ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 24
ಈ ಅರ್ಧಂಬರ್ಧ/ಪೂರ್ತಿ ಅನುವಾದ/ಭಾವಾನುವಾದಗಳನ್ನು ಮೂಲ ಹಾಡಿನ ಧಾಟಿಯಲ್ಲಿಯೇ ಮಾಡಿರುವ ಕಾರಣ ನೀವು ಮೂಲ ಧಾಟಿಯಲ್ಲಿಯೇ ಇವನ್ನು ಹಾಡಿಕೊಳ್ಳಬಹುದು.
205) ಮೂಲ ಹಾಡು - ತೇರೆ ಬಿನಾ ಜಿಯಾ ಜಾಯೆ ನಾ
ನನ್ನ ಅನುವಾದ :
ನಿನ್ನ ವಿನಾ ಇರಲಾಗದು
ಇರಲಾಗದು ನಿನ್ನ ವಿನಾ
ಉಸಿರಲ್ಲಿ ಉಸಿರು ಆಡದು
206) ಮೂಲ ಹಾಡು - ನಾರೀ ನಾರೀ (ಅರಾಬಿಕ್ ಹಾಡು )
ನನ್ನ ಅನುವಾದ :
ನಾರೀ ನಾರೀ, ಯಾರು ನಿಂಗೆ ಮೇಲು ?
ನಾರೀ ನಾರೀ, ಮರುಳು ನಿಂಗೆ ನಾನು!
207) ಮೂಲ ಹಾಡು - ಮುಝೆ ಕಿಸೀಸೆ ಪ್ಯಾರ ಹೋ ಗಯಾ
ನನ್ನ ಅನುವಾದ :
ಓ ಯಾರಲ್ಲೋ ನಂಗೆ ಪ್ರೀತಿ ಆಯಿತು
ಪ್ರೀತಿ ಆಯಿತು ಬದುಕು ಒಂದು ರೀತಿ ಆಯಿತು!
208) ಮೂಲ ಹಾಡು - ತುಮ್ ಸೆ ದೂರ ರಹಕೆ
ನನ್ನ ಅನುವಾದ
ನಿನ್ನಿಂದ ದೂರ ಇದ್ದು
ನಾನು ಅರಿತೆ ಪ್ರೇಮವೇನು?
ನಾನು ಅರಿತೆ ಗೆಳೆಯ ಯಾರು
209) ಮೂಲ ಹಾಡು - ಪಪ್ಪಾ, ಜಲ್ದಿ ಆ ಜಾನಾ
ನನ್ನ ಅನುವಾದ :
ಏಳು ಸಮುದ್ರ ದಾಟಿ
ಗೊಂಬೆಗಳ ಪೇಟೆಯಿಂದ
ಒಳ್ಳೇ ಬೊಂಬೆ ತರಬೇಕು
ಬೊಂಬೆ ತರದಿದ್ರು ಅಡ್ಡಿಯಿಲ್ಲ
ಅಪ್ಪ ಬೇಗ ಬಂದುಬಿಡು
210) ಮೂಲ ಹಾಡು - ಹಂ ತೇರಿ ಮೊಹಬ್ಬತ ಮೇ
ನನ್ನ ಅನುವಾದ :
ನಾ ನಿನ್ನ ಪ್ರೀತಿಯಲಿ
ಇಷ್ಟೊಂದು ಮರುಳಾದೆ
ಹುಚ್ಚರು ಕೂಡ ನನಗೆ ಈಗ
ಹುಚ್ಚ ಅಂತಾರೆ!
211) ಮೂಲ ಹಾಡು - ಮೇರೆ ಜೈಸೆ ಬನ ಜಾವೋಗೆ
ನನ್ನ ಅನುವಾದ :
ಆಗುವೆ ನೀ ನನ ಹಾಗೆ
ಪ್ರೀತಿ ಉದಿಸಲು ನಿನ್ನಲ್ಲಿ
ಗೋಡೆಯ ಜತೆಗೆ ಹೊಡೆಯುವೆ ಡಿಕ್ಕಿ
ಪ್ರೀತಿ ಉದಿಸಲು ನಿನ್ನಲ್ಲಿ
ಸಹಿಸಿಕೊಳ್ಳುವಿ ಎಲ್ಲವನು
ಮಾಡಿಕೊಳ್ಳುವಿ ಹರಕೆಗಳ
ಕಟ್ಟಿಸಿಕೊಳ್ಳುವಿ ತಾಯಿತವ
ಪ್ರೀತಿ ಉದಿಸಲು ನಿನ್ನಲ್ಲಿ
ಅಲೆಯುವೆ ನೀ ಒಬ್ಬಂಟಿ
ಮರೆತೇ ಬಿಡುವಿ ಜಗವನ್ನೇ
ಬೆದರುವೆ ನೀ ಕನ್ನಡಿಗೂ
ಪ್ರೀತಿ ಉದಿಸಲು ನಿನ್ನಲ್ಲಿ
ಸೂರ್ಯನು ಎಲ್ಲೋ ಕಳೆದು ಹೋಗಲು
ಚಂದಿರ ಕೂಡ ಕಾಣೆ ಆಗಲು
ಮನೆಗೆ ನೀನು ಮರಳುವೆ ತಡವಾಗಿ
ಪ್ರೀತಿ ಉದಿಸಲು ನಿನ್ನಲ್ಲಿ
ಹೆಚ್ಚಾಗುವುದು ಬೇಸರವು
ಯಾರದೋ ನೆನಪು ಕಾಡುವುದು
ಹಾಡುವೆ ನೀ ನನ ಹಾಡು
ಪ್ರೀತಿ ಉದಿಸಲು ನಿನ್ನಲ್ಲಿ
212) ಮೂಲ ಹಾಡು - ದೀವಾರೋ ಸೆ ಮಿಲಕರ್ ರೋನಾ
ನನ್ನ ಅನುವಾದ :
ಮರುಳರ ಜತೆಗೆ ಅಲೆವುದು ನನಗೆ ಇಷ್ಟ ಆಗುತಿದೆ
ನನಗೂ ಹುಚ್ಚು ಹಿಡಿವುದು ಏನೋ ಅಂತ ಅನಿಸುತಿದೆ
213) ಮೂಲ ಹಾಡು - ಹಸಕೆ ಬೋಲಾ ಕರೋ ಬುಲಾಯಾ ಕರೋ
ನನ್ನ ಅನುವಾದ :
ನಗುತಾ ಮಾತಾಡು ನೀ ಕರೆಯುತಲೂ ಇರು ನೀ
ನಿಂದೇನೇ ಈ ಮನೆಯು ಬಂದು ಹೋಗುತಾ ಇರು ನೀ
ಮುಗುಳುನಗೆಯು ಸೌಂದರ್ಯದಾಭರಣ
ಮುಗುಳುನಗೆಯ ಮರೆಯದೇ ಇರು ನೀ
214) ಮೂಲ ಹಾಡು - ಕಯೀ ದಿನ್ ಸೆ ಮುಝೆ
ನನ್ನ ಅನುವಾದ:
ಇತ್ತೀಚೆ
ಯಾರೋ ಕನಸಲ್ಲಿ
ಬರುತಾನೇ ಇದ್ದಾರೆ
ನನ್ನನ್ನ ಕರೀತಾರೆ
ಓ ಅದು ನೀನೆ
ನೀನೆ
ನೀನೇನೆ