ಪಂಚವಾರ್ಷಿಕ

ಪಂಚವಾರ್ಷಿಕ

 ವಾರ್ಷಿಕ ಅಂದ್ರೆ ಕಳೆದ ವರ್ಷದಲ್ಲಿ ಏನೇನ್ ಆಯ್ತು ಮತ್ತೆ ಮುಂದಿನ ವರ್ಷ ಏನೇನ್ ಮಾಡ್ಬೇಕು ಅಂತ ಪಟ್ಟಿ ಮಾಡುವ ಸಮಯ - ಹಳೆದ್ನೆಲ್ಲ ನೆನಿಸ್ಕೊಳೋದು ಮುಂದೆ ಕನಸ ಕಟ್ಟೋದು ಅಂತ ಚೊಕ್ಕವಾಗಿ.
ಇತ್ತೀಚಿಗೆ ನನ್ನ ಸ್ನೇಹಿತರೆಲ್ಲ ಐ ಟಿ ಜಗತ್ತನ್ನು ಐದು ವರ್ಷಗಳ ಹಿಂದೆ ಪದಾರ್ಪಣೆ ಮಾಡಿದ ಸ್ಮರಣೆ ಮಾಡುತಿದ್ದಾರೆ.  ಇಂದಿಗೆ ನಾನು ಸಹ ಐದು ವರ್ಷಗಳನ್ನು ಐ ಟಿ ಯಲ್ಲಿ ಕಳೆದಿರುವೆ, ಜೊತೆಗೆ ಈ  ಬರೆಯುವ ಹವ್ಯಾಸವನ್ನು. ಸಮರಸವೇ ಜೀವನವೆಂಬಂತೆ ಐದು ವರ್ಷಗಳಲ್ಲಿ ಕೆಲಸದ ಅನುಭವ ಎಲ್ಲದರ ಅನುಭವನ್ನು ಕೊಡುತ್ತದೆ. ನಾ ಎಂದಿಗೂ ಐದು ವರ್ಷ ಐ ಟಿ ಯಲ್ಲಿ  ದುಡಿಯುತ್ತೆನೆಂದು  ಎನಿಸಿರಲ್ಲಿಲ್ಲ . ಈ ಪಂಚವಾರ್ಷಿಕ ದುಡಿಮೆ ಎಲ್ಲ ಅನುಭವಗಳನ್ನು ಕೊಟ್ಟಿದೆ - ಶಿಸ್ತಿನ ಜೀವನ, ನಿದ್ದೆಯ ಬೆಲೆ, ಆರೋಗ್ಯದ ಅರಿವು, ಕೆಲಸದ ನಿಷ್ಠೆ, ಹೊಸ ಕಲಿಕೆಯ ಬಗ್ಗೆ ಆಸಕ್ತಿ, ಸಹ ಉದ್ಯೋಗಿಗಳ ಗೆಳೆತನ, ಚಾರಣ ಪ್ರವಾಸಗಳ ಮಜಾ, ಗುಂಪುಗಳ ಔತಣ ಕೂಟಗಳು, ಮಜಾ ಕೊಡುವ ವಿವಿಧ ಆಟಗಳು ಹೀಗೆ ಹಲವಾರ. ಆದರೆ  ಬದುಕಿನಲ್ಲಿ ಅತಿ ಮುಖ್ಯವಾದುದು -  ಸ್ವಾವಲಂಬಿ ಜೀವನ.  ಇದನ್ನು ದುಡಿಮೆಯಿಂದ ಮಾತ್ರ ಸಾಧ್ಯವೆಂಬುದು ನನ್ನ ಅನಿಸಿಕೆ. ನಲಿವಲ್ಲು ನೋವಲ್ಲು ನಗುವುದನ್ನು  ಕಲಿಸುವುದು ದುಡಿಮೆ.ನಮ್ಮೆಲ್ಲರ ಚಿಂತೆ ಹಾಗು  ಕಷ್ಟಗಳನ್ನು ಕ್ಷಣ ಕಾಲ ಕಣ್ಮರೆ ಮಾಡುವುದು ಕೆಲಸ.

ಕಾಯಕವೇ ಕೈಲಾಸ!

 

Rating
No votes yet

Comments