ನೆನಪಿನ ಸಂಪುಟ ...

ನೆನಪಿನ ಸಂಪುಟ ...

"ಬದುಕಿನ ಸಂಕೀರ್ಣದಲ್ಲಿ ನಾವು ಸಂತೋಷವಾಗಿದ್ದಿವಿ ಅಂದುಕೊಂಡರೆ ಆಗಿದ್ದಿವಿ, ಇಲ್ಲ ಅಂದುಕೊಂಡರೆ ಇಲ್ಲ". ೪ ವರುಷಗಳ ನೆನಪಿನ ಸಂಪುಟದಲ್ಲಿ ಸಂಪದ ಮತ್ತು ಸಿ ಜಿ ಐ ನ ಪರಿಮಳ ತುಂಬಿಕೊಂಡಿದೆ. ೨೦೦೭ ರಲ್ಲಿ ೮ನೇ ಸೆಂನ "kantex2html" ಪ್ರಾಜೆಕ್ಟ್ ಅಲ್ಲಿ ಮೂಡಿದ ಕನ್ನಡ ಆಸಕ್ತಿ ದಿನೇ ದಿನೇ ಹೆಚ್ಚುತ್ತಿದೆ. ಪ್ರಾಜೆಕ್ಟ್ ನಲ್ಲಿ ಪ್ರಯತ್ನಿಸಿದ ವಿವಿಧ ಪ್ರಯೋಗಗಳು ಕನ್ನಡ ಮತ್ತು ತಾಂತ್ರಿಕ ಜ್ಞಾನ ಬೆಳೆಸಿತು. MSRITಲ್ಲಿ ನಮ್ಮ ಪ್ರಾಜೆಕ್ಟ್ ಗೆ ಸಂದ ಬಹುಮಾನದ ಸಂತಸ ಇನ್ನು ನೆನಪಿದೆ.  ವಿರಾಮ ವೇಳೆಯಲ್ಲಿ ಆನ್ಲೈನ್ನಲ್ಲಿ  ಓದಲು ಬರೆಯಲು ಪ್ರಾರಂಭಿಸಿದೆ.ಪ್ರತಿಯೊಂದು ಪದಗಳ ಪೋಣಿಸುತಿದ್ದೆ.೮ ಆಗಸ್ಟ್ ೨೦೦೭ ರಂದು ಸಿ ಜಿ ಐ  ಸೇರಿದ್ದು (ಇಂದಿಗೆ ೪ ವರುಷ ). ಅಲ್ಲಿ ಶುರುವಾದ ಕನ್ನಡ ಮಾಸಿಕ ಇನ್ನು ಹೆಚ್ಚಿನ ಆಸಕ್ತಿ ತುಂಬಿಸಿತು. ಕಥೆ,ಕವನ,ಲೇಖನ ಓದೋದು ಬರೆಯೋದು ಪ್ರಾರಂಭವಾಯಿತು. ೪ ವರ್ಷಗಳಿಂದ ಕನ್ನಡ ಮತ್ತು ಐ ಟಿ ಕೆಲಸದ ಈ ಪಯಣ ಸಾಗುತಿದೆ.
 
ನನಗೆ ಆಗಸ್ಟ್ ತಿಂಗಳು ಯಾವಾಗಲು ಹೊಸ ಹೊಸ ಸಂತಸ ತರುವ ಮಾಸ. ೪ ವರುಷಗಳ ಇಂದೇ ಪ್ರಾರಂಭವಾದ ಐ ಟಿ ಕೆಲಸದ ಪಯಣ, ಈ ವರುಷ ಹೊಸ ಸಂಸ್ಥೆಯಲ್ಲಿ ಹೊಸ ಕೆಲಸದೊಂದಿಗೆ ಸಾಗುತಿದೆ. ಬದುಕೆಂದರೆ ನೆನಪಿನ ಸಂಪುಟ ರಚನೆ.  ಈ ಆಗಸ್ಟ್ ಇಂದ ಇ ಎಫ್ ಐ ಯೊಂದಿಗೆ ರಚನೆ ಶುರು. ಬಿಡುವಿನ ವೇಳೆಯಲ್ಲಿ ನೆನಪಿನ ಪುಟಗಳ ಅವಲೋಕನ ಮಧುರ ಭಾವನೆ ಮೂಡಿಸುತ್ತದೆ. ಒಮ್ಮೆ ಪ್ರಯತ್ನಿಸಿ ನೋಡಿ ನಿಮ್ಮ ನೆನಪಿನ ಪುಟಗಳ ಪರಿಮಳವನ್ನು :) 
 
 

 

Rating
No votes yet

Comments