ನ್ಯಾನೋ ಕಥೆಗಳು ಭಾಗ-1 (ವಿ.ಕ. ದಲ್ಲಿ ಪ್ರಕಟಿತ)
ಇವತ್ತು (14-3-2010) ಬೆಳಿಗ್ಗೆ 8.೦೦ ಕ್ಕೆ ಎದ್ದೆ. (ಹಿಂದಿನ ಎರಡು ರಾತ್ರಿಗಳಲ್ಲಿ ಸೊಳ್ಳೆಗಳಿಗೆ ರಕ್ತದಾನ ಮಾಡುವ ಕಾರ್ಯಕ್ರಮದಲ್ಲಿ ನಿದ್ದೆಗೆಟ್ಟಿದ್ದರಿಂದ ಇವತ್ತು ಲೇಟಾಗಿ ಎದ್ದೆ.. ದೊಡ್ಡವರು ಫ್ರೀ ಉಪದೇಶ ನೀಡುವ ಪ್ರಮೇಯವಿಲ್ಲ.) ನಾನು ಬೆಳಿಗ್ಗೇನೆ ಎದ್ದ ಕೂಡಲೇ, ನನ್ ಹೆಂಡ್ತಿ ಹುಡುಕಿದೆ. ಅವಳಾಗಲೇ ತನ್ನ ಇನ್ ಬಾಕ್ಸ್ ನಲ್ಲಿ ಎರಡು ಮೆಸೇಜನ್ನು ತಂದಿದ್ದಳು. ಶಶಿ ಅಕ್ಕ ಮೆಸೇಜು ಮಾಡಿದ್ರು.. ನೀನು ಬರೆದ ನ್ಯಾನೋ ಕಥೆಗಳು ಪೇಪರ್ ನಲ್ಲಿ ಬಂದಿದೆ ನೋಡೋ ಅಂದ್ರು.. ವಿಜಯ ಕರ್ನಾಟಕದ ಸಿಂಪ್ಲಿಸಿಟಿ ಪೇಜಿನ ನ್ಯಾನೋ ಜಾತ್ರೆಯಲ್ಲಿ ನನ್ನ ಎರಡು ನ್ಯಾನೋ ಕಥೆಗಳು ಬಂದಿತ್ತು. ಇದೇ ಮೊದಲನೇ ಬಾರಿ, ನ್ಯಾನೋ ಕಥೆ ಬರೆದಿದ್ದು.. ನಿಮಗಾಗಿ ಇಲ್ಲಿ ಹಾಕ್ತಾ ಇದೀನಿ. ಹೇಗಿದೆ ಅಂತಾ ಓ(ಊ)ದಿ ಹೇಳಿ..
1) ಒಂದು ಸಿನಿಮಾ ಕಥೆ..
ತನ್ನ ಗೆಳೆಯನ ಪ್ರೇಮವನ್ನು ಸಕ್ಸಸ್ ಮಾಡಲು ಇವನು ಎರಡು ದಿನಗಳಿಂದ ಪ್ಲಾನ್ ಮಾಡಿಕೊಂಡ. ಇವನೇ ಮಾಲೆಗಳನ್ನು ಖರೀದಿಸಿದ. ಡಬಲ್ ದುಡ್ಡು ಪೂಜಾರಿಯನ್ನು ಕರೆತಂದ. ಗುಟ್ಟಾಗಿ ತನ್ನ ವಿಧವೆ ತಾಯಿಯ ಚಿನ್ನದ ತಾಳಿಯನ್ನು ಕದ್ದ. ಹುಡುಗಿಯ ಅಪ್ಪ ಇಲ್ಲದಾಗ, ಸರಿ ರಾತ್ರಿಯಲ್ಲಿ ಹಾರಿಸಿಕೊಂಡು ಬಂದ. ಎಲ್ಲವೂ ಸರಾಗವಾಗಿ ನಡೆದಿತ್ತು. ಮದು ಮಗಳು ಸಿಂಗಾರಗೊಂಡು ವೈಯಾರದಿಂದ ನಡೆದು ಮಂಟಪಕ್ಕೆ ಬಂದಾಗಲೇ ಎಡವಟ್ಟು ನಡೆಯಿತು. ಮಂತ್ರ ಹೇಳುತ್ತಿದ್ದ ಪೂಜಾರಿ ಅರ್ಧಕ್ಕೆ ನಿಲ್ಲಿಸಿ, ಇವನ ಮೇಲೆ ಹರಿ ಹಾಯ್ದು, ತನ್ನ ಮಗಳನ್ನು ಮಂಟಪದಿಂದ ಎಳೆದೊಯ್ದ.
2) ಬೆಲ್ಲ ಸಿಕ್ಕಿತು...
ಬೆಂಗಳೂರಿನ ಭಾಗ್ ನ ಮೂಲೆಯಲ್ಲಿ ಪ್ರೇಮಿಗಳಿಬ್ಬರು ಕುಳಿತಿದ್ದರು. ಇವಳು ತಮ್ಮ ಮುಂದಿನ ಭವಿಷ್ಯದ ಬಗ್ಗೆ ಮಾತನಾಡುತ್ತಿದ್ದರೆ, ಅವನು ಅಕ್ಕ-ಪಕ್ಕದ ಪ್ರೇಮಿಗಳನ್ನು, ಅವರ ಸರಸ ಸಲ್ಲಾಪವನ್ನು ನೋಡಿ ಹೊಟ್ಟೆ ಕಿಚ್ಚುಪಟ್ಟುಕೊಳ್ಳುತ್ತಿದ್ದ. ಪ್ರೇಮಿಯ ಮನದಿಂಗಿತವನ್ನು ಅರ್ಥ ಮಾಡಿಕೊಂಡ ಇವಳು, ನನಗೂ ಬೆಲ್ಲ ಬೇಕು ಎಂದು ಮಾದಕವಾಗಿ ಕೇಳಿದಳು..
ಸಾವಿರ ವೋಲ್ಟ್ ಮುಖದವ ಮುತ್ತಿನ ಗಮ್ಮತ್ತಿನಲ್ಲಿ ಅವಳ ಒಂದು ಕೆನ್ನೆ ಕಚ್ಚಿ, ಇದು ಹೇಗಿದೆ ಅಂತಾ ಹುಬ್ಬು ಹಾರಿಸಿ ಕೇಳಿದ. ಅವಳು ಗಂಭೀರಳಾಗಿಯೇ, "ಮೊದಲು ಕಚ್ಚಿದವನಿಗಿಂತ ಬಿಸಿಯಾಗಿಲ್ಲ ಬಿಡು" ಅಂದುಬಿಟ್ಟಳು. ಕೋಲ್ಮಿಂಚು ಬಡಿಸಿಕೊಂಡ ಇವನು ಕಣ್ಣಂಚಿನಲ್ಲಿ ನೀರು ತುಂಬಿಕೊಂಡು, ಯಾರವನು? ಅಂತಾ ಕೇಳಿದ. ಅವಳು ನಸು ನಗುತ್ತಾ, "ನಮ್ಮ ಮನೆಯ ಸೊಳ್ಳೆ ಕಣೋ..." ಅಂದಾಗ, ಇವನಿಗೆ ಕೋಪ ಬಂದು, ಇನ್ನೊಂದು ಕೆನ್ನೆಯನ್ನು ಜೋರಾಗಿ ಕಚ್ಚಿದ.
ಇನ್ನೊಂದು ಗಂಭೀರವಾದ ಕಥೆ..
3) ಕಠೋರ ಸತ್ಯದ ಅನ್ವೇಷಣೆಗಾಗಿ ಯುವ ವಿದ್ವಾಂಸನೊಬ್ಬ ದೇಶಾಂತರ ಅಲೆದ. ಇಂಗ್ಲೆಂಡ್ ನಲ್ಲಿ ಎಲಿಜಬೆತ್ ರಾಣಿಯ ಆಳ್ವಿಕೆಯ ಮರ್ಮ, ರೋಮ್ ನ ಅರಾಜಕತೆ, ಪಾಕ್ ನ ಭಯೋತ್ಪಾದನೆಯ ಹಿಂದಿನ ಶಕ್ತಿ, ಆಫ್ರಿಕಾದ ವರ್ಣ ಭೇಧ ನೀತಿ, ಅರಬ್ ನ ಶ್ರೀಮಂತಿಕೆಯ ಬಂಡವಾಳ, ಸೂಡಾನ್ ನ ಬಡತನ. ಇಂತಹ ನೂರಾರು ಕಠೋರ ಸತ್ಯವನ್ನು ಟಿಪ್ಪಣಿ ಮಾಡಿದ.. ಆದರೆ, ಎಲ್ಲಕ್ಕಿಂತ ಕಠೋರವಾದ ಸತ್ಯ ತನ್ನ ದೇಶದಲ್ಲೇ ಇರುತ್ತದೆಂದು ತಿಳಿದಿರಲಿಲ್ಲ. ಮಗನ ಕೊರಗಿನಲ್ಲಿ ಸತ್ತು ಹೋದ ತನ್ನ ತಾಯಿಯ ಸಾವಿನ ಸತ್ಯವನ್ನು ಕೊನೆಯವರೆಗೂ ಅರಗಿಸಿಕೊಳ್ಳಲಾಗಲಿಲ್ಲ.
ಹೇಗಿದೆ ಅಂತಾ ಹೇಳಿ..
ಇಂತಿ ನಿಮ್ಮ ಪ್ರೀತಿಯ,
ಯಳವತ್ತಿ.
Comments
ಉ: ನ್ಯಾನೋ ಕಥೆಗಳು ಭಾಗ-1 (ವಿ.ಕ. ದಲ್ಲಿ ಪ್ರಕಟಿತ)
ಉ: ನ್ಯಾನೋ ಕಥೆಗಳು ಭಾಗ-1 (ವಿ.ಕ. ದಲ್ಲಿ ಪ್ರಕಟಿತ)
In reply to ಉ: ನ್ಯಾನೋ ಕಥೆಗಳು ಭಾಗ-1 (ವಿ.ಕ. ದಲ್ಲಿ ಪ್ರಕಟಿತ) by modmani
ಉ: ನ್ಯಾನೋ ಕಥೆಗಳು ಭಾಗ-1 (ವಿ.ಕ. ದಲ್ಲಿ ಪ್ರಕಟಿತ)
In reply to ಉ: ನ್ಯಾನೋ ಕಥೆಗಳು ಭಾಗ-1 (ವಿ.ಕ. ದಲ್ಲಿ ಪ್ರಕಟಿತ) by modmani
ಉ: ನ್ಯಾನೋ ಕಥೆಗಳು ಭಾಗ-1 (ವಿ.ಕ. ದಲ್ಲಿ ಪ್ರಕಟಿತ)
ಉ: ನ್ಯಾನೋ ಕಥೆಗಳು ಭಾಗ-1 (ವಿ.ಕ. ದಲ್ಲಿ ಪ್ರಕಟಿತ)
In reply to ಉ: ನ್ಯಾನೋ ಕಥೆಗಳು ಭಾಗ-1 (ವಿ.ಕ. ದಲ್ಲಿ ಪ್ರಕಟಿತ) by sriny
ಉ: ನ್ಯಾನೋ ಕಥೆಗಳು ಭಾಗ-1 (ವಿ.ಕ. ದಲ್ಲಿ ಪ್ರಕಟಿತ)
ಉ: ನ್ಯಾನೋ ಕಥೆಗಳು ಭಾಗ-1 (ವಿ.ಕ. ದಲ್ಲಿ ಪ್ರಕಟಿತ)
In reply to ಉ: ನ್ಯಾನೋ ಕಥೆಗಳು ಭಾಗ-1 (ವಿ.ಕ. ದಲ್ಲಿ ಪ್ರಕಟಿತ) by Rakesh Shetty
ಉ: ನ್ಯಾನೋ ಕಥೆಗಳು ಭಾಗ-1 (ವಿ.ಕ. ದಲ್ಲಿ ಪ್ರಕಟಿತ)
ಉ: ನ್ಯಾನೋ ಕಥೆಗಳು ಭಾಗ-1 (ವಿ.ಕ. ದಲ್ಲಿ ಪ್ರಕಟಿತ)
In reply to ಉ: ನ್ಯಾನೋ ಕಥೆಗಳು ಭಾಗ-1 (ವಿ.ಕ. ದಲ್ಲಿ ಪ್ರಕಟಿತ) by ವೆ೦ಕಟೇಶಮೂರ್ತಿ…
ಉ: ನ್ಯಾನೋ ಕಥೆಗಳು ಭಾಗ-1 (ವಿ.ಕ. ದಲ್ಲಿ ಪ್ರಕಟಿತ)