ನೆನಪು

ನೆನಪು

ಅಂದು ಮಧ್ಯಾಹ್ನ ಮಳೆಗೇನೋ ಅರಿವಿಲ್ಲ
ನೆನೆದವರ ಪರವಿಲ್ಲ
ಯಾರೋ ಗುನುಗುತ್ತಿದ್ದ ಪ್ರೇಮಿ..
ನನಗೇಕೋ ಚಿತ್ತಚಂಚಲ..

ಕಣ್ಣೆಲ್ಲ ಮಂಜು, ಮಳೆಹನಿ
ರೆಪ್ಪೆಯೊಳಗೆ ಹೊರಟುನಿಂತ ನೀನು
ಕೇಳುತ್ತಿದ್ದುದ್ದೊಂದೆ ಕೊಡೆ ಮೇಲೆ ಬಿದ್ದ ನೀರು..
ಮತ್ತೆ ಭಾವನೆ ಅದಕ್ಕಿಂತ ಭಾರ !

ನಿಂತೆ !ಕುಸಿದಂತೆ ಭೂಮಿ !
ಮತ್ತದೇ ತವಕ,ಹೋಗಲಾರೆನೋ ಎಂದು..
ಸಾವರಿಸಿ ಓಡಿದ್ದ ನನಗೆ
ಕಾಣಿಸಿದ್ದು ಮಾತ್ರ ಕಿರುಬೆರಳ ಉಂಗುರ..

ಮುಸುಕಿದ್ದು ಧೂಳು,ಚಲಿಸಿದ್ದು ರೈಲು
ಅಲ್ಲೆಲ್ಲ ನೀರವತೆ ,ನಿಶ್ಯಬ್ಧ !
ಮರೆಯಾದರೂ ನಿನ್ನದೇ ನೆನಪು
ಮತ್ತೆಲ್ಲ ಸ್ತಬ್ಧ !!

Rating
No votes yet