ನೆನ್ನೆಯ ಘಟನೆಗಳು ಇಂದು ನಮ್ಮನ್ನು ಎಚ್ಚರಿಸಲು ಅನುಕೂಲವಾಗಬಹುದು !

ನೆನ್ನೆಯ ಘಟನೆಗಳು ಇಂದು ನಮ್ಮನ್ನು ಎಚ್ಚರಿಸಲು ಅನುಕೂಲವಾಗಬಹುದು !

ಚಿತ್ರ

 

ಹೌದು ಹಲವಾರು 'ಅನಂತ ನೆನ್ನೆಗಳು' ತಾನೇ ನಮಗೆ ಅತ್ಯುಪಯೋಗಿ 'ಇಂದು' ಎಂದು ಅನ್ನಿಸಿಕೊಂಡು 'ನೆನ್ನೆ ಇಂದುಗಳೇ,' 'ಗೊತ್ತು ಗುರಿಯಿಲ್ಲದ ನಾಳೆ'ಗಳಾಗುವುದು ! ಪಾಠ ಕಲಿಯಲು ನಾವು ಬಳಸುವುದು 'ಪಂಚತಂತ್ರದ ಕಥೆ'ಗಳನ್ನು;  'ಭಾಗವತ', 'ರಾಮಾಯಣ' 'ಮಹಾಭಾರತ'ಗಳನ್ನು ಪದೇ ಪದೇ ಪಠಣಮಾಡುವುದೂ ಅದಕ್ಕೆ. ಈಗ ನಮ್ಮ ಸುತ್ತಮುತ್ತ ನಡೆಯುವ ಘಟನೆಗಳೂ ಅಷ್ಟೇ ಮಹತ್ವದ್ದಾಗಿವೆ. 
 
ಆಗಿದ್ದೇನು ?
 
ಮುಂಬೈನ ಕುರ್ಲಾ ಉಪನಗರದಲ್ಲಿ ೨  ಮಕ್ಕಳು ಮಡದಿಯ ಜೊತೆ  ವಾಸಿಸುವ  ೩೭ ವರ್ಷದ  ಅಶೋಕ್ ತ್ರಿವೇದಿ ಎನ್ನುವ ವ್ಯಕ್ತಿ ( ಜೀವನಕ್ಕೆ  ೨ ಕೇಟರೀಸ್ ನಡೆಸುತ್ತಿದ್ದಾರೆ) ಹತ್ತಿರದ ಲೋಕಲ್ ಟ್ರೇನ್ ಜಂಕ್ಷನ್ ದಾದರ್ ನಲ್ಲಿ ಬಂದು ಪುಣೆಗೆ ಹೋಗುವ 'ಸಿ.ಎಸ್.ಟಿ-ಪುಣೆ  ಇಂಟರ್ ಸಿಟಿ ಎಕ್ಸ್ ಪ್ರೆಸ್' ರೈಲು  ಹಿಡಿಯಲು ಓಡಿ ಬಂದು ಹತ್ತಲು ಪ್ರಯತ್ನಿಸಿ ಕೈಜಾರಿ ಬಿದ್ದು ರೈಲಿನ ಬೋಗಿಯ ಕೆಳಗೆ ಸಿಕ್ಕಿಹಾಕಿಕೊಂಡರು. ಮೈತುಂಬಾ ಗಾಯವಾದರೂ ಪ್ರಾಣಕ್ಕೆ ಅಪಾಯವಾಗದೆ ಬದುಕುಳಿದರು. ೯೦ ನಿಮಿಷಗಳ ಹರಸಾಹಸದಿಂದಾಗಿ ಅವರನ್ನು ಮೇಲೆಕ್ಕೆತ್ತಿ ಹತ್ತಿರದ ಸಾಯನ್ ಆಸ್ಪತ್ರೆಗೆ ಸೆರಿಸಲಾಯಿತು. ಬೇರೆ ಪ್ರೈವೇಟ್ ಆಸ್ಪತ್ರೆಗೆ ನಂತರ ಅವರನ್ನು ಅವರ ಮಕ್ಕಳು ಸೆರಿಸಿದರು.  ಈಗ ಅವರು ಇನ್ನೂ ಚಿಕಿತ್ಸೆಯಲ್ಲಿದ್ದಾರೆ. 
 
ಏನೇನಾಯಿತು : 
 
ಅಶೋಕ್ ತ್ರಿವೇದಿ  ಸನ್. ೨ ೦೧೩ ರ, ಮೇ,  ೨೧, ಮಂಗಳವಾರ ಅವರ ಕೆಲಸದವನ ಜೊತೆ ಪುಣೆಗೆಹೊರಟರು ಮುಂಬೈನ  ದಾದರ್ ರೈಲ್ವೆ ಸ್ಟೇಶನ್ ನಲ್ಲಿ ಬೆಳಿಗ್ಯೆ ೬-೫೫  ಕ್ಕೆ  ಪುಣೆಗೆ ಹೋಗುವ 'ಸಿ.ಎಸ್.ಟಿ-ಪುಣೆ  ಇಂಟರ್ ಸಿಟಿ ಎಕ್ಸ್ ಪ್ರೆಸ್' ರೈಲು  ಹಿಡಿಯಲು  ಪ್ಲಾಟ್ ಫಾರ್ಮ್ ೪ ಕ್ಕೆ  ಬಂದರು. ರೈಲು ಆಗಲೇ ಚಲಿಸಲು ಶುರುವಾಗಿತ್ತು.  ತಮ್ಮ  ಕಂಪಾರ್ಟ್ ಮೆಂಟಿನ ಬಾಗಿಲಿನ ಹ್ಯಾಂಡಲ್  ಹಿಡಿಯನ್ನು ಹಿಡಿದುಕೊಳ್ಳಲು ಪ್ರಯತ್ನಿಸಿದಾಗ, ಕೈ ಹಿಡಿತ ತಪ್ಪಿ ಪ್ಲಾಟ್ ಫಾರ್ಮ್ ಮತ್ತು ಜನರಲ್ ಬೋಗಿಗಳ ಮಧ್ಯೆ ಕೆಳಗೆ ಬಿದ್ದರು.  ಇದು ಇಂಟರ್ ಸಿಟಿ ಎಕ್ಸ್ ಪ್ರೆಸ್ ರೈಲಿನ  ಕೊನೆಯ ಕಂಪಾರ್ಟ್ ಮೆಂಟ್ ನಿಂದ ೨ ನೆಯದು.  ಅಶೋಕ್ ಜೋರಾಗಿ ಕೂಗಿ ಕೊಂಡಿದ್ದನ್ನು ಕೇಳಿ ತಕ್ಷಣ ಗಾರ್ಡ್ ಸೀಟಿ ಊದಿ, ಅಲಾರಂ ಚೈನ್ ಎಳೆದು ಡ್ರೈವರ್ ಗೆ ತಿಳಿಸಿ ರೈಲನ್ನು ತಕ್ಷಣವೇ ನಿಲ್ಲಿಸಲು ಪ್ರಯತ್ನಿಸಿದರು. ಡ್ರೈವರ್ ಬ್ರೇಕ್ ಹಾಕಿ  ರೈಲನ್ನು  ನಿಲ್ಲಿಸಲು ಪ್ರಯತ್ನಿಸಿದರೂ, ರೈಲು ೩೦ ಮೀ ನಷ್ಟು ಮುಂದೆ ಸರಿದಿತ್ತು. 
 
ಪ್ಲಾಟ್ ಫಾರ್ಮ್ ಮೇಲೆ ನಿಂತು  ಕೈಕೊಟ್ಟು ಅಶೋಕರನ್ನು  ಮೇಲೆ ಎಳೆಯಲುನಡೆಸಿದ  ಪ್ರಯತ್ನಗಳು ಸಫಲವಾಗಲಿಲ್ಲ.  ಎದೆಯವರೆಗೆ ಸಿಕ್ಕಿಹಾಕಿಕೊಂಡ ಪ್ರಯಕ್ತ ಮೇಲೆ ಬರುವುದು ಕಷ್ಟವಾಗಿತ್ತು. ಇಂಥ ಸಂಕಟದ ಸಮಯದಲ್ಲಿ  ಕೆಲವರು ಕುಡಿಯಲು ನೀರು ಕೊಟ್ಟರು. ಮಹಿಳಾ ಪ್ರಯಾಣಿಕರು ಗಾಳಿ ಬೀಸಿ ಸಹಕರಿಸಿದರು. ಜಿ.ಆರ್.ಪಿ. ಹತ್ತಿರವೇ ಇತ್ತು. ಅವರು ಕೂಡಲೇ ಅಗ್ನಿ ಶಾಮಕ ಗಾಡಿಗೆ ಫೋನ್ ಮಾಡಿ ಬರಲು ತಿಳಿಸಿದರು. ಫೈರ್ ಬ್ರಿಗೆಡ್ ಗಾಡಿ  ಬಂದು ಸಹ ಪ್ರಯಾಣಿಕರು ನೆರವಿನಿಂದ ಪಟರಿಯಿಂದ ಅಶೋಕರನ್ನು ಹೊರಗೆ ಎತ್ತಿ ತೆಗೆಯಲು ಮಾಡಿದ ಪ್ರಯತ್ನ ಉಪಯೋಗವಾಗಲಿಲ್ಲ. ಆಗ ಬೋಗಿಯ  ಮೆಟ್ಟಿಲನ್ನು ಕತ್ತರಿಸಿ ಹಾಕಿ,  ೮-೨೫ ರ ಹೊತ್ತಿಗೆ ಮೇಲಕ್ಕೆ ಎತ್ತಿದರು. ಇದಕ್ಕೆ ಸುಮಾರು  ೯೦ ನಿಮಿಷ ತಗುಲಿತು. ಇಂಟರ್ ಸಿಟಿ ಗಾಡಿ  ವಿಳಂಬವಾಗಿ ಹೊರಟಿದ್ದರಿಂದ ಬೇರೆ ಎಲ್ಲಾ ಗಾಡಿಗಳು ತಡವಾಗಿ ಹೊರತವು. ಅಶೋಕ್ ರಿಗೆ  ಸೆಂಟ್ರೆಲ್ ರೈಲ್ವೆ ಎಮರ್ಜೆನ್ಸಿ ವಾರ್ಡ್ ನಲ್ಲಿ ಪ್ರಥಮಿಕ ಚಿಕಿತ್ಸೆ ಒದಗಿಸಲಾಯಿತು. ನಂತರ ಭುಜ, ಬೆನ್ನುಮೂಳೆ, ಹೊಟ್ಟೆ,ಎದೆ ಎಲ್ಲಾ ಕಡೆ ಗಾಯವಾಗಿದ್ದ ಅಶೋಕರನ್ನು  ಹತ್ತಿರದ  ಸಾಯನ್ ಮ್ಯುನಿಸಿಪಲ್  ಆಸ್ಪತ್ರೆಯ ಎಮೆರ್ಜೆನ್ಸಿ ವಾರ್ಡ್ ನಲ್ಲಿ ಭರ್ತಿ ಮಾಡಲಾಯಿತು. ಇದಾದ ಸ್ವಲ್ಪ ಹೊತ್ತಿಗೆ ಅವರ ಮನೆಯವರು ಹಮ್ದರು. ಅವರು ಸಾಂತಾ ಕ್ರೂಜ್ ನ ಬಳಿಯ ಪ್ರೈವೇಟ್ ಆಸ್ಪತ್ರೆಗೆ ಅಶೋಕರನ್ನು ಕರೆದುಕೊಂಡು ಹೋದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ  ಅಶೋಕರ ಸ್ಥಿತಿ ಗಂಭೀರವಾಗಿದೆ. ಇನ್ನೂ ಕೆಲವು ದಿನ ಆಸ್ಪತ್ರೆಯಲ್ಲೇ ಇರಬೇಕಾಗಬಹುದು. 
 
ಈ ಘಟನೆಯಿಂದ ನಮಗೇನು ಉಪಯೋಗ ?:
 
ಪ್ರತಿ ಅವಘಡಗಳೂ ನಮಗೆ ಆಗಬೇಕಿಲ್ಲ. ಅದಕ್ಕೆ ನಾವೆಲ್ಲಾ ತಕ್ಕಮಟ್ಟಿಗೆ ಸಿದ್ಧರಾಗಿರುವುದು ಅಗತ್ಯ. ಪ್ರತಿ ದಿನ ಈ ತರಹದ ಹಲವಾರು ದುರ್ಘಟನೆಗಳು ನದೆಯುತ್ತಿರುತ್ತವೆ. ಅವುಗಳನ್ನು ನಾವು ತಿಳಿಯುವುದು ಅಗತ್ಯ. ಸಮಯ ಬಂದಾಗ ಸಹಾಯ ಮಾಡಬಹುದು. ಆಕಸ್ಮಿಕಗಳನ್ನು ತಪ್ಪಿಸಬಹುದು. 
 
ಅನಾಹುತಗಳಿಂದ ಕಲಿಯಬೇಕಾದ ಪಾಠ :
 
೧. ಎಲ್ಲಿಗೆ ಹೋಗಬೇಕಾದರೂ ಪೂರ್ವ ಸಿದ್ಧತೆ ಅತಿ ಮುಖ್ಯ. 
೨. ನಾವು ಇವುಗಳಿಗೆ ಸಮಯವನ್ನು ಹೊಮ್ದಿಸಿಕೊಳ್ಳಬೇಕು. 
೩. ಅತಿಯಾಗಿ ಉದ್ವಿಗ್ನರಾಗಿರಬಾರದು. 
೪. ಅಡಾವುಡಿ ಬೇಗ ಮಾಡಲುಹೋಗಬಾರದು. 
೫. ನಿಧಾನವಾಗಿ ಮಾಡುವ ಕೆಲಸಗಳಲ್ಲಿ ಯಾವ ಅವಘಡಗಳೂ ಸಾಮಾನ್ಯವಾಗಿ ಆಗುವುದಿಲ್ಲ. 
 
-ಕೃಪೆ : 'ಟೈಮ್ಸ್ ಆಫ್ ಇಂಡಿಯ', ಪುಟ ೪ ,  ೨೨ -೦೫ -೨೦೧೩ 
-ಸಂಗ್ರಹಣೆ ಮತ್ತು ಪ್ರಸ್ತುತಿ : ಹೊರಂಲವೆಂ, ಮುಂಬೈ-೮೪ 
 
 
 
 
 
Rating
No votes yet

Comments

Submitted by makara Thu, 05/23/2013 - 19:29

ವೆಂಕಟೇಶ್ ಸರ್,
ಅಪಘಾತಕ್ಕೆ ಅವರಸರವೇ ಕಾರಣ ಎಂದು ಸರಕಾರದವರು ಎಲ್ಲೆಡೆ ಬಹಿರಂಗವಾಗಿ ಘೋಷಿಸುತ್ತಿದ್ದರೂ ಸಹ ಅದರ ನಿಜವಾದ ಅರ್ಥವಾಗುವುದು ಇಂತಹ ಅವಘಡಗಳು ಸಂಭವಿಸಿದಾಗಲೇ. ಉತ್ತಮ ವಿಷಯ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

Submitted by venkatesh Thu, 05/23/2013 - 21:12

In reply to by kavinagaraj

ಥಾಂಕ್ಸ್ ಕಾವೀನಾಗರಾಜ್ ಸರ್,

ನನಗೆ ಏನಾದರೂ ಈ ತರಹ ಅವಿವೇಕ ನಡೆದಾಗ ಮುಂದೆ ನಡೆಯದಹಾಗೆ ಹೇಗೆ ತಡೆಯುವುದು ಎನ್ನುವ ಬಗ್ಗೆ ಯೋಚನೆ ಇರುತ್ತೆ. ಅದನ್ನು ತಮ್ಮೆಲ್ಲರ ಜೊತೆ ಹಂಚಿಕೊಂಡಾಗ ಮನಸ್ಸಿಗೆ ನೆಮ್ಮದಿ...

Submitted by ಗಣೇಶ Fri, 05/24/2013 - 00:25

In reply to by venkatesh

ಎಲ್ಲೋ ಮ್ಯಾಚ್ ಫಿಕ್ಸಿಂಗ್ ಆಗುತ್ತಿದ್ದೆ ಅಂದುಕೊಳ್ಳುತ್ತಲೇ ಇದ್ದೆ. ಯಾರಿರಬಹುದೆಂದು ಡೌಟೂ ಇತ್ತು... ಆದರೆ ನಂಬಲೇ ಆಗುತ್ತಿಲ್ಲಾ! "ಕಾವೀ"ನಾಗರಾಜ್!! ಛೇ -ಅಂ.ಭಂ.ಸ್ವಾಮಿ.

Submitted by ಗಣೇಶ Fri, 05/24/2013 - 00:19

ಎಲ್ಲಾ ಅವಸರದವರು. ಬಡವರು, ಅಶಕ್ತರು, ವೃದ್ಧರಿಗೆ, ಪ್ರಾಣಿಗಳಿಗೆ ಈ ಕಾಲ ಹೇಳಿದ್ದಲ್ಲ. ರಾತ್ರಿ ಮನೆಗೆ ಕ್ಷೇಮವಾಗಿ ತಲುಪುವುದೇ ಸಾಹಸ!