ಪಯಣ ಹುಡುಕಾಟ ಮತ್ತು ಹೋರಾಟ

ಪಯಣ ಹುಡುಕಾಟ ಮತ್ತು ಹೋರಾಟ



ಇನ್ನೂ ಮುಗಿಯಲಿಲ್ಲ
 ಹುಡುಕಾಟ
ಸಂಭಂಧಗಳ ಜಟಿಲತೆಯಲ್ಲಿ
ಸರಳತೆಯ ಶೋಧದಲ್ಲಿ
ಅದರ ಸೋಗಿನಲ್ಲಿ
ಮಿಥ್ಯ ವಿಷಾದಗಳ ಮೋಡದಲ್ಲಿ
ಮನುಷ್ಯ ಮತ್ತು ಪ್ರಕೃತಿಯ
ತೆರೆಮರೆಯಾಟದ
ಮುಸುಕಿನ  ಗುದ್ದಿನಲ್ಲಿ
ಕೈ ಕೈ ಮಿಲಾಯಿಸಿದ
ನಿರಂತರ
ಸೆಣಸಾಟದಲ್ಲಿ


ಮುಗಿಯಲಿಲ್ಲ
ಈ ಯುದ್ಧ
ನಮ್ಮೊಳಗೊಳಗೇ  
ಕಾಲದೇಶದ ಪರಿವೆಯಿಲ್ಲದ
ಹೊಟ್ಟೆ ಮನಸ್ಸುಗಳ
ನಡುವೆಯ
ಬುದ್ಧಿಯ ಚೈತನ್ಯದ
ನಡುವೆಯ
ಚೆಹರೆಯ ಹಿಂದಿನ ಮುಂದಿನ
ನಡುವೆಯ
ಸರ್ವಕಾಲಿಕ
ಅಸಮಾನತೆಯ  ನಡುವೆಯ
ಬಾಹ್ಯಾಡಂಬರದ
ಅಳಿವುಳಿವಿನ
ನಡುವೆಯ


ಮುಗಿಯದೀ
ನಿರಂತರ ಹೋರಾಟ
ಸಾವು ಬದುಕಿನ ಪಯಣದ
ನಡುವಿನ
ಅಣುವಿನ ಮಹತಿನ
ನಡುವಿನ
ಸೋಲು ಗೆಲುವು
ಯಾವುದೂ ನಿಶ್ಚಿತವಲ್ಲ
ನಿಶ್ಚಿತವೆಂದರೆ
ಸದಾ ನಡೆಯುವ
ಸೆಣಸಾಟದ
ಅನಿಶ್ಚಿತತೆಯ
ದೊಂಬರಾಟ
ಮಾತ್ರ

Rating
No votes yet

Comments