣ.

ಇದಕ್ಕಿಂತ ಒಳ್ಳೆಯ ಕೆಲಸ ನಾವು ಮಾಡಕ್ಕಾಗುತ್ತದೆಯೇ?

 

 

Rating
No votes yet

Comments