' ನೆನಪು '

' ನೆನಪು '

    

ನೆನಪು ಎನ್ನುವುದು

ಕ್ಷಣಾರ್ಧವೊಂದರಲಿ

ಘಟಿಸಿ ಬಿಡುವಂತಹುದು

 

ಹಳೆಯ ಮಲ್ಲಿಗೆ ಬಳ್ಳಿ

ಹೊಸ

ಹೂವುಗಳರಳಿಸಿಕೊಂಡು

ನಿಂತು ಬಿಡುವಂತೆ

ಏಕೆ ಗೊತ್ತೆ ?

 

ಅದು ಆ ಕ್ಷಣದ ಬೆಳಕು

ಗಾಳಿ ಮತ್ತು ಪಸೆಗಳ

ನೆರವಿನಿಂದ

ಅರಳಿದಂತಹುದು !

 

ನೆನಪು ಯಾವತ್ತೂ 

ಹಳೆಯ ಘಟನೆ ಮಾತ್ರವಲ್ಲ

ಅದು ಸದಾ

ನವ ನವೀನ ಆದರೆ !

ಆ ಕ್ಷಣದ ಹಂಗು

ಅದಕೆ ಅನಿವಾರ್ಯ

ಹೀಗಾಗಿ

ನೆನಪು ಬರೀ ಭೂತವಲ್ಲ

ಅದು ವರ್ತಮಾನ ಸಹ

 

     ***

 

 

 

Rating
No votes yet

Comments

Submitted by nageshamysore Wed, 02/19/2014 - 19:30

ಪಾಟೀಲರೆ ನಮಸ್ಕಾರ, ನೆನಪಿನ ಬಯಾಪ್ಸಿ ಕಿರಿದಾಗಿ, ಸರಳವಾಗಿ, ಸೊಗಸಾಗಿ ಮೂಡಿದೆ. ಈಚೆಗೆ ತಾನೆ ನೆನೆಸುತ್ತಿದ್ದೆ ಯಾಕೊ ನೀವು ಈಚೆಗೆ ಸಂಪದದಲ್ಲಿ ಕಾಣಿಸಿಕೊಳ್ಳಲಿಲ್ಲ, ಬಿಜಿಯಾಗಿರಬಹುದೇನೊ ಅಂದುಕೊಂಡು. ನೆನಪಿಸಿಕೊಂಡಿದ್ದಕ್ಕೆ ತಕ್ಕ ಹಾಗೆ, ಉತ್ತರವಾಗಿ ನೆನಪಿನ ಕವನದೊಂದಿಗೆ ಬಂದಿರಿ :-)

Submitted by H A Patil Patil Sat, 02/22/2014 - 12:32

In reply to by nageshamysore

ನಾಗೇಶ ಮೈಸೂರು ರವರಿಗೆ ವಂದನೆಗಳು
ಇತ್ತೀಚೆಗೆ ನಮ್ಮ ತೀರ ಸನಿಹದ ಸಂಬಂಧದವರು ತೀರಿ ಕೊಂಡಿದ್ದರು ಕಳೆದ ವಾರ ಊರಿಗೆ ಹೋಗಿದ್ದೆ, ಅಲ್ಲದೆ ಕೆಲವು ದಿನ ನನ್ನ ಅನಾರೋಗ್ಯದ ಸಮಸ್ಯೆ ಹೀಗಾಗಿ ಸಂಪದಕ್ಕೆ ಬರಲಾಗಿರಲಿಲ್ಲ, ಆಚೆಮೊನ್ನೆ ಸಂಪದಕ್ಕೆ ಬರಹ ಹಾಕಿದವನು ಇಂದು ಬಂದಿದ್ದೇನೆ ನಿಮ್ಮೆಲ್ಲರ ಕಳಕಳಿಗೆ ಋಣಿ. ಈ ಸರಳ ಕವನವನ್ನು ಸಹ ಮೆಚ್ಚಿ ಪ್ರತಿಕ್ರಿಯಿಸಿದ್ದೀರಿ ನಿಮ್ಮ ಪ್ರೋತ್ಸಾಹಿಸುವ ಕ್ರಮಕ್ಕೆ ಧನ್ಯವಾದಗಳು.

Submitted by ಗಣೇಶ Wed, 02/19/2014 - 23:13

ನೆನಪು ವರ್ತಮಾನ ಸಹ! ಕವನ ಚೆನ್ನಾಗಿದೆ.

Submitted by H A Patil Patil Sat, 02/22/2014 - 12:35

In reply to by Premashri

ಮೇಡಂ ವಂದನೆಗಳು ಕವನ ಕುರಿತ ತಮ್ಮ ಮೆಚವ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು.

Submitted by H A Patil Patil Sat, 02/22/2014 - 12:34

In reply to by ಗಣೇಶ

ಗಣೇಶ ರವರಿಗೆ ವಂದನೆಗಳು ಕವನದ ಮೆಚ್ಚುಗೆಗೆ ತಮಗೆ ಧನ್ಯವಾದಗಳು.

Submitted by naveengkn Fri, 02/21/2014 - 13:24

ಪಾಟಿಲರೆ,, ನೆನಪು ಚೆನ್ನಾಗಿದೆ,,,,
ಈ ನೆನಪಿಗೆ ಅದ್ಯಾವ ನೆನಪು ಸ್ಫೂರ್ತಿ ?

Submitted by H A Patil Patil Sat, 02/22/2014 - 12:44

In reply to by naveengkn

ನವೀನ ಜಿಕೆಎನ್ ರವರಿಗೆ ವಂದನೆಗಳು
ಈ ನೆನಪಿಗೆ ಅದ್ಯಾವ ನೆನಪು ಸ್ಪೂರ್ತಿ ಎಂದಿದ್ದೀರಿ, ಸರ್ ನೆನಪು ಜೀವನಾನುಭವಗಳ ಒಂದು ಅಕ್ಷಯದ ಗಣಿ, ಎಲ್ಲ ತರಹದ ನೆನಪುಗಳೂ ಅಲ್ಲಿ ಸ್ಥಾಯಿಯಾಗಿವೆ ಅವು ಯಾವುವು ಎಂಬುದನ್ನು ಏನೆಂದು ವಿವರಿಸಲಿ, ನಿಮ್ಮ ಜೀವನಾನುಭವದ ಗಣಿಗೆ ಇಳಿಯಿರಿ ಅಲ್ಲಿ ನಿಮಗಾಗುವ ಅನುಭವವೆ ನನ್ನ ನೆನಪುಗಳೆಂದು ತಿಳಿಯಿರಿ, ಮನುಷ್ಯರಾಗಿ ನಾವೆಲ್ಲ ಒಂದೇ ಅಲ್ಲವೆ. ನನ್ನ ನೆನಪಿನ ಲೋಕ ದೀರ್ಘ ನಿಮ್ಮದು ಸ್ವಲ್ಪ ಕಡಿಮೆ ಇರಬಹುದು ಅಷ್ಟೆ ವ್ಯತ್ಯಾಸವೇನೂ ಇಲ್ಲ, ಕವನ ಮೆಚ್ಚಿ ಪ್ರತಿಕ್ರಿಯಿಸಿದ ರೀತಿ ಮುದ ನೀಡಿತು ಧನ್ಯವಾದಗಳು.

Submitted by H A Patil Patil Tue, 03/04/2014 - 14:04

In reply to by kavinagaraj

ಕವಿ ನಾಗರಾಜ ರವರಿಗೆ ವಂದನೆಗಳು
ಈ ಕವನ ಕುರಿತಾದ ತಮ್ಮ ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು.