ಪದ್ಮಭೂಷಣ ದೇವನಹಳ್ಳಿ ವೆಂಕಟಮಣಯ್ಯ ಗುಂಡಪ್ಪ - ಇಂದು ಹುಟ್ಟಿದ ದಿನ

ಪದ್ಮಭೂಷಣ ದೇವನಹಳ್ಳಿ ವೆಂಕಟಮಣಯ್ಯ ಗುಂಡಪ್ಪ - ಇಂದು ಹುಟ್ಟಿದ ದಿನ

ಪದ್ಮಭೂಷಣ ದೇವನಹಳ್ಳಿ ವೆಂಕಟಮಣಯ್ಯ ಗುಂಡಪ್ಪ - ಇಂದು ಹುಟ್ಟಿದ ದಿನ

 

ಜನನ:   ೧೭ ಮಾರ್ಚ್ ೧೮೮೭ 

ಮರಣ:  ೦೭ ಅಕ್ಟೋಬರ್ ೧೯೭೫

ಜನ್ಮಸ್ಥಳ:         ಮುಳಬಾಗಿಲು, ಕೋಲಾರ

ಶಿಕ್ಷಣ:           ಎಸ್.ಎಸ್.ಎಲ್.ಸಿ ಪೂರ್ಣಗೊಳಿಸಲಿಲ್ಲ; ಕನ್ನಡ, ಸಂಸ್ಕೃತ ಮತ್ತು ಇಂಗ್ಲೀಷ್ -  ಸ್ವಯಂ ಅಧ್ಯಯನ

ಪಾಂಡಿತ್ಯ:      

  • ವೇದ, ವೇದಾಂತ, ಬ್ರಹ್ಮಸೂತ್ರ, ಧರ್ಮಸೂತ್ರ ಇತ್ಯಾದಿ
  • ಕರ್ನಾಟಕದ ರಾಜಕೀಯ
  • ಸ್ವಾತಂತ್ರ್ಯ : ಗಾಂಧೀಜಿ ಮತ್ತು ತಿಲಕರ ಸಂಪರ್ಕ
  • ತಾಂತ್ರಿಕ: ಭಾರತರತ್ನ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರಿಗೆ ಸಲಹೆಗಳನ್ನು ನೀಡುತ್ತಿದ್ದರು.
  • ಪತ್ರಕರ್ತರು

ಕೃತಿಗಳು

  • ಶಿಖರಪ್ರಾಯಕೃತಿ: ಮಂಕುತಿಮ್ಮನ ಕಗ್ಗ; ಗುಂಡೋಪನಿಷತ್ ಎಂದು ಪ್ರಖ್ಯಾತ: ಅಲ್ಪದರಲ್ಲಿ ಜ್ಞಾನಪೀಠ ಪ್ರಶಸ್ತಿಯನ್ನು ಕಳೆದುಕೊಂಡ ಕೃತಿ. ಕನ್ನಡದ ಭಗವತ್ ಗೀತೆ ಎಂದೂ ಕರೆಯುವರು. ಪ್ರಕಟನೆ: ೧೯೪೩.
  • ಇತರ ಕೃತಿಗಳು: ಮರುಳಮುನಿಯನ ಕಗ್ಗ, ಅಂತಃಪುರ ಗೀತೆಗಳು, ಉಅಮರನ ಒಸಗೆ, ಬಾಳಿಗೊಂದು ನಂಬಿಕೆ, ಸಂಸ್ಕೃತಿ, ಪುರುಷಸೂಕ್ತ, ದೇವರು, ಋತ, ಸತ್ಯ ಮತ್ತು ಧರ್ಮ,ಜೀವನಧರ್ಮ ಯೋಗ, ಶ್ರೀಮದ್ ಭಗವತ್ಗೀತಾ ತಾತ್ಪರ್ಯ, ಈಶಾವಾಸ್ಯ ಉಪನಿಶತ್, ಜ್ಞಾಪಕ ಚಿತ್ರಶಾಲೆ ಇತ್ಯಾದಿ.

ಪ್ರಶಸ್ತಿಗಳು:

  • ೧೯೭೦: ಸಾರ್ವಜನಿಕ ಸನ್ಮಾನ: ಸುಮಾರು ೧ ಲಕ್ಷ ರೂಪಾಯಿ ಸಮರ್ಪಣೆ: ಹಣವನ್ನು ಗೋಖಲೆ ಸಾರ್ವಜನಿಕ ಸಂಸ್ಥೆಗೆ ದಾನ.
  • ೧೯೭೪: ಪದ್ಮಭೂಷಣ ಪ್ರಶಸ್ತಿ
  • ೧೯೮೮ ರಲ್ಲಿ ಸ್ಟಾಂಪ್: ಸ್ಟಾಂಪ್ ನಲ್ಲಿ ಕಾಣಿಸಿಕೊಂಡ ಪ್ರಥಮ ಕನ್ನಡಿಗ

ಜೀವನ ಸಾರಾಂಶ:

                   ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು

                   ಕಲ್ಲಾಗು ಕಷ್ಟಗಳ ಮಳೆ ವಿಧಿ ಸುರಿಯೆ|

                   ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ

                   ಎಲ್ಲರೊಳಗೊಂದಾಗು ಮಂಕುತಿಮ್ಮ||

 

-      ನಾ.ಸೋಮೇಶ್ವರ

Rating
No votes yet

Comments