ಪತ್ರಿಕೆಯ ಸುಡೋಕು ಸ್ಥಳ
ಪ್ರತಿದಿನ ಬೆಳಗ್ಗೆ ಪತ್ರಿಕೆಯ ಮುಖ್ಯ ವರದಿಗಳನ್ನು ಓದಿದ ಮೇಲೆ ನಾನು ಹುಡುಕೋದು ಪತ್ರಿಕೆಯ ಸುಡೋಕು ಸ್ಥಳ.
ಎಲ್ಲಾ ಪತ್ರಿಕೆಗಳು ಸುಡೋಕುಗಾಗಿ ಒಂದು ಸ್ಥಳ ಮೀಸಲಿಟ್ಟಿದೆ.ಸಂಜೆ ಪತ್ರಿಕೆಗಳೂ ಸಹ. ಉದಾಹರಣೆಗೆ ಉದಯವಾಣಿಯಲ್ಲಿ ಕೊನೆಯ ಪುಟಕ್ಕಿಂತ ಹಿಂದೆ,ವಿ.ಕರ್ನಾಟಕದಲ್ಲಿ ಕೊನೆಯ ಪುಟದಲ್ಲಿ, ಪ್ರಜಾವಾಣಿ,ಕನ್ನಡಪ್ರಭ...ದಲ್ಲಿ ಒಳಗಿನ ಪುಟಗಳಲ್ಲಿ.
ಆದರೆ ಹೆಚ್ಚಿನ ಪತ್ರಿಕೆಗಳು (ಕನ್ನಡಿಗರು busy?/ದಡ್ಡರೆಂದು ತಿಳಿದಿದ್ದಾರೇನೊ?)ಬರೀ ಸುಲಭದ ಸುಡೋಕು ಕೊಡುತ್ತಿದ್ದಾರೆ.ಇದರಿಂದಾಗಿ ನಾನು ಹಲವು ಪತ್ರಿಕೆಗಳನ್ನು ಬದಲಾಯಿಸುತ್ತಾ ಇದ್ದೆ.Times of Indiaದವರು ಸುಡೋಕು ಸ್ಪರ್ಧೆ ಇದ್ದಾಗ ಉತ್ತಮ ಸುಡೋಕು ಕೊಡುತ್ತಿದ್ದರು.ಡೆಕ್ಕನ್ ಹೆರಾಲ್ಡ್,ಪ್ರಜಾವಾಣಿ,ಕನ್ನಡಪ್ರಭ,ಸಂಜೆವಾಣಿಯ ಸುಡೋಕು ಸಹ ಪರವಾಗಿಲ್ಲ.ವಿಜಯ ಕರ್ನಾಟಕದಲ್ಲಿ ಉದಯ ಜಾದುಗರ್ ಕೊಡುತ್ತಿದ್ದ ಸುಡೋಕು(ಬಹುಮಾನ ಬೇರೆ)ಯಾರಿಗೂ ಇಷ್ಟವಾಗಿರಲಿಕ್ಕಿಲ್ಲ. ಈಗ ಬರುತ್ತಿರುವ ೪,೮ರ ಸುಡೋಕು ಅದಕ್ಕಿಂತ ಎಷ್ಟೋ ವಾಸಿ.
ನೆಟ್ ನಲ್ಲಿ ಬೇಕಾದಷ್ಟು ಸುಡೊಕು ಸಿಗುತ್ತದೆ. ಸುಡೊಕು ಪುಸ್ತಕಗಳು ಇವೆ. ಆದರೆ ಅವುಗಳಲ್ಲಿ ನನಗೆ ಆಸಕ್ತಿಯಿಲ್ಲ. ಪತ್ರಿಕೆಗಳಲ್ಲಿಯೇ ಬರಬೇಕು. ಅದಕ್ಕೇ ನಾನು ಹುಡುಕೋದು"ಪತ್ರಿಕೆಗಳ ಸುಡೋಕು ಸ್ಥಳ".
Comments
ಉ: ಪತ್ರಿಕೆಯ ಸುಡೋಕು ಸ್ಥಳ
In reply to ಉ: ಪತ್ರಿಕೆಯ ಸುಡೋಕು ಸ್ಥಳ by shreekant.mishrikoti
ಉ: ಪತ್ರಿಕೆಯ ಸುಡೋಕು ಸ್ಥಳ
In reply to ಉ: ಪತ್ರಿಕೆಯ ಸುಡೋಕು ಸ್ಥಳ by shreekant.mishrikoti
ಉ: ಪತ್ರಿಕೆಯ ಸುಡೋಕು ಸ್ಥಳ
ಉ: ಪತ್ರಿಕೆಯ ಸುಡೋಕು ಸ್ಥಳ
In reply to ಉ: ಪತ್ರಿಕೆಯ ಸುಡೋಕು ಸ್ಥಳ by anivaasi
ಉ: ಪತ್ರಿಕೆಯ ಸುಡೋಕು ಸ್ಥಳ
ಉ: ಪತ್ರಿಕೆಯ ಸುಡೋಕು ಸ್ಥಳ
In reply to ಉ: ಪತ್ರಿಕೆಯ ಸುಡೋಕು ಸ್ಥಳ by Aram
ಉ: ಪತ್ರಿಕೆಯ ಸುಡೋಕು ಸ್ಥಳ