ಪತ್ರಿಕೆಗಳು ಮತ್ತು ಭಾಷೆ.
ಪತ್ರಿಕೆಗಳನ್ನೇ ಜನ ಹೆಚ್ಚಾಗಿ ಓದುವದು . ಪತ್ರಿಕೆಗಳಲ್ಲಿಯೇ ಭಾಷೆಯ ಬರಹ ಹೆಚ್ಚಾಗಿರುವದು . ಹೀಗಾಗಿ ಪತ್ರಿಕೆಗಳು ಭಾಷೆಯನ್ನು ರೂಪಿಸುವಲ್ಲಿ ಹೊಸಹೊಸ ಪದಗಳನ್ನು ಚಲಾವಣೆಗೆ ತರುವಲ್ಲಿ ಮುಖ್ಯ ಪಾತ್ರ ರೂಪಿಸುತ್ತವೆ.
ಪತ್ರಿಕೆಗಳ ಭಾಷೆಯನ್ನು ಗಮನಿಸುತ್ತಿದ್ದರೆ. ಎಷ್ಟೋ ಕುತೂಹಲಕರ ವಿಷಯಗಳು ನಮ್ಮ ಲಕ್ಷ್ಯಕ್ಕೆ ಬರುತ್ತವೆ.
ಉದಾಹರಣೆಗೆ - ಒಂದೊಮ್ಮೆ ಕೆಳಜಾತಿಯವರು ಹೊಲೆಯರೆಂದು ಕರೆಯಲ್ಪಡುತ್ತಿದ್ದರು ನಂತರ 'ಅಸ್ಪ್ರಶ್ಯ'ರಾಗಿ 'ಹರಿಜನ'ರಾದರು , ನಂತರ 'ಪರಿಶಿಷ್ಟ' ರಾದರು.
ಮೊದಲು ಸಲಿಂಗ ಕಾಮ ಎಂದು ಉಪಯೋಗಿಸುತಿದ್ದು ಹೆಚ್ಚು ಹೆಚ್ಚು ಸ್ವೀಕಾರಾರ್ಹವಾಗುತ್ತಿದ್ದಂತೆ ಸಲಿಂಗ ಪ್ರೇಮವಾಯಿತು!. 'ಸೂಳೆ' 'ವೇಶ್ಯೆ'ಯಾಗಿ ಈಗ 'ಲೈಂಗಿಕ ಕಾರ್ಯಕರ್ತೆ'ಯಾಗಿದ್ದಾಳೆ. ಹೀಗೆ ಭಾಷೆಯ ಶಬ್ದಗಳು ಸಾಮಾಜಿಕ ಬದಲಾವಣೆಗಳ ಪ್ರತಿಬಿಂಬವಾಗಿವೆ.
ಅಂದ ಹಾಗೆ ಗಮನಿಸಿದ್ದೀರ್ಆ? ಒಂದೆರಡು ಹಳೆಗನ್ನಡ ಶಬ್ದಗಳು - ಇಂತಪ್ಪ , ಇಂತಿರ್ಪ ಈಗೀಗ ಹೆಚ್ಚಾಗಿ ಉಪಯೋಗವಾಗುತ್ತಿವೆ!
Rating