ನ್ಯಾನೋ ಕತೆಗಳು -೩
ದುಬಾರಿ ಕಸ
ನಗರದ ತ್ಯಾಜ್ಯ ವಿಲೇವಾರಿಯನ್ನು ಸುಗಮ ಗೊಳಿಸಲು ಸರಕಾರವು ವಿದೇಶದಿಂದ ಅತ್ಯಾದುನಿಕ ಕಸದ ತೊಟ್ಟಿಗಳನ್ನು ತರಿಸಿ ಬೀದಿ ಬೀದಿಯಲ್ಲಿ ಸ್ಥಾಪಿಸಿದ್ದರು. ಅದರ ಅಂದ ನೋಡುತ್ತಾ ಇಬ್ಬರು ಪರಸ್ಪರ ಮಾತನಾಡಿಕೊಳ್ಳುತ್ತಿದ್ದರು...'ಇದರಲ್ಲೂ ಹಾಕುವ ಕಸವು ಅಷ್ಟೇ "ದುಬಾರಿಯದ್ದಾಗಿರಬೇಕು"...' ಮತ್ತೊಬ್ಬ ಹೌದೆನ್ನುತ್ತ ತಲೆಯಾಡಿಸಿದ.. ಮರುದಿನ ಬೆಳಿಗ್ಗೆ ಕಸದೊಂದಿಗೆ ಆಗಷ್ಟೇ ಹುಟ್ಟಿದ ನವ ಜಾತ ಶಿಶುವು ಸಿಕ್ಕಿತ್ತು.
ಹಣ
ಆತ ಮದುವೆಯಾಗಿ ೬ ತಿಂಗಳಾಗುವಷ್ಟರಲ್ಲಿ ಉದ್ಯೋಗ ಅರಸಿ ದುಬೈಗೆ ಹೊರಟ. ಕೈ ತುಂಬಾ ಸಂಬಳದ ಕೆಲಸವೊಂದು ಸಿಕ್ಕಿತ್ತು.. ಒಂದು ವರ್ಷದಲ್ಲೇ ತನ್ನದೇ ಆದ ಬಿಸಿನೆಸ್ ಆರಂಭಿಸಿದ. ನೋಡ ನೋಡುತ್ತಲೇ ಆತ ಕೊಟ್ಯಾದಿಪತಿಯಾದ .. ವರ್ಷಗಳ ನಂತರ ಕೈ ತುಂಬು ದುಡ್ದೊಂದಿಗೆ ಆತ ಆತ ಊರಿಗೆ ಹೊರಟಿದ್ದ . ತನ್ನ ಹೆಂಡತಿಯ ಜೊತೆಗಿದ್ದ ಹಾಲುಗಲ್ಲದ ಮಗು ಆತನ್ನು ನೋಡಿದವನೇ ಕೈ ತೋರಿಸಿ "ಇದ್ಯಾರಮ್ಮ " ಅಂತ ಕೇಳಿದ.. ಆತನಿಗೆ ಮೊತ್ತ ಮೊದಲಾಗಿ ಹಣದ ಮೇಲೆ ಜಿಗುಪ್ಸೆ ಹುಟ್ಟಿತು.
ವಿಚಿತ್ರ
ಫೇಸ್ ಬುಕ್ ನಲ್ಲಿ ಸಿಕ್ಕ ಸಿಕ್ಕವರ ವಾಲ್ ಮೇಲೆ ಪೋಸ್ಟ್ ಮಾಡಿದ ಅವನು .. ತನ್ನ ಸ್ವಂತ ಮನೆಯ ಗೋಡೆ ಮೇಲೆ ತನ್ನ ಮಗ ಕರಿ ಹಲಗೆಯಿಂದ ಚಿತ್ರ ಗೀಚಿದ್ದನ್ನು ನೋಡಿ ಕೆಂಡಾಮಂಡಲನಾದ .
ನಂಬಿಕೆ
‘ನಂಬಿಕೆಯೇ ದಾಂಪತ್ಯದ ಬುನಾದಿ’. ಧರ್ಮ ಗುರುಗಳು ದಾಂಪತ್ಯದ ಬಗ್ಗೆ ಉಪನ್ಯಾಸ ನೀಡುತ್ತಾ ನುಡಿದರು . ಹೌದು .. ಒಬ್ಬರಿಗೊಬ್ಬರು ಮಾಡಿದ ಮೋಸ ತಿಳಿದಿಲ್ಲವೆಂಬ ಅಚಲ ನಂಬಿಕೆ.. ಸಭಿಕರಲ್ಲೊಬ್ಬ ಪಿಸುಗುಟ್ಟಿದ.
ವಿಪರ್ಯಾಸ
ಬೋಳು ತಲೆಯವ ತನಗಾಗಿ ಹೆಣ್ಣು ನೋಡಲು ಹೋಗಿ .. ಹುಡುಗಿಯ ಕೂದಲು ಉದ್ದವಿಲ್ಲವೆಂದು ತಿರಸ್ಕರಿಸಿ ಬಂದಿದ್ದ..