ಪಯಣ ಹೀಗೇಕೆ??

ಪಯಣ ಹೀಗೇಕೆ??

ಬಹುಶಃ ಹಾಗೇ ಆಗಬಾರದಿತ್ತೇನೋ. ಒಬ್ಬ ಒಳ್ಳೆ ಗೆಳೆಯನ್ನ ಕಳೆದುಕೊಂಡುಬಿಟ್ಟೆ! ಸಣ್ಣದೊಂದು ಬಿರುಕು ಸಾಕಿತ್ತು ಮನಸ್ಸುಗಳನ್ನ ಬೇರೆ ಮಾಡಲು. ಅವನು ಹೇಳಿದ್ದು ತಪ್ಪಾ ಅಥವಾ ಅಂದಿನ ಕ್ಷಣಕ್ಕೆ ನಾ ಯೋಚಿಸಿದ ರೀತಿ ತಪ್ಪ ತಿಳಿಯದು. ಕಾಲ ಚಕ್ರದಡಿಗೆ ಸಿಲುಕಿ ಬೇರೆಯಾದರೂ ಮನಸ್ಸುಗಳು ಮಾತ್ರ ಇಂದಿಗೂ ನೋಡಲು ಮಾತನಾಡಲು ಹಾತೊರೆಯುತ್ತವೆ.

ಬೆಂಗಳೂರಿನಷ್ಟು ದೊಡ್ಡ ಪಟ್ಟಣವಲ್ಲ ನಮ್ಮೂರು. ಬೆಳಿಗ್ಗೆ ವ್ಯಾನ್ ಹತ್ತಿ ಶಾಲೆ ಸೇರಿಕೊಂಡರೆ ಸಂಜೆ ಮೂರು ಮುಕ್ಕಾಲಿಗೆ ಸರಿಯಾಗಿ ಬೆಲ್ಲು. ಡಬ್ಬಿಯಲ್ಲಿ ಮಧ್ಯಾನಕ್ಕೆ ದೋಸೆ ಅಥವಾ ಇಡ್ಲಿ ಕೊಟ್ಟರೇ ಅದು ಸೇರುತಿದದ್ದು ದೊಡ್ಡ ಮೋರಿಗೆ. ಸಂಜೆ ಕಡ್ಡಾಯವಾಗಿ ಪಾರ್ಕ್‌ಗೆ ಸೀನ,ಗುರು,ಅನಂತ ಮತ್ತು ನಾನು ಹಾಜರ್. ಅಪ್ಪಿ ತಪ್ಪಿ ಮಾರ್ಕ್ಸ್ ಕಾರ್ಡ್ ಅಮ್ಮನ ಕೈಗೆ ಸಿಕ್ಕರೆ ಆಟ ಕಟ್. ಮಾರ್ಕ್ಸ್ ಕಾರ್ಡ್ ಕೊಟ್ಟಿಲ್ಲ ಇನ್ನ ಟೆಸ್ಟ್ ಪೇಪರ್ ಕೊಟ್ಟಿಲ್ಲ ಅಂದ್ರೆ ಶಿವು ಮನೆಗೆ ಪಕ್ಕಾ ಫೋನ್ ಫಿಕ್ಸು. ಎಂದಿಗೂ ಸುಳ್ಳು ಹೇಳದ ಶಿವ ನನ್ನ ಪಾಲಿನ ಡೇಂಜರ್ ಮ್ಯಾನ್ ಆದರೇ ಅದಕ್ಕೂ ಮೇಲಾಗಿ ಬೆಸ್ಟ್ ಫ್ರೆಂಡ್.

ಪ್ರೈಮರೀ ದಾಟಿ ಹೈ ಸ್ಕೂಲ್ ಎಂಬ ಪ್ರೌಢಾವಸ್ಥೆಗೆ ಕಾಲಿಡುತ್ತಿದಂತೆ ಕೆಲವು ಹೊಸ ಗೆಳೆಯರ ಪರಿಚಯ ಹಳೇ ಗೆಳೆಯರ ಅಗಲುವಿಕೆ! ಕನ್ನಡ ಬಿಟ್ಟು ನನ್ನ ಪ್ರಥಮ ಭಾಷೆ ಹಿಂದಿ ಕೆಲವರದು ಸಂಸ್ಕೃತ ಮಿಕ್ಕವರು ರನ್ನ,ಪಂಪ,ಪೊನ್ನ. ಈ ಮಧ್ಯೆ ಹಚ್ಚಿಕೊಂಡ ಗೆಳೆಯನ್ನೊಬ್ಬ ಕಳ್ಳತನ ಮಾಡಿ ಸಿಕ್ಕಿಬಿದ್ದ! ನನ್ನ ಬಟ್ಟಲು ಕಣ್ಣುಗಳ ತುಂಬಾ ನೀರು. ಇವನೇಕೆ ಹೀಗಾದ?? ಅಪ್ಪ ಸರ್ಕಾರಿ ನೌಕರ,ನನ್ನಂತೆ ಕಡಿಮೆ ಮಾರ್ಕ್ಸ್ ತೆಗೆದರು ಹೊಡೆಯದ ,ಬೈಯ್ಯದ ಮುದ್ದಿನ ಅಮ್ಮ ಆದರೂ ಇವ ಸಹವಾಸಕ್ಕೆ ಬಿದ್ದು ಪ್ರತಿಭೆ ತೋರಿಸಿದ್ದು ಕಾರ್ ಕಳ್ಳನಾಗಿ.

ಈಗ ನನ್ನ ಸಹಿತ ನನ್ನೆಲ್ಲಾ ಶಾಲೆಯ ಗೆಳೆಯರಿಗೆ ನನ್ನನ್ನು ಸೇರಿಸಿ ಮೂವತ್ತರ ಆಸುಪಾಸು. ಬದುಕನ್ನು ಕಟ್ಟಿಕೊಳ್ಳುವ ಹಟ್ಟಕ್ಕೆ ಬಿದ್ದು ಎಲ್ಲರೂ ದೂರದ ಊರಿಗೆ ಪಯಣಿಸಿದ್ದೇವೆ. ಒಬ್ಬೊಬ್ಬರನ್ನು ಒಂದೊಂದು ರೀತಿಯಲ್ಲಿ ಭೇಟಿ ಮಾಡಿ ಖುಷಿಪಟ್ಟು ಅವರ ಯಶಸ್ಸಿನ ಕಥೆ ಕೇಳಿ ಸಂಭ್ರಮಿಸಿದ್ದೇವೆ. ಕೆಲವರು ನೆನಪಿಗೆ ಬಾರರು ಇನ್ನಾ ಕೆಲವರು ನೆನಪಿಸ್ಕೊಳ್ಳದೆ ಇದ್ದರೆ ಉತ್ತಮ. ಈ ಮಧ್ಯೆ ತೀರಿ ಹೋದ ನೆನಪಿನ ಗೆಳೆಯ, ತಿದ್ದಿ ತೀಡಿ ಬದುಕಿಗೊಂದು ಅಡಿಪಾಯವಿಟ್ಟು ಅಗಲಿದ ಗುರುಗಳು ಇವರೆಲ್ಲರಿಗೂ ವಂದನೆಗಳು

"ಕಾರ್" ಗೆಳೆಯನ್ನನು ಸೇರಿಸಿ.

Rating
No votes yet

Comments

Submitted by hema hebbagodi Fri, 06/14/2013 - 11:32

ಅತಿಥಿಗಳಹ ನೀವೆಲ್ಲರು ಇಲ್ಲಿಗೆ ನೆಲೆಸಲು ಬಂದರಲ್ಲ ಒಂದರಗಳಿಗೆ ಆಮೋದಕೆ ಬರುವಿರಿ ಬಂದರಗಳಿಗೆಯೊಳೆ ಮೈದೆರೆವಿರಿ.. ಗೋಪಾಲ ಕೃಷ್ಣಅಡಿಗರ ಈ ಸಾಲುಗಳು ಅಗಲಿದ ಹಳೆಯ ಸಂಬಂಧಗಳ ನೆನಪಿನೊಂದಿಗೆ ಮತ್ತೆ ಮತ್ತೆ ಮನಸ್ಸಿಗೆ ಬರುತ್ತಿರುತ್ತದೆ. ಅವರು ಹೋದರು ಆದರೂ ಬಾಳು ನಡೆಯಲೇಬೇಕಲ್ಲ...
ನಿಮ್ಮ ಬರಹ ಇಷ್ಟವಾಯಿತು.