ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 12

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 12

ಈ ತನಕ ನಾನು ಕೇಳಿ ಇಷ್ಟ ಪಟ್ಟ ಪರಭಾಷೆಗಳ ಅನೇಕ ಗೀತೆಗಳನ್ನು ನನ್ನ ಸಂತೋಷಕ್ಕಾಗಿ ಆದಷ್ಟು ಅನುವಾದ / ಭಾವಾನುವಾದ ಮಾಡಿಕೊಂಡು ನಾನೇ starmaker ಎಂಬ App ನಲ್ಲಿ ಹಿನ್ನೆಲೆ ಸಂಗೀತದೊಡನೆ ಹಾಡಿಕೊಂಡು ರೆಕಾರ್ಡ್ ಮಾಡಿಕೊಂಡು ಕೇಳುತ್ತ ಖುಷಿ ಪಡುತ್ತಿದ್ದೇನೆ.

ನೀವೂ ಬೇಕಾದರೆ ಇದೇ ರೀತಿ ಮಾಡಿ, ಅವನ್ನು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಗೆ ಉಳಿಸಿಕೊಂಡು ಬೇಕಾದಾಗ ಕೇಳಿ ಸಂತೋಷಪಡಿ.

 

93) ಮೂಲ ಹಾಡು ಆಶಿಕೀ ಎಂಬ ಹಿಂದಿ ಚಿತ್ರದ " ನಜರ್ ಕೆ ಸಾಮನೆ ಜಿಗರ್ ಕೆ ಪಾಸ್" ಎಂಬುದು.

 

ನನ್ನ ಅನುವಾದ -

ಕಣ್ಣುಗಳ ಮುಂದೆಯೂ ಹೃದಯ ಸಮೀಪವೂ

ಒಬ್ಬಳು ಇದ್ದಾಳೆ ಅದು ನೀನೇನೇ

 

94) ಮೂಲ ಹಾಡು - ಹಿಂದಿಯ ಆಂಧೀ ಚಿತ್ರದ ' ತೇರೆ ಬಿನಾ ಜಿಂದಗೀ ಸೇ ಕೋಯಿ ' .

ನನ್ನ ಅನುವಾದ -

ನಿನ್ನ ಹೊರತು ಲೋಕದೊಡನೆ ನನ್ನ ತಕರಾರಿಲ್ಲ, ಏನೂ ತಕರಾರಿಲ್ಲ.

ನಿನ್ನ ಹೊರತು ಲೋಕ ಕೂಡ ನನಗೆ 

ಬೇಕಾಗೇ ಇಲ್ಲ, ಬೇಕಾಗೇ ಇಲ್ಲ

 

95) ಮೂಲ ಹಾಡು - 'ಆಪ್ ಕೀ ಕಸಮ್ ಚಿತ್ರದ 'ಕರವಟೇ ಬದಲತೇ ರಹೇ '

ನನ್ನ ಅನುವಾದ :-

ಹೊರಳುತಲೇ ಇದ್ದೆ ನಾನು ರಾತ್ರಿ ಎಲ್ಲವೂ ನಿನ್ನ ಆಣೆಗೂ, ನಿನ್ನ ಆಣೆಗೂ

ಚಿಂತೆ ಬೇಡ ಮುಗಿಯ ಬಂತು ನಮ್ಮ ಅಗಲಿಕೆ, ನಿನ್ನ ಆಣೆಗೂ

 

96) ಮೂಲ ಹಾಡು - ಆಜ ಕಲ ಪಾಂವ ಜಮೀನ ಪರ ನಹೀ ಪಡತೇ ಮೇರೆ

ನನ್ನ ಅನುವಾದ - 

ಈಚಿನಾ ದಿನಗಳಲಿ ನನ ಕಾಲು ನೆಲದ ಮೇಲೇ ಇಲ್ಲ,

ಹೇಳಿ, ನೀವು ನೋಡಿದಿರಾ ನಾ ಹಾರುವುದ ?

 

97) ಮೂಲ ಹಾಡು - ಆಂಖೋ ಮೇ ಹಂ ನೆ ಆಪಕೆ ಸಪನೆ ಸಜಾಯೇ ಹೈ.

ನನ್ನ ಅನುವಾದ - 

ಕಣ್ಣಲ್ಲಿ ನಿನ್ನ ಕನಸಿದೆ, ನಿನ್ನಲ್ಲಿ ಮನಸಿದೆ

ಹೇಳೀಗ ಅದು ಹೇಗೆ ನೀ ಈ ಜಾದೂ ಮಾಡಿದೆ.

 

98) ಹಿಂದಿ ಹಾಡು - ಹಂ ತೋ ಚಲೇ ಪರದೇಶ ಮೇ 

ನನ್ನ ಅನುವಾದ -

ಹೋಗಿ ನಾ ಪರದೇಶಕೆ ಪರದೇಶಿಯಾದೆನು

ದೇಶವ ತೊರೆದು ಪರದೇಶಿಯಾದೆನು

 

99) ಮೂಲ ಹಿಂದೀ ಹಾಡು - ಏ ದಿಲ್ ತುಮ್ ಬಿನ್ ಕಹೀ ಲಗತಾ ನಹೀ

ನನ್ನ ಅನುವಾದ - 

ನೀ ಇಲ್ಲದೇ ಈ ಮನವು ಎಲ್ಲಿಯೂ ನಿಲ್ಲದು, ನಾ ಏನು ಮಾಡಲಿ

ಕನಸಲ್ಲಿಯೂ ಬೇರಾರು ಬಾರರು, ನಾ ಏನು ಮಾಡಲಿ

ಹೇಳು ನೀನೇನೇ ಇದೀಗ ನನ ನಲ್ಲೆ ,ನಾ ಏನು ಮಾಡಲಿ?

 

100 ) ಮೂಲ ಹಾಡು 'ಕಟೀ ಪತಂಗ್ ' ಎಂಬ ಹಿಂದಿ ಚಿತ್ರದ ಯ ಕೋಯೀ ಉಮಂಗ್ ಹೈ'.

ನನ್ನ ಅನುವಾದ -

ಏನೊಂದೂ ಉತ್ಸಾಹ ಇಲ್ಲ

ಏನೊಂದೂ ನಿರೀಕ್ಷೆ ಇಲ್ಲ

ನನ್ನ ಬಾಳಿದು ಹರಿದ ಗಾಳಿಪಟ

 

101) ಮೂಲ ಹಾಡು - ಹಿಂದಿಯ ಕುರ್ಬಾನಿ ಚಿತ್ರದ - ಮೈ ತುಮ್ಹೆ ಚಾಹತಾ ಹೂಂ ಐಸೇ

ನನ್ನ ಅನುವಾದ : -

ನಾನು ನಿನ್ನನ್ನು ಬಯಸುವುದು ಹೀಗೆ

ಸಾಯುವಾ ಮನುಜನು ಬದುಕನ್ನು ಬಯಸುವ ಹಾಗೆ !

ನಾ ನಿನ್ನನ್ನು ಬಯಸುವುದು ಹೀಗೆ.

ಒಂದೊಮ್ಮೆ ನೀ ನನ ಮೇಲೆ ಸಿಟ್ಟಾದರೆ

ನನಗನಿಸುವುದು ನೀ ನನ್ನಿಂದ ದೂರಾದ ಹಾಗೆ

 

102) ಮೂಲ ಹಾಡು - ಕಯೀ ಸದಿಯೊಂಸೆ , ಕಯಿ ಜನಮೊಂ ಸೆ

ನನ್ನ ಅನುವಾದ - 

ಎಷ್ಟೋ ಯುಗಗಳಲಿ, ಎಷ್ಟೋ ಜನ್ಮಗಳಲಿ

ನಿನ್ನ ಪ್ರೀತಿ ಬಯಸಿದೆ ನಾನು, ಬಾರೇ

ಇನ್ನು ಉಳಿಯದಿರಲ್ಲಿ ನಮ್ಮ ಮಿಲನ ಅಪೂರ್ಣ

 

Rating
Average: 4.8 (4 votes)