ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ - ಭಾಗ ೧

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ - ಭಾಗ ೧

 

ಈ ತನಕ ನಾನು ಕೇಳಿ ಇಷ್ಟ ಪಟ್ಟ ಪರಭಾಷೆಗಳ ಅನೇಕ ಗೀತೆಗಳನ್ನು ನನ್ನ ಸಂತೋಷಕ್ಕಾಗಿ ಆದಷ್ಟು ಅನುವಾದ ಮಾಡಿಕೊಂಡು ನಾನೇ ಹಾಡಿಕೊಂಡು ರೆಕಾರ್ಡ್ ಮಾಡಿಕೊಂಡು ಕೇಳುತ್ತ ಖುಷಿ ಪಡುತ್ತಿದ್ದೇನೆ.

 

ಅವನ್ನು ನೀವೂ ನೋಡಿ. ಇಷ್ಟವಾದರೆ ಬೇಕಾದರೆ ಹಾಡಿಕೊಂಡು ಸಂತೋಷ ಪಡಿ. ರೆಕಾರ್ಡ್ ಮಾಡಿಕೊಂಡ ನನ್ನ ಹಾಡುಗಳ ಅಂತರ್ಜಾಲ ಕೊಂಡಿಯನ್ನು ಕೂಡ ಕೊಟ್ಟಿದ್ದೇನೆ . ಅದನ್ನು ಕೇಳಿ . ಬೇಕಾದರೆ ಅದನ್ನು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಗೆ ಉಳಿಸಿಕೊಂಡು ಬೇಕಾದಾಗ ಕೇಳಿ ಸಂತೋಷಪಡಿ.

 

 

1) ಮೂಲ ಹಾಡು - ದಿಲ ಕೆಹತಾ ಹೈ , ಜಾ ಉನಸೇ ಮಿಲ

ಹಿಂದಿ ಚಿತ್ರ - ಅಕೇಲೆ ಹಂ ಅಕೇಲೆ ತುಂ .

 

ನನ್ನ ಅನುವಾದ -

ಹೃದಯ ನನಗೆ ತಿಳಿ ಹೇಳುವದು

ತಿಳಿ ಹೇಳುವೆ ನಾ ಅದಕಿನ್ನೊಮ್ಮೆ

 

ನನ್ನ ಹಾಡಿಗೆ ಕೊಂಡಿ - 

https://drive.google.com/file/d/1G1Ch4h2FA75unxxBvELjkOxcX7u2e-r0/view?usp=drivesdk

 

2) ಮೂಲ ಹಾಡು - ಆಧಾ ಹೈ ಚಂದ್ರಮಾ

ಹಿಂದಿ ಚಿತ್ರ - ನವರಂಗ್

 

ನನ್ನ ಅನುವಾದ -

ಅರ್ಧಾನೇ ಚಂದಿರ

ರಾತ್ರಿ ಅರ್ಧ

ಉಳಿಯದಿರಲಿ

ನನ್ನ ನಿನ್ನ ಮಾತು ಅರ್ಧ,

ನಮ್ಮ ಭೇಟಿ ಅರ್ಧ

 

ನನ್ನ ಹಾಡಿಗೆ ಕೊಂಡಿ -https://drive.google.com/file/d/1G87dFljfNayK6DmJlwu4ei5uawfyCDih/view?usp=drivesdk

 

3) ಮೂಲ ಹಾಡು - ಅಬ ತೋ ಹೈ ತುಮಸೆ

ಹಿಂದಿ ಚಿತ್ರ - ಅಭಿಮಾನ

 

ನನ್ನ ಅನುವಾದ -

 

ಈಗ ನನ್ನೆಲ್ಲ ಖುಷಿಯು ನಿನ್ನಿಂದ

ಜೀವ ಬಿಟ್ಟೇನು ನಾ ಇನ್ನು ನಿನಗಾಗಿ

 

ನಿನ್ನ ಪ್ರೀತಿಯಲ್ಲಿ ನಲ್ಲ, ಮರುಳಾಗಿರೆ ನಾ

ಯಾರು ಏನೇ ಹೇಳಲಿ ನಲ್ಲ, ಈ ಲೋಕದಲ್ಲಿ

ಆಡಿಕೊಂಡರೇನು ಜನರು ಎಷ್ಟು ಬೇಕಷ್ಟು

 

ನಿನ್ನ ಪ್ರೀತಿಯಲ್ಲಿ ನನ್ನ ಹೆಸರು ಕೆಟ್ಟು ಹೋಗಿ

ನಿನ್ನ ಜೊತೆಯೇ ನಲ್ಲ, ನಾನು ಹೆಸರಾಂತಳು

ಎಲ್ಲಿ ತಲುಪಿಸುವುದೋ ಅರಿಯೆ, ನನ್ನ ಈ ಮರುಳು

 

ನನ್ನ ಹಾಡಿಗೆ ಕೊಂಡಿ -https://drive.google.com/file/d/1GD49cI8DVWiX2m45ikJUFp_L_ah07wBO/view?usp=drivesdk

 

 

 

4)ಮೂಲ ಹಾಡು - ಕೌನ್ ಆಯಾ ಮೇರೆ ಮನ ಕೆ ದ್ವಾರೆ

ಹಿಂದಿ ಚಿತ್ರ - ದೇಖ ಕಬೀರಾ ರೋಯೆ

 

ನನ್ನ ಅನುವಾದ -

ಅರಿಯದು ಕಣ್ಣು

ಅರಿವುದು ಹೃದಯ

ಆಕೆಯ ಇರವನ್ನು

 

ನನ್ನ ಹಾಡಿಗೆ ಕೊಂಡಿ -

https://drive.google.com/file/d/1GH0FUS6rYlcghuDIWwuGMik6GUYqpCFv/view?usp=drivesdk

 

 

 

5) ಮೂಲ ಹಾಡು - ದುನಿಯಾ ಬದಲ ಗಯೀ ಹೈ

ಹಿಂದಿ ಚಿತ್ರ - ಹಂ ಹೈ ಲಾಜವಾಬ

 

ನನ್ನ ಅನುವಾದ -

ಬದಲಾದುದೇನು ಇಲ್ಲಿ

ಈ ಲೋಕ ಇಲ್ಲ ನಾವೋ

ಕನಸೆಲ್ಲ ಕರಗಿದಂತಿದೆ

ಮನಸೆಲ್ಲ ಮುದುಡಿದೆ

ನಲ್ಲೆಯೇ

 

ನನ್ನ ಹಾಡಿಗೆ ಕೊಂಡಿ -

https://drive.google.com/file/d/1GLM2oz_8BTq3xkPgw0JfxlQfotvdyTE1/view?usp=drivesdk

 

 

6) ಮೂಲ ಹಾಡು - ಅಬ ತೇರೇ ಬಿನ್ ಜೀ ಲೆಂಗೆ ಹಂ

ಹಿಂದಿ ಚಿತ್ರ - ಆಶಿಕೀ

 

ನನ್ನ ಅನುವಾದ -

ನೀನಿಲ್ಲದೇ ಇನ್ನು ಬದುಕುವೆನು ನಾ

ಕಹಿ ಬಾಳಿನ ವಿಷವ ಕುಡಿಯುವೆನು ನಾ

ಏನಿದು? ನನ್ನೆದೆ ಒಡೆದೇ ಹೋಯಿತು

 

ನನ್ನ ಹಾಡಿಗೆ ಕೊಂಡಿ - https://drive.google.com/file/d/1GTSHe_qBs3jLi-_Kh-hvjivGvMzJNhFO/view?usp=drivesdk

 

7) ಮೂಲ ಹಾಡು - ಆಂಖೋo ಸೆ ಉತ ರೀ ಹೈ ದಿಲ ಮೆ

ಹಿಂದಿ ಚಿತ್ರ - ಫಿರ ವಹೀ ದಿಲ ಲಾಯಾ ಹೂಂ

 

ನನ್ನ ಅನುವಾದ -

ಕಂಗಳ ಮೂಲಕ ಇಳಿದಿದೆ ಎದೆಗೆ

ಸುಂದರ ಚಿತ್ರ ಆತನದು

ದೀಪವ ಅರಸಿ ಬಂದ ಪತಂಗ

ಎಂತಹ ಮರುಳು ಆತನದು

 

 

ನನ್ನ ಹಾಡಿಗೆ ಕೊಂಡಿ - https://drive.google.com/file/d/1GW4cxn0fgGwZrse1na8ZrnupEN8XoAk_/view?usp=drivesdk

 

 

8) ಮೂಲ ಹಾಡು - ಆಂಖೋ ಮೇ ತುಂ

ಹಿಂದಿ ಚಿತ್ರ - ತೇರೆ ಪ್ಯಾರ ಮೇ

 

ನನ್ನ ಅನುವಾದ -

ಕಣ್ಣಲ್ಲೂ ನೀ

ಕನಸಲ್ಲೂ ನೀ

ಎದೆಯಲ್ಲೂ ನೀ

ಉಸಿರಲ್ಲೂ ನೀ

ಹುಚ್ಚಾಗುವೆ ನಾ

ನೀನಿಲ್ಲದೇ

 

ನನ್ನ ಹಾಡಿಗೆ ಕೊಂಡಿ - https://drive.google.com/file/d/1GadIV1kAgRalWrGHvhMjHrYBbpOwWrVa/view?usp=drivesdk

 

9) ಮೂಲ ಹಾಡು - ಬೋಲ ರಾಧಾ ಬೋಲ ಸಂಗಮ್

ಹಿಂದಿ ಚಿತ್ರ - ಸಂಗಮ್

 

ನನ್ನ ಅನುವಾದ -

ನನ್ನ ಮನದ ಗಂಗೆ

ನಿನ್ನ ಮನದ ಯಮುನೆ

ಹೇಳು ರಾಧೆ ಇವುಗಳ ಸಂಗಮ

ಆಗುವುದೋ ಇಲ್ಲೋ

 

ನನ್ನ ಹಾಡಿಗೆ ಕೊಂಡಿ - https://drive.google.com/file/d/1GbRy49x-pvV2adsLdD0hlMSmF6wvlG_P/view?usp=drivesdk

 

10) ಮೂಲ ಹಾಡು - ಚಾಂದನೀ ರಾತಮೇ

ಹಿಂದಿ ಚಿತ್ರ - ದಿಲ್ ಏ ನಾದಾನ್

 

ನನ್ನ ಅನುವಾದ -

ಹುಣ್ಣಿಮೆ ರಾತ್ರಿಯಲಿ

ನಿನ್ನ ನೋಡಿರುವೆ

ತನ್ನೊಳೇ ನಾಚುತಿಹ

ತನ್ನೊಳೇ ನಗುತಲಿಹ

ನಿನ್ನನು ನೋಡಿರುವೆ

ಹುಣ್ಣಿಮ ರಾತ್ರಿಯಲಿ

 

ನನ್ನ ಹಾಡಿಗೆ ಕೊಂಡಿ - https://drive.google.com/file/d/1GeTJfxm_3FzlBSrH12wY7STBvmMRM-49/view?usp=drivesdk

 

ಇನ್ನಷ್ಟು ಹಾಡುಗಳನ್ನು ಇನ್ನೊಂದು ದಿನ ನೋಡೋಣ

 

Rating
Average: 4 (1 vote)