ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 29

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 29

255) ಮೂಲ ಹಾಡು : ಟಿಪ ಟಿಪ ಬರಸಾ ಪಾನೀ

ನನ್ನ ಅನುವಾದ : 
ಟಪ ಟಪ ಬೀಳಲು ಹನಿ ತಾನು
ನೀರಿಗೂ ಬಿದ್ದಿತು ಬೆಂಕಿ
ಹೃದಯಕೆ ಬಿದ್ದಿತು ಬೆಂಕಿಯು ನೋಡು
ಕಾಡಿತು ನಿನ್ನಯ ನೆನಪು

256) ಮೂಲ ಹಾಡು : ಮುಹಬ್ಬತ್ ಕೀ ನಹೀ

ನನ್ನ ಅನುವಾದ : 
ನಾ ಪ್ರೀತಿ ಮಾಡಲಿಲ್ಲ
ಪ್ರೀತಿ ಆಗೇ ಬಿಡ್ತು

257) ಮೂಲ ಹಾಡು : ತುಮ ಬಿನ್ ಜೀವನ್ ಕೈಸೇ ಬೀತಾ

ನನ್ನ ಅನುವಾದ :
ನಿನ್ನ ವಿನಾ ಕಳೆಯಿತು ಹೇಗೆನ್ನ  ಬಾಳು
ಎನ್ನ ಹೃದಯವ ನೀ ಕೇಳು

258) ಮೂಲ ಹಾಡು : ಆಸಮಾಂ ಪೆ ಹೈ ಖುದಾ

ನನ್ನ ಅನುವಾದ : 
ಬಾನಿನಲ್ಲಿ ದೇವನು
ಭೂಮಿ ಮೇಲೆ ನಾವ್ಗಳು
ಆತ ಇತ್ತೀಚೆಗೆ ಈ ಕಡೆ
ಕಡಿಮೆ ನೋಡುವ

259) ಮೂಲ ಹಾಡು : ಚಾಂದ್ ಸೀ ಮೆಹಬೂಬಾ ರೋ

ನನ್ನ ಅನುವಾದ : 
ಚಂದ್ರನಂತೆ ನನ್ನೋಳು ಇರ್ಲಿ
ಅಂತ ನಾನು ಯೋಚಿಸಿದ್ದೆ
ಹೌದು ಹಾಗೇನೆ ಇದ್ದೀಯಾ
ನಾನು ಯೋಚಿಸಿದ್ ಹಾಗೇನೆ

260) ಮೂಲ ಹಾಡು : ಐಸೆ ತೋ ನ ದೇಖೋ

ನನ್ನ ಅನುವಾದ : 
ನೋಡಬೇಡ ಹೀಗೆ ನನ್ನ
ಏರುವುದು ನಶೆ ನಂಗೆ

261) ಮೂಲ ಹಾಡು : ಸಜ ನಹೀ ಬಾರಾತ ತೋ ಕ್ಯಾ

ನನ್ನ ಅನುವಾದ : 
ಬೀಳದೆ ಇದ್ದರೂ ಅಕ್ಷತೆಯು
ತುಳಿಯದೇ ಇದ್ದರೂ ಸಪ್ತಪದಿ
ತಿಳಿದುಕೋ ನಾವು ಸತಿಪತಿ
ತಿಳಿದುಕೋ ನಾವು ಸತಿಪತಿ

262) ಮೂಲ ಹಾಡು : ನ ಮಿಲೋ ಹಂ ಸೆ ಜ್ಯಾದಾ

ನನ್ನ ಅನುವಾದ : 
ಭೇಟಿಯಾಗಬೇಡ ಬಹಳ
ಪ್ರೀತಿ ಆಗಿ ಬಿಟ್ಟೀತು!

263) ಮೂಲ ಹಾಡು : ಪತಝಡ್ ಸಾವನ್ ಬಸಂತ ಬಹಾರ್

ನನ್ನ ಅನುವಾದ : 
ಋಗ್ವೇದ  ಯಜುರ್ವೇದ ಸಾಮವೇದ ಅಥರ್ವವು
ಇರುವವು ನಾಲ್ಕುವೇದ
ಪ್ರೇಮವು ಐದನೇ ವೇದವು
ಪ್ರೇಮವು ಐದನೇ ವೇದವು

264) ಮೂಲ ಹಾಡು :ತುಮ್ ಬಿನ್ ಕ್ಯಾ ಹೈ ಜೀನಾ

ನನ್ನ ಅನುವಾದ : 
ನೀನಿಲ್ಲದೆ ಬದುಕು ಹೇಗೆ
ಬದುಕು ಹೇಗೆ
ನೀನಿಲ್ಲದೆ ಬದುಕುವುದು ಹೇಗೆ
ಬದುಕುವುದು ಹೇಗೆ ನೀನಿಲ್ಲದೆ ?

Rating
Average: 4 (1 vote)