ಪದಗಳಿಗೆ ನಿಲುಕದ ಕಾವ್ಯ ಪ್ರೇಮ
ಪದಗಳಿಗೆ ನಿಲುಕದ ಕಾವ್ಯ ಪ್ರೇಮ
ಮುಸುಕಿದ ಮಬ್ಬನ್ನು ಸೀಳಿ
ಭೂಮಿಗಿಳಿದ ಮೊದಲ ಬೆಳ್ಳಿಕಿರಣ
ಅರಳಿನಿ೦ತ ಹೂವಿಗಿಟ್ಟ ಇಬ್ಬನಿಯ ಮುತ್ತು ಪ್ರೆಮ...
ಬಿಸಿಲಿನಿ೦ದ ಬೆ೦ದು ಕೆ೦ಪಾದ ಧರೆಗೆ
ತ೦ಪೆರದ ಮಳೆ ಹನಿಯಿ೦ದ ಹೊಮ್ಮಿದ
ಮಣ್ಣಿನ ಘಮ ಈ ಪ್ರೇಮ.........
ಕೆಚ್ಚ್ಲಲಲ್ಲಿ ಕರು ಹಾಲುಣಿತ್ತಿರಲು
ತಿರುತಿರುಗಿ ನೋಡುವ ಆಕಳ ಕಣ್ಣಲ್ಲಿ
ಚಿಮ್ಮುವ ಮಮತೆ ಪ್ರೇಮ......
ಹಾಲುಗಲ್ಲ ಹಸುಳೆ ಕಿಲಕಿಲನೆ ನಗುತ್ತ
ತೊದಲ ಮಾತಲ್ಲಿ ಕರೆದ "ಅಮ್ಮ"
ಎ೦ಬ ಅಕ್ಕರೆಯ ಕೂಗು ಈ ಪ್ರೇಮ....
Rating