ನ್ಯಾನೊ ಚುಟುಕುಗಳು
ಚಿಲಿಪಿಲಿ
ನನ್ನ ಹೆಸರು ಚಿಲಿಪಿಲಿ
ಮಾಡುವುದೆಲ್ಲ ಕಲಿಬಿಲಿ
ಆಗುವುದೆಲ್ಲ ಗಲಿಬಿಲಿ
ತಿನ್ನುವುದೆಲ್ಲ ಜಿಲಿಬಿಲಿ.
ನನ್ನ ತಂಗಿ
ನನ್ನ ತಂಗಿ ಸೃಷ್ಟಿ
ಅವಳದು ಮಂದ ದೃಷ್ಟಿ
ಆದರೂ ಅವಳು ತುಂಟಿ
ಬಹಳ ಜಗಳಗಂಟಿ.
ಪಂಚಮಿ
ನಾಗರ ಪಂಚಮಿ ಬಂತು
ಉಂಡಿ,ಚಕ್ಕುಲಿ ರೆಡಿಯಾಯ್ತು
ನಾಗಪ್ಪಂಗೆ ಎಡೆಯಾಯ್ತು
ಮಕ್ಕಳೆಲ್ಲ ತಿಂದಾಯ್ತು.
ಮಲ್ಲ - ಕಲ್ಲ
ಈತ ಮಲ್ಲ
ಆತ ಕಲ್ಲ
ಮಲ್ಲ,ಕಲ್ಲ ಸೇರಿಕೊಂಡು
ತಿಂತಾರೆ ಬೇವು-ಬೆಲ್ಲ.
ಪಿಂಕಿ-ರಿಂಕಿ
ನನ್ನ ತಂಗಿ ಪಿಂಕಿ
ಅವಳ ಗೆಳತಿ ರಿಂಕಿ
ಪಿಂಕಿ ರಿಂಕಿ ಕೂಡಿಕೊಂಡು
ಹಚ್ಚತಾರ ಬೆಂಕಿ
ಹೋಳಿ
ಬಂತು ಬಂತು ಹೋಳಿ
ತಂತು ತಂತು ಓಕುಳಿ
ಮುಖವು ಆಯಿತು ಬಣ್ಣ
ನೋಡುಬಾರ ಅಣ್ಣ.
******