ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 22
185) ಮೂಲ ಹಾಡು - ಜಿಂದಗೀ ಇಕ ಸಫರ ಹೈ ಸುಹಾನಾ
ನನ್ನ ಅನುವಾದ:
ಬಾಳಿದು ಸುಂದರ ಪಯಣ
ನಾಳೆ ಏನೆಂದು ಯಾರಿಗ್ಗೊತ್ತು?
186) ಮೂಲ ಹಾಡು - ಮೈ ಪಲ ದೋ ಪಲ ಕಾ ಶಾಯರ ಹೂಂ
ನನ್ನ ಅನುವಾದ:
ಒಂದೆರಡೇ ಗಳಿಗೆಯ ಕವಿ ನಾನು
ಒಂದೆರಡೇ ಗಳಿಗೆ ನನ್ನ ಕವಿತೆ
ಒಂದೆರಡೇ ಗಳಿಗೆ ನನ್ನ ಯೌವನ
187) ಮೂಲ ಹಾಡು - ಅಕೇಲೆ ಅಕೇಲೆ ಕಹಾಂ ಜಾ ರಹೇ ಹೋ
ನನ್ನ ಅನುವಾದ:
ಒಬ್ಬಾಕೆ ಒಬ್ಬಾಕೆ ಎಲ್ಲಿಗ್ಹೋಗುತಿರುವೆ
ನನ್ನ ಕರೆದುಕೊಂಡು ಹೋಗು ಎಲ್ಲಿ ನೀನು ಹೋಗುವೆ
188) ಮೂಲ ಹಾಡು - ಜಗ ಘೂಮೆಯಾ ತೇರಾ ಜೈಸಾ ನ ಕೋಯಿ
ನನ್ನ ಅನುವಾದ:
ಜಗ ಸುತ್ತಿದೆ, ನಿನ್ನ ಹಾಗೆ ಯಾರಿಲ್ಲ.
189) ಮೂಲ ಹಾಡು - ಇಕ ಮೋಡ್ ಪೆ ಆತೆ ಹೈಂ
ನನ್ನ ಅನುವಾದ:
ಒಂದು ತಿರುವಲಿ ಇರುತಾವೆ
ಕೆಲ ಒಳ್ಳೆಯ ದಾರಿಗಳು
ಕೆಲ ಸಾಧಾರಣ ದಾರಿಗಳು
ಯಾವುದು ನನ ದಾರಿ ?
ನಿನ ತಲುಪುವುದೇ ನಂದು
190) ಮೂಲ ಹಾಡು - ಮುಜೆ ನೀಂದ್ ನ ಆಯೆ
ನನ್ನ ಅನುವಾದ:
ನಂಗೆ ಬರಲಿಲ್ಲ ನಿದ್ದೆ
ನಂಗೆ ಸಿಗಲಿಲ್ಲ ಸುಖ
191) ಮೂಲ ಹಾಡು - by the rivers of Babilone By Boney M
ನನ್ನ ಅನುವಾದ:
ಬ್ಯಾಬಿಲೋನ್ ದಂಡೇಲಿ
ನಾವು ಕುಳಿತ ವೇಳೆಲಿ
ನಮ್ಮೂರ ನೆನಪು
ಅಳುವಂತೆ ಮಾಡಿತು
ಆ ದುಷ್ಟ ಮಂದಿ
ನಮ್ಮನ್ನು ಬಂಧಿಸಿ
ಹಾಡೆಂದರು ಒಂದನು
ನಮ್ಮ ದೇವರ ಹಾಡನು
ಹಾಡುವುದು ಹೇಗೆ
ನಮ್ಮ ದೇವರ ಹಾಡನು
ಪರಕೀಯ ನಾಡಲಿ
192) ಮೂಲ ಹಾಡು - ಅಜಹುನ ಆಯೆ ಬಾಲಮಾ
ನನ್ನ ಅನುವಾದ:
ಬರಲಿಲ್ಲ ಇಂದೂ ರಾಯಾ
ಶ್ರಾವಣ ಕಳೆಯುತಿದೆ
ಅಯ್ಯೋ ಶ್ರಾವಣ ಕಳೆಯುತಿದೆ
193) ಮೂಲ ಹಾಡು - ಮೈನು ಇಶ್ಕ ದಾ ಲಗ್ಯಾ ರೋಗ
ನನ್ನ ಅನುವಾದ:
ನಂಗೆ ಬಂದಿದೆ ಪ್ರೀತಿಯ ರೋಗಾ
ನಾ ಉಳಿಯುವ ಆಸೆ ಇಲ್ಲವೇ
ನಂಗೆ ಹೇಳುವರು ಜನರೆಲ್ಲಾ
ನಾ ಬದುಕುವ ಆಸೆ ಇಲ್ಲವೇ
194) ಮೂಲ ಹಾಡು - ಆಜಕಲ ಯಾದ ಕುಛ ರಹತಾ ನಹೀ
ನನ್ನ ಅನುವಾದ:
ನಂಗೀಗ ಏನೊಂದು ನೆನಪಲ್ಲಿ ಉಳಿಯಲ್ಲವೇ
ನಿನ್ನ ನೆನಪೊಮ್ಮೆ ನನಗೆ ಬಂದಾದ ಮೇಲೆ
ನೆನಪಾಗೋ ಮೊದಲೇನೇ ನೀ ಬಂದು ಬಿಟ್ಟು
ಮತ್ತೆ ಹೋಗು ನೀ , ನನ ಜೀವ ಹೋದಾದ ಮೇಲೆ