ಪಟ್ಟಣಕ್ಕೆ ಬಂದ 'ಪುಟ್ಟ' -ಚಲನ ಚಿತ್ರ 'ನಿರುದೇಶಕನಾದ' ಕಥೆ -ಭಾಗ-೪

ಪಟ್ಟಣಕ್ಕೆ ಬಂದ 'ಪುಟ್ಟ' -ಚಲನ ಚಿತ್ರ 'ನಿರುದೇಶಕನಾದ' ಕಥೆ -ಭಾಗ-೪

ಚಿತ್ರ

 ಸ್ಸರಿ- ಮಧ್ಯ ರಾತ್ರಿವರ್ಗೆ ಕೂತು 

ಮತೊಮ್ಮೆ ಕಥೆಯಲ್ಲಿ ಬದಲಾದ 'ಹೊಸ' ನಾಯಕ ಕಂ  ನಿರ್ಮಾಪಕನ  ಆದ್ಯತೆ ಗೆ ತಕ್ಕ ಹಾಗೆ  ಸೂಟ್ ಹಾಗೋ ಹಾಗೆ ಚಿತ್ರ ಕಥೆಯನ್ನ- ಚಿತ್ರಾನ್ನವಾಗಿಸಿಹೆಂಗೋ ಒಂದು ಹದಕ್ಕೆ ತಂದು ಮುಗಿಸಿದ 'ಪುಟ್ಟ'... ಉಸ್ಸ್ಸಪ್ಪ ಅಂತ ನಿಟ್ಟುಸಿರು ಬಿಟ್ಟ!! 

ನಿರ್ಮಾಪಕನಿಗೆ ಫೋನಾಯಿಸಿ ನಾಳೆಯೇ ಶೂಟಿಂಗು ಶುರು ಅಂತಲೂ ಮೊದಲ ಶಾಟು- ನಾಯಕ ಬೆಂಗಳೂರಿನ ಪ್ರಸಿದ್ಧ  ಸಿನೆಮ ಚಿತ್ರೀಕರಣ ದೇವಸ್ಥಾನವಾದ 'ಗಾಳಿ ಅಂಜನೇಯ ಸ್ವಾಮೀದೇವಸ್ಸ್ಥಾನದಲ್ಲಿ   'ಗಾಳಿ ಆಂಜನೇಯನ ' ಮುಂದೆ ನಿಂತು  ಕೈ ಮುಗಿದು ಭಕ್ತಿಯಿಂದ ಬೇಡೋದು, ಆಮೇಲೆ ಮೈಸೂರು ರೋಡಲ್ಲಿ  'ಖಾಲಿ ಸೈಟ್ಒಂದರಲ್ಲಿ  ಫೈಟು '೧೦ ಜನ' ಖಳರ ಜೊತೆ- ಹೇಳಿದರು ನಿರ್ದೇಶಕರು

ಅದ್ನ ಕೇಳಿ ಉರಿದುಕೊಂಡ  ನಿರ್ಮಾಪಕ, -ಅಲ್ರೀ  ನಿರ್ದೇಶಕರೇ

ನಾವ್ 'ಅಸ್ಟು' ಕೋಟಿ ಖರ್ಚು ಮಾಡಿ 'ರಿಚ್' ಸಿನೆಮ ಮಾಡೋದು ಯಾಕೆ?

ಜನ ನೋಡಲಿ ಅಂತ, ಹಾಗೆ ನನ್ ಫೈಟು ಸೀನು 'ಎಲೋಖಾಲಿ ಜಾಗದಲ್ಲಿ  ಮಾಡೊದ?

ಅದೂ ಬರೀ  ಯಕಶ್ಚಿತ್ ೦೦  ಜನ ಖಳರ ಜೊತೆ

ನಾ ಹೇಳಿದ ಹಾಗೆ ಮಾಡಿ ಫೈಟು ಸೀನ್    ಮೈಸೂರು ರೋಡಲಿ ಪ್ಲೈ -ಓವರ್ ಹತ್ತಿರ

  'ನಡು ರಸ್ತೆ ಮದ್ಯೆಯೇ' ನಡು 'ಮಧ್ಯಾಹ್ನ'   ಒಂದು ಸಕ್ಕತ್ತು ಫೈಟು  '೨೦೦ ಜನ ಖಳರ' ಜೊತೆ!! ಮಾಡೋಣ... ಸ್ಸರೀನ ?

ಅದ್ನ ಕೇಳಿದ  ನಿರ್ದೇಶಕ ಬೆಚ್ಚಿ ಬಿದ್ದು, ಇವರಿಗೇನು ಹುಚ್ಚ್ಹ?

ಶೂಟಿಂಗು  ಸದಾ ಟ್ರಾಫಿಕ್ಕು  ಜಾಮ್  ಇರೋ ಮೈಸೂರು ರೋಡಲ್ಲಿ ಅದೂ ಪ್ಲೈ ಓವರ್ ಹತ್ತಿರ  ನಡು ಮದ್ಯಾಹ್ನ   ಮಾಡಿದರೆ ಜನ ಸುಮ್ನೆ ಇದ್ದಾರೆಯೇ?

ಶೂಟಿಂಗು ಮುಗ್ಸಿ ಕುಂಬಳ ಕಾಯಿ ಹೊಡೆಯೋ ಮೊದಲೇ ,

ಜನ  -ನಮ್  'ತಲೆ ಕಾಯಿ' ಹೊಡೆದು ಹಾಕ್ತಾರೆ ಅಸ್ಟೇ:))

 

ಸ್ಸಾರ್ ಅದೂ  ಮೊದಲೇ ಫುಲ್ ಟ್ರಾಫಿಕ್ ಜಾಮ್  ಏರಿಯ ನಾವ್ ಶೂಟಿಂಗ್ ಮಾಡೋಕೆ 'ಪರ್ಮಿಷನ್ನು' ಸಿಗೋಲ್ಲ, ನಾ ಹೇಳಿದ ಹಾಗೆ ಖಾಲಿ ಜಾಗದಲೇ ಮಾಡೋಣ,.....

ಹೌದೂ ಅದು ನಿಜವೇ, ಸ್ಸರಿ ನಾವ್ ಫೈಟು ಸೀನ್    ಯಲಹಂಕ ಹತ್ತಿರ ಇರೋ  'ಅವಳಿ' ಬಿಲ್ಡಿಂಗ್ ನಲ್ ಮಾಡೋಣಸಕತ್ ಆಗಿರುತ್ತೆ, ನೋಡೋಕೆ ಒಳ್ಳೆ 'ಫಾರಿನ್ ಲೋಕೇಶನ್ ' ತರಹ ಕಾಣ್ಸುತ್ತೆ!!

 

ಪುಟ್ಟ- ಸ್ಸಾರ್ ಅದ್ಕೆ ಪರ್ಮಿಷನ್ನು?

ಅದ್ಕ್ಯಾಕ್ರಿ ತಲೆ ಕೆಡಿಸ್ಕೊತೀರ?

ಅಲ್ಲಿ ನಂಗೆ ಗೊತ್ತಿರೋ ಒಬ್ಬ  ಮರಿ ರಾಜಕಾರಣಿ  ಒಬ್ಬ ಅವ್ನೆ, ಅವ್ನಿಗ್ ಹೇಳಿದ್ರೆ  ಪರ್ಮಿಷನ್ನು ಸಿಗ್ತೆ,

ನಾಳೆ ಫೈಟು ಶೂಟಿಂಗು ಅಲ್ಲೇ,

ಸ್ಸರಿ ಸ್ಸಾರ್  ನೀವೆಳಿದ ಹಾಗೆಯೇ...ಆಗಲಿ..

 

ನಾಯಕಿಯ  ಆಯ್ಕೆ ಆಗಬೇಕಿತ್ತಲ್ಲ  ಅದ್ನ  ನಿರ್ಮಾಪಕರ ಹತ್ತಿರ ಮಾತಾಡಲು  ಅವ್ರು, ಯಾರಾರ  ಬಾಲಿವುಡ್  ನಟೀನ  ಕರೆ ತರೋಣ  ಕೆಲವೊಮ್ಮೆ 'ಅವ್ರು' ಇದ್ದಾರೆ ಅಂದ್ರೇನೆ  ಚಿತ್ರ ಓಡುತ್ತೆ!!

 

ಯಾರನ  ತರೋಣ ಸ್ಸಾರ್?

ಅಲ್ದೆ ಅವ್ರು ವಿಪರೀತ  ದುಬಾರಿ, ಸಾಲದ್ದಕ್ಕೆ ಅವರ ಹಿಂದೆ  ಹತ್ತು ಜನ ಬಾಡಿ ಗಾರ್ಡುಗಳು  ನಾಯಕಿ ಅಮ್ಮ ಅಪ್ಪ- ತಮ್ಮನೇ ನಾಯೀನು ಜೊತೆ ಕರೆ ತರ್ತಾರೆ:))

ಎಲ್ರನ್ನೂ-ಎಲ್ಲವನ್ನೂ *****  ಹೋಟೆಳಲ್ಲೇ ಇರಿಸಬೇಕು!!

ನೀ  ಓಕೆ ಅಂದ್ರೆ ,ನನಗೋ ಓಕೆ...

ಅದ್ಕೆ ನಿರ್ಮಾಪಕ  ಸಧ್ಯಕ್ಕೆ 'ನನ ಭಾಗದ' ಚಿತ್ರೀಕರಣ ನಡೆಯಲಿ, ಅಸ್ಟರಲ್ಲಿ  ಪೇಪರ್ ನಲ್ ಜಾಹೀರಾತು  ಕೊಡೋಣ ನಾಯಕಿ ಬೇಕಾಗಿದ್ದಾಳೆ ಅಂತಯಾರದ್ರೂ   ಒಬ್ಬ  ನವ್ಯ ನಟಿ ಸಿಗಬಹುದು...

ಸ್ಸರಿ ಸ್ಸಾರ್ ಆದರೂ ನಾವ್ ಬೇಗ ಹುಡುಕಬೇಕು, ಇದೂ ಪೂರ ನಾಯಕ-ನಾಯಕಿ  'ಆಧಾರಿತ'- ಅವಲಂಬಿತ  ಸಿನೆಮ ಹೀಗಾಗಿ ನಾಯಕಿ ಸಿಗೋದು ತಡ ಆದ್ರೆ ನಮ್ಮ ಚಿತ್ರವೂ ತಡ ಆಗ್ತೆ,

ರ್ರೀ ರೀ- ಹಾಗೆ ಆಗುವ ಹಾಗಿಲ್ಲ, ನಾ ಮೊದ್ಲೇ ದುಬಾರಿ  'ಬಡ್ಡಿಗೆ' ಹಣ ತಂದು  ಇಲ್ಲಿ ಜುಗಾರಿ ಆಡೋ ಹಾಗೇ ಸಿನೆಮ ಮಾಡ್ತಿದಿನಿ:)) ಲೇಟ ಆದ್ರೆ ನಾ ಬಡ್ಡಿ -ಚಕ್ರ ಬಡ್ಡಿ - ಬಡ್ಡಿ ಬಡ್ಡಿ  ಅಂತ ಕಟ್ಟುತ್ತಲೇ  ಕೊನೆಗೆ  'ಬೆಬ್ಬೆ'ಬ್ಬೆಬ್ಬೆಬೆ   ಅಂತ ರಸ್ತೆ ಮೇಲೆ ಹೋಗ್ಬೇಕಾಗ್ತೆ:((((

ನಿರ್ಮಾಪಕರ ಮಾತು ಕೇಳಿ  ನಿರ್ದೇಶಕರಿಗೆ 'ಪರಿಸ್ತಿತಿಯ' ಅರಿವೂ ಹಾಗಿ  ನಗೆಯೂ ಬಂತು...

 

ಮೊದಲ  ಶಾಟು ತೆಗೆಯಲು  ಕಾತರನಾಗಿದ್ದ ಯುವ ನಿರ್ದೇಶಕ ಪುಟ್ಟ , ಚಿತ್ರೀಕರಣಕ್ಕೆ ಶುಭ ಹಾರಿಸಲು ಬಂದ ಗಣ್ಯರ ದಂಡು ಕಂಡ ಬೆಕ್ಕಸ ಬೆರಗಾದ!

ಖುದ್ದು ಮುಖ್ಯಮಂತ್ರಿಗಳೂ

ಅವ್ರ ಹಲ ಸಂಪುಟ ಸದಸ್ಯರೂ

ವಿರೋಧ ಪಕ್ಚದವ್ರೂ

ಅಭಿಮಾನಿಗಳೂ  ಎಲ್ರೋ ದೇವಸ್ಥಾನದ ಮುಂದೆ ನೆರ್ದು  ಅಲಿ ಜಾತ್ರೆ ನಡೆಯುತ್ತಿದೆ ಎಂಬಂತಿತ್ತು..

ಮುಹೂರ್ತ  ಪೂಜೆಯನ್ ಶ್ರೀ ಶ್ರೀ ಶ್ರೀ (ನವ ನಾಮಕರಣ) ಅಂಡಾ0  ಭಂಡ ಸ್ವಾಮಿಗಳವರು ನೆರವೆರ್ಸಿ 'ಲೋಬಾನ ' ಹಾಕಿ 'ಹೊಗೆ ' ಎಬ್ಬಿಸಿ  ಯಾರ್ ನೋಡ್ತಿಲ ಅಂತ 'ಕಂಫಾರ್ಮು'  ಮಾಡಿಕೊಂಡು ಮೆತ್ತಗೆ ' ದೊಡ್ಡ'  ಗಾತ್ರದ ಬಾಳೇ ಹಣ್ಣು 'ಸ್ವಾಹಮಾಡಿದರು....:))

ಮೊದಲ ಶಾಟು ದೇವರಿಗೆ ಕೈ ಮುಗಿವದು ಅಲ್ಲವ?

ಅದು ಎಲ್ರೋ ಭಕ್ತಿಯಿಂದ  ಮಾಡೋರೆ ಸಹಜವಾಗಿ,

ಸೊ ಅದು ಓಕೆ ಆಯ್ತು.. ಮೊದಲ ಶಾಟು ನಿರ್ದೇಶಿಸಿದ್ದು 'ಪುಟ್ಟನ' ಗುರುಗಳು...

ಪುಟ್ಟನಿಗೆ ಶುಭ ಹಾರೈಸಿ ಎಲ್ರೂ ಹೊರಟು ಹೋದರು,ಈಗ ಪುಟ್ಟ ಶೂಟಿಂಗ್ ಪ್ಯಾಕಪ್ ಅಂತ ಹೇಳಿಎಲ್ಲವನ್ನೂ ಎಲ್ರನೂ ಪ್ಯಾಕ್  ಮಾಡಿಸಿಕೊಂಡು ಯಲಹಂಕ 'ಅವಳಿ ಮಹಡಿಗಳಬಿಲ್ಡಿಂಗ್ ಗೆ ಫೈಟು ಸೀನು ತೆಗೆಯ ಹೊರಟ..

 

ನಿರ್ಮಾಪಕ ನಿಗೆ ಪ್ರಸಾದನ ವಿಭಾಗದವರು  ಮೇಕಪ್ ಮಾಡುತ್ತಿದ್ದರು, ಮೊದಲೇ ಭದ್ರಾವತಿ ಬಂಗಾರ!

ಎಸ್ಟೆ ಬಣ್ಣ ಬಳಿದರೂ  ಮುಖದ ಕಲರು ಕೊಂಚವೂ ಚೇಂಜ್ ಆಗದೆ,ಹತಾಶನಾದ  ಪ್ರಸಾದಿಗ, ನಿರ್ದೇಶಕರ ಹತ್ತಿರ ಬಂದು, ಸ್ಸಾರ್ ನನ್ನೆಲ್ಲ ಬಣ್ಣ ಬಳಿದರೂ ಯಪ್ಪಾ  ವಸಿಯೂ   ಬದಲಾಗಲಿಲ , ನೀವು ಹೆಹ್ಚ್ಸೆಚು  ಬೆಳಕು ಹಾಯಿಸಿ  ಇಲ್ಲ ಕಂಪ್ಯೂಟರ್ ನಲ್ಲಿ  ಕೈ ಚಳಕ ತೋರಿ ಅವರನ್ನ  ಕೆಂಪಾಗಿಸಿ ಎಂದ:))

ಮೊದಲ ಶಾಟು ಬಗ್ಗೆ ವಿವರಿಸಿದ   ಸಾಹಸ ನಿರ್ದೇಶಕಅವಳಿ ಬಿಲ್ಡಿಂಗ್  ಕೆಳಗಿಂದ  ಜನ ಖಳರನ್ನ ನಾಯಕ 'ಕೆಳಗಿಂದಮೇಲಿನ ಮಹಡಿ ವರಗೆ  ಅಟ್ಟಿಸಿ ಕೊಂಡು  'ಮೆಟ್ಟಿಲು ಹತ್ತಿ' ಹೋಗಬೇಕಿತ್ತು!!

ಹುರುಪಿನಿಂದಲೇ ಅದ್ಕೆ ರೆಡಿ ಆದರು ನಿರ್ಮಾಪಕರು, ರೆಡಿ , ಕ್ಯಾಮೆರ , ಯಾಕ್ಚೆನ್ನು  ಅಂದ ಕೂಡಲೇ  ಜನ ಖಲರೂ ಸ್ಪರ್ಧೆಗೆ ಬಿದ್ದವರಂತೆ ಓಡಿದರು. ನಿರ್ಮಾಪಕನಿಗೆ ಹತ್ತು ಹೆಜೆ ಹಾಕುವುದರೊಳಗೆ  ತೊಡರುಗಾಲು ಬಿದ್ದು  ದೊಪ್ಪನೆ ಬಿದ್ದ, ಕಟ್ ಕಟ್ ಕಟ್...

ಹೆಹ್ಚ್ಚು ಕಡಿಮೆ  ಚೀರಿದ ನಿರ್ದೇಶಕ :((

 

ಕುಸಿದು ಬಿದ್ದ ನಿರ್ಮಾಪಕನಿಗೆ 'ತಂಪು ಬಿಸ್ಲೇರಿ' ನೀರು ಕುಡಿಸಿ  ಮುಖಕ್ಕೆ ಚಿಮುಕಿಸಿ  ಹುರುಪು- ಹುಮ್ಮಸ್ಸು ತುಂಬಿ ಮತ್ತೊಮ್ಮೆ ಓಡಲು  ಹೇಳಿದರು...ಹಂಗೋಹಿಂಗೂ  ಓಡಿ ಮಹಡಿ ಮುಟ್ಟಿದ ನಿರ್ಮಾಪಕನ  ಎದೆ ಗುಂಡಿಗೆ ಘಂಟೆಗೆ ೫೦ ಕೀ  ಮೀ  ವೇಗದಲಿ ಹೊಡೆಕೊಳುತಿತ್ತು!

ನಾಲಗೆ ಒಣಗಿ ತುಟಿ ತೇವ ಕಳೆದುಕೊಂಡು , ಉಸ್ಸಪ ಅಂತ ಕುಸಿದು ಕುಳಿತರು ಮೂಲೆಯಲ್ಲಿ, ಕಟ್ ಕಟ್ ಅಂತ  ಹೇಳಿದರು ನಿರ್ದೇಶಕರು ಎರಡನೇ ಸಲ, ಕೊಂಚ ಹೊತ್ತು ಸುಧಾರಿಸಿಕೊಂಡು  ಮತ್ತೆ ಓಡಲು ರೆಡಿ ಅದ್ರು ನಿರ್ಮಾಪಕರು, ರೆಡಿ ಕ್ಯಾಮೆರ  ಆಕ್ಚನ್ನು , ಅಂದ ಕೂಡಲೇ ನೆ ಮಹಡಿ ಮುಟ್ಟಿದ ನಿರ್ಮಾಪಕ ಕೈ ಆಡಿಸುತ, ಸಾಕು ಸಾಕು ನನ್ನಿಂದಾಗಲ್ಲ ನನ್ನಿಂದಾಗಲ , ಅಂತ  ಗೋಡೆಗೊರಗಿ  ನಿಂತ,

ಬರ್ತಿದ್ದ ನಗೆ ತಡೆದುಕೊಂಡು  ನಿರ್ದೇಶಕರು ಕೂಗಿದರು,

ಕಟ್

ಕಟ್

ಕಟ್....

 

ನಾ ಒಂದೊಂದು ಸೀನಿಗೂ ಹೇಗೆ ಕಟ್ -ಕಟ್ ಅಂತ ಹೇಳ್ತಾ ವಯ್ಯ ತರಹ ಹತ್ತು ಟೆಕ್ ತೆಗೆದುಕೊಂಡರೆ  ಸಿನೆಮ ೩೦೧೨ ರಲ್ಲೂ ಬಿಡುಗಡೆ ಆಗೋದು ಡೌಟು -ನಿರ್ದೇಶಕನ  ವೇದನೆ...!!

ನೋಡಿ ನಿರ್ದೇಶಕರೇ ನಾ ಖಳರನ್ನ ಅಟ್ಟಿಸಿಕೊಂಡು  'ಮೆಟ್ಟಿಲ' ಮೇಲೆ ಏಕೆ ಓಡಬೇಕು? ಅದ್ನ 'ಲಿಫ್ಟ್' ನಲ್ಲೆ ಆರಾಮಾಗಿ ತೆಗಿಬಹುದಲ್? ತೆಗಿಬಹುದು  ಆದ್ರೆ ಅದು 'ಸಹಜವಾಗಿ' ಇರೋಲ್ಲ ಸಾರ್ ಅದ್ಕೆ..- ನಿರ್ದೇಶಕರ ವಿವರಣೆ..

ಹಾಗೂ ಹೀಗೂ ನಿರ್ಮಪಕರನ್ ಪುಸಲಾಯಿಸಿ , ಧೈರ್ಯ ತುಂಬಿ  ಕೊನೆ ಮಹಡಿ  ಮುಟ್ಟಿಸಿದ್ದು ಆಯ್ತು..

ಕೊನೆ ಮಹಡಿಯಲಿ  ನಿರ್ಮಾಪಕನ ಸೊಂಟಕ್ಕೆ ಭುಜಕ್ಕೆ ಹಗ್ಗ ಕಟ್ಟಿ  -ಕೊಕ್ಕೆ ಸಿಕ್ಕಿಸಿ ಕ್ರೆನಿಗೆ ನೇತು ಹಾಕಿ  ಹಾರಿ-ಹಾರಿ ಖಳರನ್ನ  ಹೊಡೆವಂತೆ ಹೇಳಿದಾಗಭಲೇ 'ಜೋಶ'ನಿಂದ  ಮಡಿ ಮುಗಿಸಿದ ನಿರ್ಮಪಕರನ್ ಎಲ್ರೂ ಅಭಿನಂದಿಸಿದರು 'ಒಳ್ಳೆ ' ನಟನೆ ಸ್ಸಾರ್ ಅಂತ.. ನಿರ್ದೇಶಕರೇ ಮುಂದಿನ ಶಾಟು ಏನು?

ಸ್ಸಾರ್ - ನೀವ್ ಬಿಲ್ಡಿಂಗ್ ಇಂದ  ಬಿಲ್ದಿಂಗಗೆ 

'ಒಂದೇ ಜಿಗಿತಕ್ಕೆ' ಹಾರಬೇಕು....!:(((

 

'ಪಿಚರ್ಅಭೀ ಭಾಕಿ ಹೈ......:))

 

 

ಚಿತ್ರ ಮೂಲ

ಕ್ಲಿಪ್ ಆರ್ಟ್- clipartof .com

 

ಗಾಳಿ ಅಂಜನೇಯ ಸ್ವಾಮಿ - ಗೂಗಲ್ ಸರ್ಚ್

Rating
No votes yet

Comments