ಪಯಣ
೨ ವಾರದ ಹಿಂದೆ ನಾನು ನನ್ನ ಗೆಳೆಯರೆಲ್ಲ ಸೇರಿ ಮಡಿಕೇರಿಗೆ ಹೋದ್ವಿ. ಅದರಲ್ಲೇನಿದೆ ಅಲ್ವ...ನಿಮ್ಮು ಊಹೆ ಸರಿನೇ.
ನಮ್ಮ ಪ್ರಯಾಣ ಶುರುವಾಗಿದ್ದು ಮಂಗಳೂರಿನ ಬಲ್ಮಠದಿಂದ ೩ ಬೈಕು ೬ ಜನ, ಬೆಳಿಗ್ಗೆ ಸುಮಾರು ೭ ಗಂಟೆಗೆ ನಾವು ಹೊರಡಿದ್ವಿ. ಹೋಗ್ತಾ ಕಲ್ಲಡ್ಕದಲ್ಲಿ ತಿಂಡಿ ಕಾಫಿ ಮುಗ್ಸಿ, ಪುನಃ ಟರ್ರ್ ಟರ್ರ್ ಎಂದು ಬೈಕ್ ಶಬ್ದ ಮಾಡ್ಕೊಂಡು ಪ್ರಯಾಣ ಮುಂದ್ವರ್ಸಿದ್ವಿ.
ನಮ್ ಗ್ರೂಪಲ್ಲಿ ಪ್ರಕಾಶಿತ ಮಾನವ ಅಂದ್ರೆ ನಮ್ಮ ಫ್ರೆಂಡ್ ಮುರಳಿ, ಅಯ್ಯೋ ಅವನ್ ಬಗ್ಗೆ ಕೇಳ್ಬೇಡಿ, ಬೈಕ್ನಲ್ಲಿ ನನ್ನ ಹಿಂದೆ ಕೂತವ್ನು ೪೦ಕಿಮೀ ಅಗುವಗ್ಲೆ ಮಡಿಕೇರಿ ಬಂತ ಮಡಿಕೇರಿ ಬಂತ ಕೇಳೋಕೆ ಶುರುಮಾಡಿದ್ದ, ನಾನದುಕ್ಕೆ ಹೌದು ಕಣೋ ನಾವು ಇಗ ಮಡಿಕೇರಿ ಕಳ್ದು ಮೈಸೂರಿಗೆ ಹೋಗ್ತಾ ಇದ್ದಿವೀ ಅಂದೇ, ಅದುಕ್ಕೆ ಅವ್ನು ಸರಿಯಾಗಿ ಹೇಳು ಹೇಳು ಅಂತ ತಲೆ ತಿಂತಾ ಪ್ರಯಾಣ ಸಾಗ್ತಾ ಇತ್ತು.
ಮಡಿಕೇರಿಗೆ ಇನ್ನೇನೋ ಒಂದು ೨೦ಕಿಮೀ ಇತ್ತು ಅನ್ಸುತ್ತೆ, ಕಾಡುದಾರಿ, ಬೆಟ್ಟ ಗುಡ್ಡಗಳು, ಮೆಲ್ಲನೆ ಚಿಟ ಪಟ ಸುರಿತಾ ಇದ್ದ ಮಳೆ ಎಲ್ಲಿ ನೋಡಿದರು ಬರಿ ಹಸಿರೇ ತುಂಬಿತ್ತು.ಆದ್ರೆ ನಮ್ಮ ಪ್ರಯಾಣದಲ್ಲಿ ಒಂದು ಎಡವಟ್ಟಾಯ್ತು, ಅಯ್ಯೋ ನನ್ನ ಫ್ರೆಂಡ್ ಒಂದು ಡಬ್ಬ ಬೈಕ್ ತಂದಿದ್ದ ಅದು ಕಯ್ಯಿಕೊಡ್ತು, ಅಯ್ಯೋ...ಏನ್ ಮಾಡುದ್ರು ಸ್ಟಾರ್ಟ್ ಆಗ್ತಾನೆ ಇರ್ಲಿಲ್ಲ ಯಾರ್ಗಾದ್ರು ಮೆಕಾನಿಕ್ಕುಗೆ ಕಾಲ್ ಮಾಡೋಣ ಅಂದ್ರೆ ನೆಟ್ವರ್ಕ್ಬೇರೆ ಇಲ್ಲ...ಆಕಾಶ ನೋಡ್ಕೊಂಡು ಬಾಯಿ ಆ ಮಾಡ್ಕೊಂಡು ನಿಂತಿದ್ದೆ ನಾನು, ಯಾಕಂತ ಕೇಳ್ಬೇಡಿ.
ಆದ್ರೆ ನಮ್ಮಲೊಬ್ಬ ಮಹಾನುಬಾವ ಬೈಕ್ ಕೇಬಲ್ ಕಟ್ ಆಗಿದೆ ಅಂದ ಅದುಕ್ಕೆ ಪ್ಲಾಸ್ಟರ್ ಹಾಕ್ಬೇಕು ಅಷ್ಟೇ ಅಂದ,ಅದುಕ್ಕೆ ನಾನು ಲೋ ಮೆಂಟಲ್ ಮಂಜ ಪ್ಲಾಸ್ಟರ್ ಇಡ್ಕೊಂಡು ಸುತ್ತೋಕೆ ನಾವೇನು ಎಲೆಕ್ಟ್ರಿಶನ ಅಂದೇ, ಅದುಕ್ಕವನು ಇಲ್ಲ ಕಣೋ ನನ್ನ ಬ್ಯಾಗಲ್ಲಿರ್ಬೇಕು ನೋಡ್ತೀನಿ ಅಂದು ಹುಡುಕ್ದ ಕೊನೆಗೂ ಸಿಕ್ಕೆ ಬಿಡ್ತು ಹೇಗಾದರು ಮಾಡಿ ಬೈಕ್ ಸ್ಟಾರ್ಟ್ ಮಾಡೇ ಬಿಟ್ಟ.
ನಾವೆಲ್ಲರು ನಿಟ್ಟುಸಿರುಬಿಟ್ಟು ಅಬ್ಬಾ ಅಂದೆವು ಪುನಃ ನಮ್ಮ ಪ್ರಯಾಣ ಸಾಗಿತ್ತು ಕೊನೆಗೂ ಮಡಿಕೇರಿಗೆ ಸುಮಾರು ೧೨:೩೦ಕ್ಕೆ ಮುಟ್ಟಿದ್ವಿ,ಅಲ್ಲಿಂದ ಮುಗಿಲುಪೇಟೆಗೆ ೧೨ಕಿಮೀ ಇತ್ತು.ಮುಂದೆ ಹೋದ್ರೆ ಇನ್ನೇನೂ ಸಿಗೋಲ್ಲ ಅಂತ ತಿಳ್ಕೊಂಡು ಅಲ್ಲೇ ಊಟ ಮುಗ್ಸಿ ಹೊರಟ್ವಿ.
ಪ್ರಾರಂಬದಲ್ಲಿ ರಸ್ತೆ ಚೆನ್ನಾಗೆ ಇತ್ತು, ಆಮೇಲೆ ಶುರ್ವಾಯ್ತು ನೋಡಿ ಜಟಕಾಬಂಡಿ ಎಲ್ಲಿನೋಡಿದರು ಹೊಂಡಗಳು ಕೆಸೃಗಳು ಅಂತು ಇಂತೂ ಹೇಗೋ ಸಾಗ್ತಾ ಇತ್ತು ನಮ್ಮ ಟರ್ರ್ ಟರ್ರ್ ಪಯಣ, ಜಾಸ್ತಿ ದೂರ ಬೈಕ್ ಪ್ರಯಾಣ ಸಾದ್ಯವಾಗಲಿಲ್ಲ ಯಾಕಂದ್ರೆ ಸ್ವಲ್ಪ ದೂರದಲ್ಲಿ ಗುಡ್ಡ ಜರಿದು ಬಿದ್ದಿತ್ತು.ಆಮೇಲೆ ನಾವು ನಟರಾಜ ಸರ್ವಿಸ್ ಉತ್ತಮ ಅಂತ ತಿಳ್ಕೊಂಡು ನಡಿಯೋಕೆ ಶುರು ಮಾಡಿದ್ವಿ....ಅದಾಗಲೇ ನಾವು ಮುಗಿಲುಪೇಟೆಗೆ(ಮಂದಲ್ಪತ್ತಿ) ಬಂದೀದ್ದ್ವಿ, ಎಲ್ಲಿ ಕಣ್ಣು ಹಾಯಿಸಿದ್ದ್ರು ಹಚ್ಚ ಹಸಿರಿನ ಮಣ್ಣಿನ ದಿಬ್ಬದಂತಿರುವ ಬೆಟ್ಟ ಗುಡ್ಡಗಳು ಒಂಥರಾ ದೇವ್ರೇ ನಿರ್ಮಿಸಿರೋ ಗಾರ್ಡನ್ ತಾರಾ ಇತ್ತು ಅದುನ್ನ ನೋಡಿ ನಮ್ಮ ಪ್ರಯಾಣದ ನೋವೆಲ್ಲ ಮರ್ತೊಯಿತು,ಆ ಮೋಡ ಆ ಹನಿ ಹನಿ ಮಳೆ ಆಹಾ,,, ಚುಮು ಚುಮು ಚಳಿ ಅದ್ಬುತವಾಗಿತ್ತು.
ಹೀಗೆ ಚಳಿಯಲಿ ಮಳೆಯಲಿ ಹಸಿರಲಿ ನಡುಗುತ ನಡಿತಾ ಇದ್ದ್ವಿ, ಸ್ವಲ್ಪ ದೂರದಲ್ಲಿ ನಮಗೆ ಏನೋ ನೋಡುದ್ವಿ ಒಂದು ಕ್ಷಣಕ್ಕೆ ಎಲ್ಲ್ರೂಗು ಭಯ ಆಗೋಯ್ತು ನೋಡುದ್ದ್ರೆ ಅದೊಂದು ದೊಡ್ಡ್ ಮರ ಅದು ಹೇಗಿತ್ತೆಂದ್ರೆ ದೊಡ್ದು ದೆವ್ವದ ತರ ಇತ್ತು. ಕೊನೆಗೂ ನಾವು ಪ್ರಕೃತಿಯನ್ನು ಸವಿಯುತ್ತ ನಮ್ ಸ್ಪೋಟ್ಗೆ ಬಂದ್ವಿ ಹೊಸದೇನಿಲ್ಲ ಎಲ್ಲ ಅದೇ ತರಹ ಇಲ್ಲಿ ಗಾಳಿಪಟ,ಮನಸಾರೆ ಹಲವು ಸಿನೆಮಾಗಳ ಶೂಟಿಂಗ್ ಆಗಿತ್ತು....ನಮ್ಮ್ಗೆಲ್ಲ್ರಿಗೂ ಸ್ವರ್ಗ ಇರೋದು ಭೂಮಿಲೆ ಅಂತ ಅನ್ನ್ಸ್ತು.ಅವಾಗ್ಲೇ ಸಂಜೆ ಆಗ್ತಾ ಬಂದಿತ್ತು. ನಾವೆಲ್ಲ ಮನಸಿಲ್ಲದ ಮನ್ನ್ಸಿಂದ ಹಿಂದೆ ಬಂದ್ವಿ.
ನನ್ನ್ ಪ್ರಕಾರ ಒಬ್ಬ ಪ್ರಕೃತಿ ಪ್ರೇಮಿ ಒಂದ್ಸಲನಾದ್ರೂ ಇಲ್ಲಿಗೆ ಹೋಗ್ಲೆಬೇಕು.
Comments
ಉ: ಪಯಣ
In reply to ಉ: ಪಯಣ by vani shetty
ಉ: ಪಯಣ
ಉ: ಪಯಣ
In reply to ಉ: ಪಯಣ by kcworld
ಉ: ಪಯಣ