ಪಕ್ಷಿವೀಕ್ಷಣೆ

ಪಕ್ಷಿವೀಕ್ಷಣೆ

ಕುಂಕುಮಾಂಕಿತ ವರ್ಣಾಯ ಕುಂದೇಂದು ಧವಳಾಯಚ|
ವಿಷ್ಣು ವಾಹನ ನಮಸ್ತುಭ್ಯಂ ಪಕ್ಷಿರಾಜಾಯ ತೇ ನಮಃ||
ನಾವು ಚಿಕ್ಕವರಿದ್ದಾಗ ನಮ್ಮ ಅಜ್ಜಿ ಹೇಳಿಕೊಟ್ಟಿದ್ದ ಶ್ಲೋಕ. ಇದರ ಅರ್ಥ ಸುಮಾರಾಗಿ ಗೊತ್ತಾಗಿದ್ದರೂ (ಆಗ), ನಮ್ಮಲ್ಲಿ ಪಕ್ಷಿವೀಕ್ಷಣೆಗೆ ಒಂದು ತರಹ ಉತ್ತೇಜನ ನೀಡಿದ್ದಂತೂ ನಿಜ. ನಮ್ಮ ದಿನನಿತ್ಯದ ಕೆಲಸಗಳಲ್ಲಿ ತೊಡಗಿಕೊಂಡಿರುವಾಗ ಹದ್ದು / ಗರುಡನ ಕೂಗು ಕೇಳಿದಾಕ್ಷಣ ಅದು ಹದ್ದೋ, ಗರುಡವೋ ಗುರುತಿಸುವುದು ಹಾಗೂ ಕೂಗಿದ್ದು ಗರುಡನೆಂದು ಗೊತ್ತಾದಾಗ ಈ ಶ್ಲೋಕವನ್ನು ನಮ್ಮಲ್ಲೇ ಹೇಳಿಕೊಳ್ಳುವುದು ಅಭ್ಯಾಸವಾಗಿತ್ತು. ಇದರೊಂದಿಗ ನಾವು ಆಟ ಆಡುವಾಗ ಅಥವಾ ಎಲ್ಲೇ ಹೊರಗಡೆ ಇದ್ದಾಗ ಆಕಾಶದಲ್ಲಿ ಬಹಳ ಮೇಲೆ ಹಾರಡುತ್ತಿರುವ ಹಕ್ಕಿಗಳನ್ನು ಗಮನಿಸುವುದೂ, ಅವನ್ನು ಗುರುತಿಸುವುದೂ ನಮಗೆ ಒಂದುರೀತಿಯ ಉತ್ಸಾಹ ಹಾಗೂ ಪಂದ್ಯವೂ ಆಗಿತ್ತು. 
ಒಂದು ಸಣ್ಣ ಶ್ಲೋಕ ಹಾಗೂ ಅದರೊಂದಿಗೆ ಹೇಳಿದ ಕಥೆಗಳು ನಮ್ಮನ್ನು ನಮ್ಮ ಸುತ್ತಲಿನ ಪರಿಸರದೊಂದಿಗೆ ಬೆಸೆದಿತ್ತು. ದಿನಾಲೂ ಸಂಜೆ ಹೊತ್ತು ನಮ್ಮಜ್ಜಿ ಶ್ಲೋಕ ಹೇಳಿಕೊಡುವಾಗ ಅನೇಕ ಕಥೆಗಳನ್ನು ಹೇಳುತ್ತಿದ್ದರು. ನಮಗೆ ಎಲ್ಲಾದರೂ ಗರುಡನನ್ನು ನೋಡಿದಾಗ ಈ ಶ್ಲೋಕದ ಜೊತೆಗೆ ಕೆಳಗಿನ ಕಥೆಯೂ ನೆನೆಪಾಗುತ್ತಿತ್ತು. 
ಒಮ್ಮೆ ವಿಷ್ಣುವು ಶಿವನನ್ನು ನೋಡಲು ಹೋದಾಗ ಹಾವು ಗರುಡನನ್ನು "ಹೇಗಿದ್ದೀಯಾ?" ಎಂದು ಕೇಳಿತಂತೆ. ಇದು ಬಹಳ ಸಣ್ಣಕಥೆಯಾದರೂ ಇದರ ಅರ್ಥ ಬಹಳ ದೊಡ್ಡದು. ನಮ್ಮಲ್ಲೂ ಬಹಳ ಜನರಿದ್ದಾರೆ, ಸ್ವಶಕ್ತಿಯಿಲ್ಲದ್ದಿದ್ದರೂ ಬಾಸ್ ನ ದಯೆಯಿಂದ, ಬರೀ ಜೋರು ಮಾತಿನಿಂದ, ಸಿಕ್ಕಿರುವ ಪದವಿಯಿಂದ ಎಲ್ಲರ ಮೇಲೂ ಸವಾರಿ ಮಾಡುವವರು ಮೇಲಿಕ ಕಥೆಯಲ್ಲಿ ಬರುವ ನಾಗರಜನಂತೆ! 
ಇಂದು ಬೆಳಿಗ್ಗೆ ಮನೆಯಿಂದ ಆಫೀಸಿಗೆ ಬರುವಾಗ ಒಂದು ದೊಡ್ಡ boeing 747 ಬಹಳ ಕೆಳಗಡೆಯಿಂದ ಹಾರಿಹೋಯಿತು. ಅದರ ಹಿಂಬದಿಯಲ್ಲಿ ಒಂದು ಗರುಡವನ್ನು ಕಂಡು ಮೇಲಿನ ಶ್ಲೋಕ ಜ್ಞಾಪಕಕ್ಕೆ ಬಂದು ಈ ಲೇಖನಕ್ಕೆ ಪ್ರಚೋದನೆ ನೀಡಿತು. ಈ ಕಾಂಕ್ರೀಟ್ ಕಾಡಿನಲ್ಲಿ ಗರುಡನನ್ನು ನೋಡಿ ಬಹಳ ಸಂತೋಷವಾಯಿತು ಹಾಗೂ ನಮ್ಮ ಮಕ್ಕಳಿಗೆ ಪಕ್ಷಿವೀಕ್ಷಣೆ ಬಗ್ಗೆ ಉತ್ಸಾಹವಿದ್ದರೂ ಪಕ್ಷಿಗಳೇ ನೋಡಲಿಕ್ಕೆ ಸಿಗದಿರುವಾಗ ಹೇಗೆ ಮುಂದುವರಿಯುವುದು ತಿಳಿಯಲಿಲ್ಲ. Anyway internetಇದ್ಯೆಲ್ಲಾ ಎಂದು ಸಮಾಧಾನ ಪಟ್ಟುಕೊಂಡಿದ್ದಾಯಿತು. 
Rating
No votes yet

Comments