ನೋಡು ಬಾ ಕರುನಾಡ
ತೋರಿಸೋ ಕರುನಾಡ ಹೆಮ್ಮೆಯಲಿ ಧೀರ
ಕೇಳಿಸೋ ಕನ್ನಡದ ಗೀತೆಗಳ ಕುವರ
ಕರ್ಣಾಟಕದ ಕಂಪು ಎಲ್ಲರೂ ಸವಿಯಲಿ
ಹರಡಲಿ ನಾಡಿನ ಇತಿಹಾಸ ವಿಶ್ವದಲಿ
ಕರೆಯೋಣ ಬಾರಾ ದೇಶ ವಿದೇಶಿಗರ
ಬರಮಾಡು ಅತಿಥಿಗಳ ಸ್ವಾಗತವ ಕೋರಿ
ಸತ್ಕರಿಸಿ ಕನ್ನಡದ ವಿಶಿಷ್ಟ ತಿನಿಸುಗಳ
ಪರಿಚಯಿಸು ನಾಡಿನ ವಿಶೇಷ ತಾಣಗಳ
ನರಸಿಂಹ ಜರ್ನ, ಗುರುದ್ವಾರ, ಬಸವಕಲ್ಯಾಣ
ಕಲಬುರ್ಗಿಯ ದರ್ಗಾ, ಅಪ್ಪನವರ ಹಿತ ನುಡಿ
ರಾಯಚೂರಿನ ರಾಯರು, ಹಟ್ಟಿ, ತುಂಗಭದ್ರೆ
ವಿಜಾಪುರದ ಗೋಳಗುಂಬಜ, ವಣ ದ್ರಾಕ್ಷಿ
ಬಾದಾಮಿ, ಐಹೊಲೆ, ಪಟ್ಟದ ಕಲ್ಲು ನೋಡಾ
ಕೂಡಲ ಸಂಗಮ ಇರಲು ಬಾಗಲಕೋಟೆಯಲಿ
ಧಾರವಾಡದ ಪೇಡ, ದಾವಣಗೆರೆಯ ಮಂಡಕ್ಕಿ
ಬೆಳಗಾವಿಯ ಕುಂದ, ಗೋಕಾಕ ಕರದಂಟು ಸವಿದು
ಹೊಸಪೇಟೆಯ ಹಂಪಿ, ಚಿತ್ರ ದುರ್ಗದ ಕೋಟೆ
ಕವಿಶೈಲ, ಆಗುಂಬೆ, ಜೋಗ ಶಿವಮೊಗ್ಗದಲಿ
ಉಡುಪಿಯ ಶ್ರೀಕೃಷ್ಣ, ಧರ್ಮಸ್ಥಳದ ಮಂಜುನಾಥ
ಕೊಲ್ಲೂರು ಮೂಕಾಂಭಿಕೆ, ಶೃಂಗೇರಿ ಶಾರದೆಯನು
ಕುಕ್ಕೆ ಸುಭ್ರಮಣ್ಯ, ಕೊಡಗಿನ ಕಾವೇರಿಯನು,
ಬೇಲೂರು, ಹಳೇಬೀಡು, ಶ್ರೀ ಗೊಮ್ಮಟೇಶನು,
ಶ್ರೀ ಸೋಮನಾಥೇಶ್ವರ, ಶ್ರೀ ಚೆಲುವ ನಾರಾಯಣ
ಶ್ರೀ ರಂಗನಾಥರು, ತಾಯಿ ಶ್ರೀ ಚಾಮುಂಡೇಶ್ವರಿಯಾ
ಮರವಂತೆ ಕಡಲ ತೀರ, ಮೈಸೂರಿನ ಅರಮನೆ
ನಂದಿ ಬೆಟ್ಟದ ತಂಪು, ಕೈವಾರ ನಾರಾಯಣನ ಸನ್ನಿಧಿ
ಮಹಾ ನಗರಿ ಬೆಂಗಳೂರಿನಲ್ಲಿರುವ ವೈವಿದ್ಯತೆಗಳನು
ಇನ್ನಷ್ಟು, ಮತಷ್ಟು , ಮಗದಷ್ಟು ಇಹವಿಲ್ಲಿ ನೋಡು ಬಾರಾ
ತೋರಿಸೋ ಕರುನಾಡ ಹೆಮ್ಮೆಯಲಿ ಧೀರ
ಕೇಳಿಸೋ ಕನ್ನಡದ ಗೀತೆಗಳ ಕುವರ
ಕರ್ಣಾಟಕದ ಕಂಪು ಎಲ್ಲರೂ ಸವಿಯಲಿ
ಹರಡಲಿ ನಾಡಿನ ಇತಿಹಾಸ ವಿಶ್ವದಲಿ
ಕರೆಯೋಣ ಬಾರಾ ದೇಶ ವಿದೇಶಿಗರ
ಬರಮಾಡು ಅತಿಥಿಗಳ ಸ್ವಾಗತವ ಕೋರಿ
ಸತ್ಕರಿಸಿ ಕನ್ನಡದ ವಿಶಿಷ್ಟ ತಿನಿಸುಗಳ
ಪರಿಚಯಿಸು ನಾಡಿನ ವಿಶೇಷ ತಾಣಗಳ
*****
ವಕ್ರ ವ್ಯಾಕರಣಗಳ ತಿಳಿಸಿ ಸಹಕರಿಸುವವರಿಗೆ ನನ್ನಿ.