ನೆನಪು
ಮನದ ತಟದಿ,
ಬಡಿವ ನಿನ್ನ ನೆನಪಿನಲೆಗಳು,
ಬಿಡದೆ ನನ್ನನು ಕಾಡಿ,
ಮಾಡುತಿವೆ ಅದೇನೋ ಮೋಡಿ..
ಹೊತ್ತು ತಂದ,
ಮುತ್ತು, ಚಿಪ್ಪು, ರತ್ನಗಳ,
ಎದೆಯ ತುಂಬೆಲ್ಲಾ ಹರಡಿ..
ಮಾಡಿದೆ ಅಳಿಸಲಾಗದಂತೆ..ರಾಡಿ..
ಅಲೆಗಳಪ್ಪಳಿಸುವಿಕೆಗೆ ಆಗಿರುವಾಗ,
ಬಂಡೆಗಳೇ ಪುಡಿ ಪುಡಿ..
ನಾ ಅದಾವ ಲೆಕ್ಕ ಹೇಳೇ ??
ಈ ನಿನ್ನ ಪ್ರೀತಿ ರಭಸದಡಿ..
Rating