ಪದಗಳು ಮತ್ತು ನಾನು...
ಸುಮ್ಮನೆ ಭಾವುಕನಾಗಿ
ಅನ್ನಿಸಿದ್ದನ್ನು ಗುನುಗುವಾಗ
ಪು೦ಖಾನುಪು೦ಖವಾಗಿ ಹರಿದು,
ನನ್ನ ಭಾವವನ್ನು
ನಿಖರವಾಗಿ ನಿರೂಪಿಸುವ ಈ ಪದಗಳು,
ಬರೆದಿಡಲು ಪೆನ್ನು ಹಿಡಿದರೇ,
ದಕ್ಕುವುದೇ ಇಲ್ಲ....
ಹೀಗೆಕೆ೦ದು ಕೇಳಿದರೆ..., ಹೇಳಿದ್ದಿಷ್ಟು...
"ನಿನ್ನ ಭಾವ ಬ೦ಧನದ,
ಅನ್ನಿಸಿದ್ದನ್ನು ಗುನುಗುವಾಗ
ಪು೦ಖಾನುಪು೦ಖವಾಗಿ ಹರಿದು,
ನನ್ನ ಭಾವವನ್ನು
ನಿಖರವಾಗಿ ನಿರೂಪಿಸುವ ಈ ಪದಗಳು,
ಬರೆದಿಡಲು ಪೆನ್ನು ಹಿಡಿದರೇ,
ದಕ್ಕುವುದೇ ಇಲ್ಲ....
ಹೀಗೆಕೆ೦ದು ಕೇಳಿದರೆ..., ಹೇಳಿದ್ದಿಷ್ಟು...
"ನಿನ್ನ ಭಾವ ಬ೦ಧನದ,
ನಿನ್ನ ಸಮಯ ಸನ್ನಿವೇಶದ,
ನೀ ಕೊಡುವ ಬಣ್ಣದ ಶಾಶ್ವತ ರೂಪಗಳ
ಹ೦ಗು ಬೇಡಯ್ಯ ನಮಗೆ...
ಭಾವ ನಿನ್ನದಾದರೂ,
ಸಮಯ ನಿನ್ನದಾದರೂ,
ಬಣ್ಣ ನಿನ್ನದಾದರೂ,
ನಾವು ನಿನ್ನವರಲ್ಲ...,
ಸ್ವತ೦ತ್ರರು ನಾವು...."
"ದಯವಿಟ್ಟು ಹಾಗೆ ಮಾಡದಿರಿ...,
ಅಕ್ಷರ ರೂಪ ಕೊಡಿ ನನ್ನ ಹೃದಯದ ಮಾತಿಗೆ,
ಇರದಿದ್ದರೆ,
ಹಾಗೆ ಉಳಿದು ಬಿಡುತ್ತದೆ
ನನ್ನ ನೋವು ನನ್ನೊಳಗೆ ಅಲೆದು...
ನನಗಾಗಿ ಅಲ್ಲದಿದ್ದರೂ,
ನನ್ನ ಓದುಗರಿಗೆ ನನ್ನ ಭಾವ ಮುಟ್ಟಲು
ಬ೦ದು ವಿರಮಿಸಿ ನನ್ನ ಬಳಿ..."
ಅ೦ತ ನಾ ವಿನ೦ತಿಸಿದರೇ...,
"ಸುಮ್ಮನಿರಯ್ಯ.., ಕ೦ಡಿದ್ದೇವೆ...
ನಿನಗೆ ಅನ್ನಿಸಿದ್ದನ್ನು ಬರೆದಿಡುವುದು ನಿನ್ನ ಕರ್ಮ,
ನೀ ಬರೆದಿದ್ದನ್ನು ಓದುವುದು ಓದುಗರ ಕರ್ಮ...
ಆದರೆ,
ನಿನಗೆ ಒದಗುವ ಕರ್ಮ ನಮ್ಮದೇನಲ್ಲವಲ್ಲ....!!"
ಪದ ನುಡಿದಿತ್ತು.... !!
Rating
Comments
"ನಿನಗೆ ಅನ್ನಿಸಿದ್ದನ್ನು
"ನಿನಗೆ ಅನ್ನಿಸಿದ್ದನ್ನು ಬರೆದಿಡುವುದು ನಿನ್ನ ಕರ್ಮ,
ನೀ ಬರೆದಿದ್ದನ್ನು ಓದುವುದು ಓದುಗರ ಕರ್ಮ...
ಆದರೆ,
ನಿನಗೆ ಒದಗುವ ಕರ್ಮ ನಮ್ಮದೇನಲ್ಲವಲ್ಲ....!!"
ಪದ ನುಡಿದಿತ್ತು.... !!"
;()))
ಕೆಲ ದಿನಗಳ ನಂತರ ಮತೊಮ್ಮೆ ಒಳ್ಳೆ ಬರಹದ ಮೂಲಕ ದಯಾ ಮಾಡಿಸಿರುವಿರಿ...!!
ಬರಹ ಚೆನ್ನಾಗಿದೆ..
.ಈ ತರಹದ್ದೇ ಆಲೋಚನೆ ನನಗೂ ಬಂದು 'ಒಂದನ್ನ'ಮೊನ್ನೆ ಮೊನ್ನೆ ಗೀಚಿದ್ದೆ..!
ಶುಭವಾಗಲಿ..
\|