ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 18
ಈ ಅರ್ಧಂಬರ್ಧ/ಪೂರ್ತಿ ಅನುವಾದ/ಭಾವಾನುವಾದಗಳನ್ನು ಮೂಲ ಹಾಡಿನ ಧಾಟಿಯಲ್ಲಿಯೇ ಮಾಡಿರುವ ಕಾರಣ ನೀವು ಮೂಲ ಧಾಟಿಯಲ್ಲಿಯೇ ಇವನ್ನು ಹಾಡಿಕೊಳ್ಳಬಹುದು.
146) ಮೂಲ ಹಾಡು - ದಿಲ ಕೀ ಬಾತ್ ಕಹೀಂ ಲಬ ಪೆ ನ ಆ ಜಾಯ
ನನ್ನ ಅನುವಾದ:
ಮನಸ್ಸಿನ ಮಾತು ಎಂದೂ ಬಾಯಿಗೆ ಬರದಿರಲಿ
ನಗುತಾ ನಗುತಾ ಕಣ್ಣಿಗೆ ನೀರು ಬರದಿರಲಿ
ನೆನಪಿರಲಿ, ಇದು ನೆನಪಿರಲಿ, ಏನು?
ಮುಖದ ಮೇಲೆ ಹಾಕಿ ಮುಖವಾಡ
ಮರೆಮಾಡು ನಿನ್ನ ಅಂತರ್ಯ
ಮುರುಳು ಜನಕ್ಕೆ ಹೇಗೆ
ತಿಳಿಹೇಳುವುದು?
ಮನ ಬಿಚ್ಚಿ ಮಾತಾಡುವಾಗ
ಈ ಮಾತ ನೆನಪಿಡಲೇಬೇಕು
ಸುಖ-ದುಃಖ ನಮ್ಮವು
ಜನ ಪರಕೀಯರು!
147) ಮೂಲ ಹಾಡು - ಪ್ರೀತ ಜಹಾಂ ಕಿ ರೀತ ಜಹಾಂ
ನನ್ನ ಅನುವಾದ:
ಎಲ್ಲಿ ಪ್ರೀತಿ ಜೀವನ ರೀತಿಯೋ
ನಾ ಅಲ್ಲಿಯ ಹಾಡನು ಹಾಡುವೆ
ಆ ದೇಶದ ಪ್ರಜೆಯು ನಾನು
ಭಾರತದ ಕುರಿತೇ ಹಾಡುವೆನು
148) ಮೂಲ ಹಾಡು - ಹಮ್ ಸೇ ಅಚ್ಛೀ ತೇರಿ ಪಾಯಲ್ ಗೋರೀ
ನನ್ನ ಅನುವಾದ:
ನನಗಿಂತ ನಿನ್ನ ಗೆಜ್ಜೆಗಳೇ ಧನ್ಯ
ಬಾರಿ ಬಾರಿಯೂ ನಿನ್ನ ಮುತ್ತಿಡುವವು
149) ಮೂಲ ಹಾಡು - ಸಜನವಾ ಬೈರಿ ಹೋಗಯೀ ಹಮಾರೀ
ನನ್ನ ಅನುವಾದ: ನನ್ನವನೇ ನನಗೆ ವೈರಿ ಆದನು
150) ಮೂಲ ಹಾಡು - ಅಳಗೇ ಅಳಗೇ (ಮಲೆಯಾಳಂ ಹಾಡು)
ನನ್ನ ಅನುವಾದ:
ಬೆರಗೇ ಬೆರಗೇ ಎಲ್ಲಾನು ಬೆರಗೇ
ಪ್ರೀತಿಯ ಕಂಗಳಿಗೆ ಎಲ್ಲಾನು ಬೆರಗೇ
ಮಳೆ ಮಾತ್ರ ಬೆರಗೇ
ಸುಡುವ ಬಿಸಿಲು ಕೂಡ ಬೆರಗೇ
ಅರಳೋ ಹೂವು ಬೆರಗೇ
ಬೀಳೋ ಎಲೆಯೂ ಕೂಡ ಬೆರಗೇ
ಮುಗುಳುನಗೆಯ ನೋಟವು ಬೆರಗೇ!
ಮಾತನು ಮರೆತ ಮೌನವು ಬೆರಗೇ!
ಪ್ರೇಮದೀ ನುಡಿದ ಸುಳ್ಳೂ ಬೆರಗೇ!
ಅಂತಹ ಸುಳ್ಳು ನಿಜಕೂ ಬೆರಗೇ!
ನದಿ ತಾನು ಹರಿಯೋಕೆ ಸಂಗಾತಿ ಬೇಕೆ?
ಕಡಲಿನ ಅಲೆಗಳಿಗೆ ವ್ಯಾಕರಣ ಬೇಕೆ?
ಪ್ರಕೃತಿ ಜೊತೆ ಕಲೆತರೆ ಜಗವಾದೀತು ಬೆರಗೇ
ಚಿಂತೆಯ ಮರೆತು ಬಿಟ್ಟರೆ ಬದುಕೇ ಆದೀತು ಬೆರಗೇ !
151) ಮೂಲ ಹಾಡು - ತೂ ಜಹಾಂ ಜಹಾಂ ಜಲೇಗಾ
ನನ್ನ ಅನುವಾದ:
ನೀನೆಲ್ಲಿ ನಡುವೆ ನಲ್ಲೆ
ನೆರಳಾಗಿ ನಾನು ಅಲ್ಲೇ
ನಿನ್ನ ನೆರಳು,
ನಿನ್ನ ನೆರಳು!
152) ಮೂಲ ಹಾಡು - ವೋ ಜಬ ಯಾದ ಆಯೆ
ನನ್ನ ಅನುವಾದ:
ಆಕೆ ನೆನಪಾದ ವೇಳೆ
ಬಹಳಾನೇ ನೆನಪು
ನೋವಿನ ಈ ಬಾಳಿನ
ಕಡುಗತ್ತಲಲ್ಲಿ
ಪ್ರೀತಿಯ ದೀಪವನ್ನು
ಹೊತ್ತಿಸಿದೆ ನಂದಿಸಿದೆ
153) ಮೂಲ ಹಾಡು - ಸೌ ಬಾರ ಜನಮ್ ಲೇಂಗೇ
ನನ್ನ ಅನುವಾದ:
ನಾ ಹುಟ್ಟುವೆ ನೂರು ಸಲ
ನಾ ಸಾಯುವೆ ನೂರು ಸಲ
ಆದರೆ ಪ್ರತಿ ಸಲವೂ
ನಾ ನಿನ್ನನೇ ಬಯಸುವೆನು
154) ಮೂಲ ಹಾಡು - ಲಗ ಜಾ ಗಲೇ
ನನ್ನ ಅನುವಾದ:
ಬಿಗಿದಪ್ಪಿಕೋ
ಇಂಥ ರಾತ್ರಿ ಮತ್ತೆ ಎಂದಿಗೋ
ಬಹುಶಃ ಈ ಜನ್ಮದಲ್ಲಿ
ಮತ್ತೆ ನಮ್ಮ ಭೇಟಿ ಆಗದೋ
ಈ ಗಳಿಗೆ ನಮಗೆ ದಕ್ಕಿದೆ ಪುಣ್ಯ ಫಲದಿಂದ
ಮನಸಾರೆ ನೋಡು ನನ್ನ ನೀ ಬಲು ಒಲವಿಂದಲೀ
ಮತ್ತೆ ನಮ್ಮ ಭಾಗ್ಯದಿ ಇಂಥ ಗಳಿಗೆ ಇದೆಯೋ ಇಲ್ಲವೋ
ಬಹುಶಃ ಈ ಜನ್ಮದಲ್ಲಿ
ಮತ್ತೆ ನಮ್ಮ ಭೇಟಿ ಆಗದೋ
ಬಳಿ ಸಾರು ನನ್ನ ನೀನು ಬರಲಾರೆ ಮರಳಿ ನಾ
ತೋಳಿಂದ ನಿನ್ನ ಬಳಸಿ ಮನಸಾರೆ ಅಳುವೆನಾ
ಕಣ್ಣೀರ ಧಾರೆ ಹೀಗೆ ಮತ್ತೆ ಹರಿದೀತೋ ಇಲ್ಲವೋ
ಬಹುಶಃ ಈ ಜನ್ಮದಲ್ಲಿ
ಮತ್ತೆ ನಮ್ಮ ಭೇಟಿ ಆಗದೋ