ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ - ಭಾಗ ೨
ಈ ತನಕ ನಾನು ಕೇಳಿ ಇಷ್ಟ ಪಟ್ಟ ಪರಭಾಷೆಗಳ ಅನೇಕ ಗೀತೆಗಳನ್ನು ನನ್ನ ಸಂತೋಷಕ್ಕಾಗಿ ಆದಷ್ಟು ಅನುವಾದ ಮಾಡಿಕೊಂಡು ನಾನೇ ಹಾಡಿಕೊಂಡು ರೆಕಾರ್ಡ್ ಮಾಡಿಕೊಂಡು ಕೇಳುತ್ತ ಖುಷಿ ಪಡುತ್ತಿದ್ದೇನೆ.
ಅವನ್ನು ನೀವೂ ನೋಡಿ. ಇಷ್ಟವಾದರೆ ಬೇಕಾದರೆ ಹಾಡಿಕೊಂಡು ಸಂತೋಷ ಪಡಿ. ರೆಕಾರ್ಡ್ ಮಾಡಿಕೊಂಡ ನನ್ನ ಹಾಡುಗಳ ಅಂತರ್ಜಾಲ ಕೊಂಡಿಯನ್ನು ಕೂಡ ಕೊಟ್ಟಿದ್ದೇನೆ . ಅದನ್ನು ಕೇಳಿ . ಬೇಕಾದರೆ ಅದನ್ನು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಗೆ ಉಳಿಸಿಕೊಂಡು ಬೇಕಾದಾಗ ಕೇಳಿ ಸಂತೋಷಪಡಿ.
ಅವುಗಳನ್ನು ಸಾಧ್ಯವಾದರೆ ಸುಧಾರಿಸಿ, ಪೂರ್ತಿಗೊಳಿಸಿ ಸ್ನೇಹಿತರೊಡನೆ ಮತ್ತು ಸಂಪದಿಗರೊಡನೆ ಹಂಚಿಕೊಳ್ಳಿ ಮತ್ತು ಸಮಾಜದಲ್ಲಿನ ಸಂತೋಷದ ಮಟ್ಟವನ್ನು ಹೆಚ್ಚಿಸಿ!
11)
ಮೂಲ ಹಾಡು - ಛೂ ಕರ ಮೇರೆ ಮನ ಕೋ
ಹಿಂದಿ ಚಿತ್ರ - ಯಾರಾನಾ
ನನ್ನ ಅನುವಾದ -
ಸುಳಿದು ಸುತ್ತಮುತ್ತ
ತಂದೆ ನೀನು ಎಂಥ ಹೊತ್ತು
ಜಗವೇ ಹೊಸದಾಗಿ
ಬಂದಿತು ಕನಸಿಗೆ ಬಣ್ಣ
ನೀನಿರೆ ಜತೆಯಲ್ಲಿ
ನನ ಬಾಳೇ ಮಧುಮಾಸ
ಬಣ್ಣದ ಮಳೆ ಬಿಲ್ಲು
ಮೂಡಿದ ಆಕಾಶ
ಒಲವೇ ರಸ ಕಾವ್ಯ
ದಿನ ದಿನ ಅದು ಅತಿ ನವ್ಯ
ಹಾಸುವೆ ನಡೆವಲ್ಲಿ
ಒಲವಿನ ಹೂ ರಾಶಿ
ಬರೆಯುವೆ ನಿನ ಕುರಿತೇ
ಸಾವಿರ ನಾ ಗೀತೆ
ನನ್ನ ಕಾವ್ಯದಲೇ
ಕಾಣಲಿ ಜಗ ತಾ ನಿನ್ನ
ನನ್ನ ಹಾಡಿಗೆ ಕೊಂಡಿ - https://drive.google.com/file/d/1GjIkJDjez7C1NIgPfyqFNmr45a15JDMT/view?usp=drivesdk
12)
ಮೂಲ ಹಾಡು - ದಿಲ ಕೆ ಟುಕಡೆ ಟುಕಡೆ ಕರಕೆ
ಹಿಂದಿ ಚಿತ್ರ - ದಾದಾ
ನನ್ನ ಅನುವಾದ -
ಹೃದಯ ನೂರು ಚೂರು ಮಾಡಿ
ಹೊರಟು ನೀನು ನಿಂತೆಯಾ
ಹೋಗುವಾಗ ಹೇಳಿ ಹೋಗು
ನಾನು ಬದುಕಲಿ ಇನ್ನಾರಿಗಾಗಿ
ನನ್ನ ಹಾಡಿಗೆ ಕೊಂಡಿ - https://drive.google.com/file/d/1Gjvstw3rY4z6Wp7622zfXAbFbJPOC5NB/view?usp=drivesdk
13)
ಮೂಲ ಹಾಡು - ದಿಲ ಮೆ ಕಿಸೀ ಕಾ ಪ್ಯಾರ ಕಾ ದಿಯಾ
ಹಿಂದಿ ಚಿತ್ರ - ಇಕ ಮಹಲ ಹೋ ಸಪನೋಂ ಕಾ
ನನ್ನ ಅನುವಾದ -
ಎದೆಯಲ್ಲಿ ಒಲವಿನಾ ದೀಪ
ಈಗ ಬೆಳಗಿದೆ
ಬಿರುಗಾಳಿ ಏನೆ ಬಂದರೂ
ತಾ ಅಳುಕದು
ನನ್ನ ಹಾಡಿಗೆ ಕೊಂಡಿ - https://drive.google.com/file/d/1GwzzNictt-n-3XL6Ll4c7Z8yQzO5ncXm/view?usp=drivesdk
14)
ಮೂಲ ಹಾಡು - ದಿಲ ನೆ ಫಿರ ಯಾದ ಕಿಯಾ
ಹಿಂದಿ ಚಿತ್ರ - ದಿಲ ನೆ ಫಿರ ಯಾದ ಕಿಯಾ
ನನ್ನ ಅನುವಾದ -
ನಿನ ನೆನಪಾಗುತಿರೆ
ಬೀಸಿತು ಹಿಮಗಾಳಿ
ಶಿಥಿಲ ಸಾಮ್ರಾಜ್ಯದ ಮೇಲೆ
ನೋವಿನ ಮರುದಾಳಿ
ದೀಪದ ಹುಳುಗಳು ನಾವು
ದೀಪಕೆ ಇಂಧನವು
ಪ್ರೇಮದ ಬೆಂಕಿಯಲಿ
ತೆಪ್ಪಗೇ ಬೇಯುವೆವು
ಇಲ್ಲಿ ನಿಟ್ಟುಸಿರು ಕೂಡಾ
ಪ್ರೀತಿಗೆ ಅವಮಾನ
ನನ್ನ ಹಾಡಿಗೆ ಕೊಂಡಿ - https://drive.google.com/file/d/1H0i7KQa4aaHdBFKlsBUK2G28ph8JW1g8/view?usp=drivesdk
ಮತ್ತು
https://drive.google.com/file/d/1Q8M92PQu-uq75BkZcycH6G4xECSMCxU3/view?usp=drivesdk
15)
ಮೂಲ ಹಾಡು - ತುಮ್ಹಾರೆ ಬಿನ ಗುಜಾರೆ ಹೈ
ಹಿಂದಿ ಚಿತ್ರ - ಆತ್ಮಾರಾಮ್
ನನ್ನ ಅನುವಾದ -
ಇಲ್ಲದೆ ನೀ ಕಳೆದಿರುವೆ
ಬಹಳ ದಿನಗಳನು
ಇನ್ನು ಆಗೋಲ್ಲ
ನನ್ನ ಹಾಡಿಗೆ ಕೊಂಡಿ - https://drive.google.com/file/d/1H3c3Q-rTHSUM7sAUGApQyUvMdHjHxTQ3/view?usp=drivesdk
16)
ಮೂಲ ಹಾಡು - ತುಂ ನ ಜಾನೆ ಕಿಸ್ ಜಹಾಂ ಮೇ ಖೋ ಗಯೆ
ಹಿಂದಿ ಚಿತ್ರ - ಸಜಾ
ನನ್ನ ಅನುವಾದ -
ಅರಿಯೆ ಎಲ್ಲಿ ನಿನ್ನ ಕಳೆದುಕೊಂಡೆನು
ತುಂಬಿದ ಲೋಕದಲ್ಲಿ ಒಬ್ಬಂಟಿಯಾದೆನು
ಸಾವು ಕೂಡ ಬಾರದು
ಆಸೆ ಕೂಡ ತೊಲಗದು
ಹೃದಯಕೆ ಏನಾಗಿದೆ
ಏನೂ ಮನಕೆ ತಿಳಿಸದು
ಲೂಟಿ ಮಾಡಿ ನನ್ನ ಬದುಕ
ಹೋದೆ ನೀನು ಎಲ್ಲಿಗೆ, ಎಲ್ಲಿಗೆ, ಎಲ್ಲಿಗೆ
ಒಂದು ಜೀವಕೆ ಇಷ್ಟೊಂದು ದುಃಖ
ಹೀಗೆ ತಡೆವುದು ಹೇಳಿರಿ
ಬಾರೋ ನಿನ್ನ ನೋಡಲಿ
ಮುಚ್ಚುತಿರುವ ಕಂಗಳು
ಲೂಟಿ ಮಾಡಿ ನನ್ನ ಬದುಕ
ಹೋದೆ ನೀನು ಎಲ್ಲಿಗೆ, ಎಲ್ಲಿಗೆ, ಎಲ್ಲಿಗೆ
ನನ್ನ ಹಾಡಿಗೆ ಕೊಂಡಿ - https://drive.google.com/file/d/1H2pUkE5_LjOuxbKyssVjNhq16wq_2eOo/view?usp=drivesdk
17)
ಮೂಲ ಹಾಡು - ಜಬ ದೀಪ ಜಲೇ ಆನಾ
ಹಿಂದಿ ಚಿತ್ರ - ಚಿತ್ ಚೋರ್
ನನ್ನ ಅನುವಾದ -
ಮೊಗವೆಂದು ಅರಳಿರಲಿ
ನಗುವಿಲ್ಲಿ ಮೆರೆದಿರಲಿ
ಶೋಕದ ಛಾಯೆ
ಸೋಕದೆ ಇರಲಿ
ಈ ಹೂವು ಬಾಡದೆಯೇ
ನನ್ನ ಹಾಡಿಗೆ ಕೊಂಡಿ - https://drive.google.com/file/d/1H7jntU_lwgBgrjwlq5j0g5xA4airGqkE/view?usp=drivesdk
18)
ಮೂಲ ಹಾಡು - ಹೋಟೋ ಪೆ ಛೂಲೋ ತುಂ
ಹಿಂದಿ ಚಿತ್ರ - ಪ್ರೇಮ್ ಗೀತ್
ನನ್ನ ಅನುವಾದ -
ಗುನುಗುನಿಸಿ ತುಟಿಯಲ್ಲಿ
ನನ್ನ ಹಾಡ ಅಮರಗೊಳಿಸು
ನನ್ನ ಪ್ರೀತಿ ಸ್ವೀಕರಿಸಿ
ಈ ಪ್ರೇಮ ಅಮರಗೊಳಿಸು
ನನ್ನ ಹಾಡಿಗೆ ಕೊಂಡಿ - https://drive.google.com/file/d/1H7nvsUnoGki4PiagJGK-szwE7A3gifAO/view?usp=drivesdk
19)
ಮೂಲ ಹಾಡು - ಜಬ ಜಬ ಬಹಾರ ಆಯಿ
ಹಿಂದಿ ಚಿತ್ರ - ತಕದೀರ್
ನನ್ನ ಅನುವಾದ -
ತಂಗಾಳಿ ಬೀಸಿದಾಗ
ಹೂಗಂಧ ಹೊಮ್ಮಿದಾಗ
ಗೆಳತೀ ನಿನ್ನ ನೆನಪು
ನನ್ನ ಹಾಡಿಗೆ ಕೊಂಡಿ - https://drive.google.com/file/d/1H847V8jxL5R8uA04QZmfqnuVV0XU1omP/view?usp=drivesdk
20)
ಮೂಲ ಹಾಡು - ಜೀತಾ ಹೊಂ ಜಿಸ ಕೇ ಲಿಯೆ
ಹಿಂದಿ ಚಿತ್ರ - ದಿಲವಾಲೆ
ನನ್ನ ಅನುವಾದ -
ಬದುಕುವೆನು ನಾ ಯಾರಿಗಾಗಿ
ಸಾಯುವೆನು ನಾ ಯಾರಿಗಾಗಿ
ಆ ಹುಡುಗಿ ನೀನೇನೆ
ನೀನೆ ನನ್ನ ಪ್ರಾಣ
ನನ್ನ ಹಾಡಿಗೆ ಕೊಂಡಿ -
https://drive.google.com/file/d/1HI0I__OUxEJ5No5JuMnvDh9NFsxHtR7s/view?usp=drivesdk